ದಿನಕ್ಕೆ 16 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ: ಪ್ರಿಯಾಂಕಾ ಚೋಪ್ರಾ
ಹಣ ಮತ್ತು ಖ್ಯಾತಿಗಾಗಿ ದಿನದ 16 ತಾಸುಗಳಷ್ಟು ಸಮಯವನ್ನು ಕೆಲಸಕ್ಕಾಗಿಯೇ ಮೀಸಲಿಡುತ್ತಿದ್ದೇನೆ. ಜೀವನದಲ್ಲಿ...

ಮುಂಬೈ: ಹಣ ಮತ್ತು ಖ್ಯಾತಿಗಾಗಿ ದಿನದ 16 ತಾಸುಗಳಷ್ಟು ಸಮಯವನ್ನು ಕೆಲಸಕ್ಕಾಗಿಯೇ ಮೀಸಲಿಡುತ್ತಿದ್ದೇನೆ. ಜೀವನದಲ್ಲಿ ಮನರಂಜನೆ ಪಡೆಯಲು ಸಮಯವೇ ಇಲ್ಲ ಎಂದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿಯಾಗಿರುವ ಪ್ರಿಯಾಂಕಾ ಚೋಪ್ರಾ ಹೆಸರು ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಜನಪ್ರಿಯ. ಅಮೆರಿಕದ ಜನಪ್ರಿಯ ಟಿವಿ ಶೋ ಕ್ವಾಂಟಿಕೋ ಮೂಲಕ ಇನ್ನಷ್ಟು ಹೆಸರು ಗಳಿಸಿದ್ದಾರೆ.
ಯಶಸ್ಸು ಒಂದು ತಾಣವಲ್ಲ. ಯಶಸ್ಸು ಒಂದು ಪ್ರಯಾಣ. ನೀವು ಸತತವಾಗಿ ಯಶಸ್ಸು ಗಳಿಸುತ್ತಾ ಹೋದರೆ ಜೀವನದಲ್ಲಿ ಯಶಸ್ವಿ ಎಂದು ಪರಿಗಣಿಸಬಹುದು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಜೀವನದಲ್ಲಿ ಹಣ ಮುಖ್ಯವಾಗುತ್ತದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಪ್ರಿಯಾಂಕಾ, ನಾನು ಶ್ರಮಪಟ್ಟು ಕೆಲಸ ಮಾಡಿ ಹಣವನ್ನು ಸಂಪಾದಿಸುತ್ತೇನೆ.ಕೆಲಸದ ಒತ್ತಡದಿಂದ ರಾತ್ರಿ ಕೂಡ ಸರಿಯಾಗಿ ನಿದ್ರಿಸುವುದಿಲ್ಲವಂತೆ. ವಾರಾಂತ್ಯ ಪಾರ್ಟಿ,ದೀಪಾವಳಿ, ಬರ್ತ್‌ಡೇ ಆಚರಿಸಿಯೇ ಇಲ್ಲ' ಎಂದಿದ್ದಾರೆ.
ತಮ್ಮ ಮುಂದಿನ ಹೆಜ್ಜೆ ಹಾಲಿವುಡ್ಡಾ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ 34 ವರ್ಷದ ಈ ನಟಿ, ಕಳೆದ 5 ವರ್ಷಗಳಿಂದ ನನಗೆ ಅಮೆರಿಕದಲ್ಲಿ ಏಜೆಂಟ್ ವೊಬ್ಬರ ಸಂಪರ್ಕವಿದೆ. ಆದರೆ ನನ್ನ ಸ್ವಂತ ಶಕ್ತಿಯಿಂದ ನಾನು ಗುರುತಿಸಿಕೊಳ್ಳಲು ಇಚ್ಚಿಸುತ್ತೇನೆ. ಬಾಲಿವುಡ್ ನಲ್ಲಿ ನನಗೊಂದು ಸ್ಥಾನವಿದೆ. ಹಾಲಿವುಡ್ ನಲ್ಲಿ ನನಗೆ ತುಂಬಾ ಖುಷಿ ಕೊಡುವ ಪಾತ್ರ ಸಿಕ್ಕರೆ ಮಾಡುತ್ತೇನೆ ಎನ್ನುತ್ತಾರೆ.
ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ ಸ್ನೇಹಿತೆಯಾಗಿದ್ದು ತಾವು ಆಗಾಗ ಭೇಟಿಯಾಗುತ್ತಿರುತ್ತೇವೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


