ಬಾಲಿವುಡ್

ಕಂಗನಾಗೆ ಬೆಕ್ಕಿನ ನಡಿಗೆ ಇಷ್ಟವಂತೆ

`ಯಾವ್ಯಾವುದೋ ವಿನ್ಯಾಸಕರ ಉಡುಪನ್ನು ತೊಟ್ಟು ರ್ಯಾಂಪ್ ಮೇಲೆ ನಡೆಯವುದು ನನಗೆ ಒಗ್ಗುವುದಿಲ್ಲ....

ಕಂಗನಾಗೆ ಬೆಕ್ಕಿನ ನಡಿಗೆ ಇಷ್ಟವಂತೆ
ಕಂಗನಾ ರಾಣಾವತ್
Published On :

ತೊಟ್ಟ ಬಟ್ಟೆ, ಮಾಡಿಕೊಂಡ ಕೇಶ ವಿನ್ಯಾಸ ಎಲ್ಲವೂ ಅಭಿಮಾನಿಗಳ ಟ್ರೆಂಡ್ ಆಗಿ ಬದಲಾಗಿಬಿಡುವಷ್ಟು ಜನಪ್ರಿಯಳಾಗಿದ್ದಾಳೆ ನಟಿ ಕಂಗನಾ. ಕಂಗನಾ ಫ್ಯಾಷನ್ ಲೋಕದ ಹಿನ್ನೆಲೆಯಿಂದ ಬಂದು, ಬಾಲಿವುಡ್‍ನಲ್ಲಿ ಉತ್ತುಂಗಕ್ಕೇರಿದವರು.

ಇಂದಿಗೂ ಆಗೀಗ ಕೆಂಪುಹಾಸಿನ ಮೇಲೆ ಬೆಕ್ಕಿನ ನಡಿಗೆ ಅವರಿಗೆ ಇಷ್ಟವಾದ ಕೆಲಸ. ಸಿನಿಮಾಗಳ ಆಯ್ಕೆಯಲ್ಲಿ ಮಾತ್ರವಲ್ಲ, ಫ್ಯಾಷನ್ ಷೋಗಳ ಆಯ್ಕೆಯಲ್ಲಿಯೂ ಕಂಗನಾ ಚೂಸಿಯಂತೆ. `ಯಾವ್ಯಾವುದೋ ವಿನ್ಯಾಸಕರ ಉಡುಪನ್ನು ತೊಟ್ಟು ರ್ಯಾಂಪ್ ಮೇಲೆ ನಡೆಯವುದು ನನಗೆ ಒಗ್ಗುವುದಿಲ್ಲ. ಒಂದು ಫ್ಯಾಷನ್ ಷೋ ಒಪ್ಪಿಕೊಳ್ಳುವಾಗ ನಾನು ವಿನ್ಯಾಸಕರು ಮತ್ತು ಅವರ ವಸ್ತ್ರ ಸಂಗ್ರಹವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇನೆ.

ಅವು ನನಗೆ ಇಷ್ಟವಾದರೆ ಮಾತ್ರ ಆ ಫ್ಯಾಷನ್ ಷೋ ಒಪ್ಪಿಕೊಳ್ಳುತ್ತೇನೆ' ಎನ್ನುತ್ತಾರೆ ಕಂಗನಾ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಫ್ಯಾಷನ್ ಷೋ ಒಂದರಲ್ಲಿ ಮಾನವ್ ಗಂಗ್ವಾನಿ ವಿನ್ಯಾಸದ ಉಡುಗೆ ತೊಟ್ಟು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ ಕಂಗನಾಗೆ ವಿಸ್ತಾರವಾಗಿ ಇಳಿಬಿಡುವ ಬಟ್ಟೆಗಳೆಂದರೆ ತುಂಬಾ ಇಷ್ಟವಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.