ಬಾಲಿವುಡ್

ಮೊದಲ ವಾರದಲ್ಲೇ ೭೨.೬ ಕೋಟಿ ಬಾಚಿದ 'ಬ್ರದರ್ಸ್'

ಬಾಲಿವುಡ್ ಆಕ್ಷನ್ ಸಿನೆಮಾ 'ಬ್ರದರ್ಸ್' ಮೊದಲ ವಾರದಲ್ಲೇ ೭೦ ಕೋಟಿಗಿಂತಲೂ ಹೆಚ್ಚಿನ ಗಳಿಕೆ ಕಂಡು ೧೦೦ ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಹಾಕಿದೆ.

ಮೊದಲ ವಾರದಲ್ಲೇ ೭೨.೬ ಕೋಟಿ ಬಾಚಿದ 'ಬ್ರದರ್ಸ್'
ಬ್ರದರ್ಸ್ ಸಿನೆಮಾದ ಭಿತ್ತಿಚಿತ್ರ
Published On :

ನವದೆಹಲಿ: ಬಾಲಿವುಡ್ ಆಕ್ಷನ್ ಸಿನೆಮಾ 'ಬ್ರದರ್ಸ್' ಮೊದಲ ವಾರದಲ್ಲೇ ೭೦ ಕೋಟಿಗಿಂತಲೂ ಹೆಚ್ಚಿನ ಗಳಿಕೆ ಕಂಡು ೧೦೦ ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಹಾಕಿದೆ.

ಕರಣ್ ಮಲ್ಹೋತ್ರ ನಿರ್ದೇಶನದ ಈ ಸಿನೆಮಾದಲ್ಲಿ ಅಕ್ಷಯ್ ಕುಮಾರ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಕಾದಾಡುವ ಸಹೋದರರಾಗಿ ಕಾಣಿಸಿಕೊಂಡಿದ್ದಾರೆ.

"ಈ ಗಳಿಗೆ ನಮ್ಮ ಸಿನೆಮಾಗಳನ್ನು ಜನ ವೀಕ್ಷಿಸುತ್ತಿರುವುದನ್ನು ತಿಳಿಸುತ್ತದೆ. ಈ ಗಳಿಕೆ ಇನ್ನೂ ಹೆಚ್ಚಾದರೆ ನಾವು ನಮ್ಮ ಪ್ರದರ್ಶನವನ್ನು ಉತ್ತಮಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ" ಎಂದು ನಟ ಸಿದ್ಧಾರ್ಥ್ ತಿಳಿಸಿದ್ದರು.

ಫಾಕ್ಸ್ ಸ್ಟಾರ್ ಸ್ಟುಡಿಯೋ ಅರ್ಪಿಸಿರುವ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿರುವ 'ಬ್ರದರ್ಸ್' ಸಿನೆಮಾದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಜಾಕಿ ಶ್ರಾಫ್ ಕೂಡ ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.