ಬಾಲಿವುಡ್

'ಭಜರಂಗಿ ಭಾಯಿಜಾನ್' ವಿಶ್ವದಾದ್ಯಂತ 500 ಕೋಟಿ ಗಳಿಕೆ

ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರ ಬಾಲಿವುಡ್ ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ವಿಶ್ವದಾದ್ಯಂತ ಬರೋಬ್ಬರಿ 500 ಕೋಟಿ ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ...

'ಭಜರಂಗಿ ಭಾಯಿಜಾನ್' ವಿಶ್ವದಾದ್ಯಂತ 500 ಕೋಟಿ ಗಳಿಕೆ
ಭಜರಂಗಿ ಭಾಯಿಜಾನ್
Published On :
ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರ ಬಾಲಿವುಡ್ ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ವಿಶ್ವದಾದ್ಯಂತ ಬರೋಬ್ಬರಿ 500 ಕೋಟಿ ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ. 
ಕಬೀರ್ ಖಾನ್ ನಿರ್ದೇಶನದ ಭಜರಂಗಿ ಭಾಯಿಜಾನ್ ಚಿತ್ರವು ಜುಲೈ 17ರಂದು ತೆರೆಕಂಡಿತ್ತು. ಭಾರತದಲ್ಲೇ 300 ಕೋಟಿ ದೋಚಿದ್ದು, ವಿಶ್ವದಾದ್ಯಂತ ಒಟ್ಟು ಗಳಿಕೆ 500 ಕೋಟಿ ಗಳಿಸಿದೆ ಎಂದು ಇರೋಸ್ ಸಂಸ್ಥೆ ಹೇಳಿದೆ. 
ಬಿಡುಗಡೆಯಾದ ಮೊದಲ ವಾರದಲ್ಲೇ ಬಾಕ್ಸಾಫೀಸ್'ನಲ್ಲಿ 100 ಕೋಟಿ ಗಳಿಸಿ ಬಾಲಿವುಡ್'ನಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಅಲ್ಲದೇ ಕೇವಲ ಐದು ದಿನಗಳ ಅಂತರದಲ್ಲಿ 150 ಕೋಟಿ ಕ್ಲಬ್ ಸೇರಿದ ಚಿತ್ರ ಎಂಬ ಹೆಗ್ಗಳಿಕೆ ಭಜರಂಗಿ ಭಾಯಿಜಾನ್ ಪಾತ್ರವಾಗಿದೆ ಎಂದು ಇರೋಸ್ ಸಂಸ್ಥೆ ತಿಳಿಸಿದೆ.
2015ರ ಹಿಟ್ ಚಿತ್ರಗಳಾದ ಅನುಷ್ಕಾ ಶರ್ಮಾ ಅಭಿನಯದ NH10 ಹಾಗೂ ಕಂಗನಾ- ಮಾಧವನ್ ಜೋಡಿಯ ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರಗಳನ್ನು ಇರೋಸ್ ಸಂಸ್ಥೆ ವಿಶ್ವದಾದ್ಯಂತ ರಿಲೀಸ್ ಮಾಡಿ ಬಾಕ್ಸಾಫೀಸ್ ನಲ್ಲಿ ಬಂಪರ್ ಕಲೆಕ್ಷನ್ ಮಾಡಿಕೊಂಡಿತ್ತು. ಆದರೆ ಭಜರಂಗಿಯ ಕಲೆಕ್ಷನ್'ನಿಂದ ಇರೋಸ್ ಸಂಸ್ಥೆಯ ವಿದೇಶಿ ಶೇರುಗಳು ಮತ್ತಷ್ಟು ಹೆಚ್ಚಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.