ಬಾಲಿವುಡ್

ಭಾರತೀಯ ಶಾಸ್ತ್ರೀಯ ನೃತ್ಯ ಕಲಿಯುವಾಸೆ: ಕರೀನ ಕಪೂರ್

ಕಥಕ್ ಅಥವಾ ಭರತನಾಟ್ಯದಲ್ಲಿ ತರಬೇತಿ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಬಾಲಿವುಡ್ ಸೂಪರ್ ನಟಿ ಕರೀನಾ ಕಪೂರ್.

ಭಾರತೀಯ ಶಾಸ್ತ್ರೀಯ ನೃತ್ಯ ಕಲಿಯುವಾಸೆ: ಕರೀನ ಕಪೂರ್
ನಟಿ ಕರೀನಾ ಕಪೂರ್
Published On :

ನವದೆಹಲಿ: ಕಥಕ್ ಅಥವಾ ಭರತನಾಟ್ಯದಲ್ಲಿ ತರಬೇತಿ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಬಾಲಿವುಡ್ ಸೂಪರ್ ನಟಿ ಕರೀನಾ ಕಪೂರ್.

"ಮುಂದೊಂದು ದಿನ ಕಥಕ್ ಅಥವಾ ಭರತನಾಟ್ಯವನ್ನು ವೃತ್ತಿಪರರಿಂದ ಕಲಿಯುವಾಸೆ. ಸದ್ಯಕ್ಕೆ ಬಹಳ ಕೆಲಸ ಇದೆ ಆದರೆ ನನ್ನ ಬಹುದಿನದ ಆಸೆಯನ್ನು ಪೂರೈಸಿಕೊಳ್ಳಬೇಕು" ಎಂದು ಕರೀನಾ ಹೇಳಿದ್ದಾರೆ.

"ಶಾಸ್ತ್ರೀಯ ನೃತ್ಯದ ತರಬೇತಿ ಪಡೆದಿರುವ ನನ್ನ ಅಕ್ಕ (ಕರಿಷ್ಮಾ ಕಪೂರ್) ನನಗೆ ಸ್ಫೂರ್ತಿ. ನಾನು ಸಣ್ಣವಳಿರಬೇಕಾದರೆ, ನನ್ನಕ್ಕ ನೃತ್ಯ ಮಾಡುತ್ತಿದ್ದನ್ನು ನಕಲು ಮಾಡಿ ನಾನೂ ಕೂಡ ಕನ್ನಡಿ ಮುಂದೆ ನೃತ್ಯ ಮಾಡುತ್ತಿದ್ದೆ" ಎಂದು ಭಜರಂಜಿ ಭಾಯಿಜಾನ್ ನಟಿ ತಿಳಿಸಿದ್ದಾರೆ.

ಸಾಂಪ್ರದಾಯಿಕ ಉಡುಗೆತೊಡುಗೆಗಳಲ್ಲಿ ಭಾರತೀಯ ಮಹಿಳೆಯರು ಸುಂದರವಾಗಿ ಕಾಣಿಸುತ್ತಾರೆ ಎನ್ನುವ ಅವರು "ಫ್ಯಾಶನ್ ವಿಷಯಕ್ಕೆ ಬಂದಾಗ ನಾವು ಪಾಶ್ಚಿಮಾತ್ಯ ಉಡುಗೆಗಗಳ ಮೊರೆ ಹೋಗುತ್ತೇವೆ, ಆದರೆ ಸರಳ ಸೀರೆ ಮಹಿಳೆಯನ್ನು ಸುಲಭವಾಗಿ ಸುಂದರವಾಗಿ ಕಾಣಿಸುವಂತೆ ಮಾಡುತ್ತದೆ" ಎಂದಿದ್ದಾರೆ.

ಆರ್ ಭಾಲ್ಕಿ ಅವರ 'ಕಿ ಅಂಡ್ ಕ' ದಲ್ಲಿ ನಟಿಸುತ್ತಿರುವ ನಟಿ "ನನ್ನ ಭಾರತೀಯ ಅವತಾರವನ್ನು ಬಹಳಷ್ಟು ಅಭಿಮಾನಿಗಳು ಇಷ್ಟ ಪಡುತ್ತಾರೆ. ಮುಖ್ಯ ಕಾರ್ಯಕ್ರಮಗಳಿಗೆ ಅನಾರ್ಕಲಿ ಅಥವ್ ಸೀರೆ ಉಡಲು ನನಗೆ ಇಷ್ಟ" ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.