ಬಾಲಿವುಡ್ ನ ಮೊದಲ ಮೆಟ್ಟಿಲೇರಲಿರುವ ರಾಯ್ ಲಕ್ಷ್ಮಿ
ದಕ್ಷಿಣದಲ್ಲೇ ಸುತ್ತು ಹೊಡೆಯುತ್ತಿದ್ದ ಬೆಳಗಾವಿ ಚೆಲುವೆ ಲಕ್ಷ್ಮಿ ರೈ ಇದೀಗ ಬಾಲಿವುಡ್‍ಗೆ ನೆಗೆದಿದ್ದಾರೆ. ತಮ್ಮ ಹೆಸರನ್ನು ರಾಯ್ ಲಕ್ಷ್ಮಿ ಅಂತ ಹಿಂದುಮುಂದು ಮಾಡಿಕೊಂಡಿದ್ದಾರೆ...

ದಕ್ಷಿಣದಲ್ಲೇ ಸುತ್ತು ಹೊಡೆಯುತ್ತಿದ್ದ ಬೆಳಗಾವಿ ಚೆಲುವೆ ಲಕ್ಷ್ಮಿ ರೈ ಇದೀಗ ಬಾಲಿವುಡ್‍ಗೆ ನೆಗೆದಿದ್ದಾರೆ. ತಮ್ಮ ಹೆಸರನ್ನು ರಾಯ್ ಲಕ್ಷ್ಮಿ ಅಂತ ಹಿಂದುಮುಂದು ಮಾಡಿಕೊಂಡಿದ್ದಾರೆ.
ತಮಿಳಿನ ಎ. ಆರ್. ಮುರುಗದಾಸ್ ಅವರ `ಅಕಿರಾ' ಚಿತ್ರದಲ್ಲಿ ರಾಯ್ ಲಕ್ಷ್ಮಿ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರಂತೆ. ಪೂರ್ಣ ಪ್ರಮಾಣದ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಇದ್ದು, ಲಕ್ಷ್ಮೀ ರಾಯ್ ಅತಿಥಿ ಪಾತ್ರಕ್ಕೆ ಸೀಮಿತವಾಗಿದ್ದಾರೆ. ಈ ಬಗ್ಗೆ ಲಕ್ಷ್ಮಿ ರೈ ಅವರಿಗೆ ಬೇಸರವೇನೂ ಇಲ್ಲವಂತೆ. ಈ ಚಿತ್ರದ ಅತಿಥಿ ಪಾತ್ರದ ಮೂಲಕ ತಾನು ಬಾಲಿವುಡ್‍ಗೆ ಅಡಿಯಿಡುತ್ತಿದ್ದೇನೆ. ಇದು ಬಹಳ ಗಮನಾರ್ಹ ಪಾತ್ರ. ಹಾಗಾಗಿಯೇ ಈ ಪಾತ್ರವನ್ನು ಅಂಗೀಕರಿಸಿದೆ ಎಂದಿದ್ದಾರೆ.
ಮುರುಗದಾಸ್ ಅವರ ಚಿತ್ರಗಳಲ್ಲಿ ಅಬಿsನಯಿಸಬೇಕು ಎಂಬುದು ಪ್ರತಿಯೊಬ್ಬರ ಕನಸು. ಪಾತ್ರದ ಬಗ್ಗೆ ಅವರು ಹೇಳಿದಾಗ ನಾನು ನೋ ಹೇಳಲು ಸಾಧ್ಯವಾಗಲೇ ಇಲ್ಲ ಎನ್ನುತ್ತಾರೆ ಲಕ್ಷ್ಮಿ. ರಾಯ್ ಲಕ್ಷ್ಮಿ ಅವರ ಪಾಲಿಗೆ `ಅಕಿರಾ' ಮೊದಲ ಮೆಟ್ಟಿಲು. ಮುಂದೆ ಈ ಚಿತ್ರ ಅವರಿಗೆ ಬಾಲಿವುಡ್‍ನಲ್ಲಿ ಒಳ್ಳೆಯ ಆಫರ್‍ಗಳನ್ನು ತಂದುಕೊಟ್ಟರೂ ಅಚ್ಚರಿಯಿಲ್ಲ. ಮೆಟ್ಟಿಲೇರುತ್ತಾ ಸಾಗಲಿ ಎಂಬುದೇ ನಮ್ಮ ಆಶಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


