ರಾಧೇ ಮಾ ಗೆ ಸುಭಾಷ್ ಘಾಯ್, ರಾಖಿ ಸಾವಂತ್ ಬೆಂಬಲ

ಕಷ್ಟದಲ್ಲಿ ಸಿಲುಕಿರುವ ಭಕ್ತರಿಗೆ ದೇವರು ಸಹಾಯ ಮಾಡುತ್ತಾನೆ ಎಂಬ ನಂಬಿಕೆ ಸಹಜ. ಆದರೆ ಈ ದೇವಮಾನವರ ಪ್ರಕರಣದಲ್ಲಿ ಇದು ಸಂಪೂರ್ಣ ತದ್ವಿರುದ್ಧ. ದೇವಮಾನವರು ಕಷ್ಟಕ್ಕೆ ಸಿಲುಕಿಕೊಂದರೆ ಭಕ್ತರೇ ಕಾಪಾಡಬೇಕು. ಸದ್ಯ ಸ್ವಯಂ ಘೋಷಿತ ದೇವಮಹಿಳೆ ರಾಧೇ ಮಾ ವಿಷಯದಲ್ಲೂ ಹೀಗೇ ಆಗಿದೆ.
ಖ್ಯಾತ ಚಲನಚಿತ್ರ ನಿರ್ದೇಶಕ ಸುಭಾಷ್ ಘಾಯ್ ಹಾಗೂ ರಾಖಿ ಸಾವಂತ್, ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಹಿಳೆ ರಾಧೇ ಮಾ ಬೆಂಬಲಕ್ಕೆ ಧಾವಿಸಿದ್ದಾರೆ. ಫೆಸ್ ಬುಕ್ ನಲ್ಲಿ ರಾಧೇ ಮಾ ಗೆ ಬೆಂಬಲ ಸೂಚಿಸಿರುವ ಸುಭಾಷ್ ಘಾಯ್ "ನಾನು ಮತ್ತು ನನ್ನ ಪತ್ನಿ ಮುಕ್ತಾ ಕಳೆದ ವರ್ಷದಿಂದ ರಾಧೇ ಮಾ ಭಕ್ತರಾಗಿದ್ದು ಅವರ ಆಶೀರ್ವಾದ ಪಡೆಯಲು ತೆರಳುತ್ತಿದ್ದೆವು ಎಂದು ಹೇಳಿದ್ದಾರೆ.
ಇನ್ನು ರಾಖಿ ಸಾವಂತ್ ಕೂಡ ರಾಧೇ ಮಾ ಅವರಿಗೆ ಬೆಂಬಲಿಸಿದ್ದು, ರಾಧೇ ಮಾ ಸುತ್ತ ವಿಭಿನ್ನವಾದ ದಿವ್ಯಕಾಂತಿ ಇದ್ದು, ಆಕೆ ಧನಾತ್ಮಕ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ನನಗೆ ಶಕ್ತಿ ತುಂಬುವ ರಾಧೇ ಮಾ ನ್ನು ಗೌರವಿಸುತ್ತೇನೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ಜಾಹೀರಾತು ಚಿತ್ರನಿರ್ದೇಶಕ ಪ್ರಹ್ಲಾದ್ ಕಕ್ಕರ್ ಕೂಡಾ ರಾಧೇ ಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಧೇ ಮಾ ಅವರ ವಿಭಿನ್ನ ಶೈಲಿಯೇ ಅವರನ್ನು ವಿಶಿಷ್ಟ ದೇವಮಹಿಳೆಯನ್ನಾಗಿಸಿದೆ ಎಂದು ಹೇಳಿದ್ದಾರೆ. ಮಿನಿಸ್ಕರ್ಟ್ ಧರಿಸಿ ಸುಂದರವಾಗಿ ಕಾಣುವುದು ಎಲ್ಲಾ ಮಹಿಳೆಯರ ಹಕ್ಕು ಎಂದು ಹೇಳಿರುವ ಡಾಲಿ ಬಿಂದ್ರಾ ಸಹ ರಾಧೇ ಮಾ ಅವರನ್ನು ಬೆಂಬಲಿಸಿದ್ದಾರೆ. ಆದರೆ ರಿಷಿ ಕಪೂರ್ ಮಾತ್ರ ಟ್ವಿಟರ್ ನಲ್ಲಿ ರಾಧೇ ಮಾ ಬಗ್ಗೆ ವ್ಯಂಗ್ಯವಾಗಿ ಕಾಮೆಂಟ್ ಮಾಡಿ ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


