ಬಾಲಿವುಡ್

ಇದು ಕಂಗನಾ ಚಾಯ್ಸ್

ದೀಪಿಕಾ ಪಡುಕೋಣೆಯ ಮೈ ಚಾಯ್ಸ್ ವಿಡಿಯೋ ಬಗ್ಗೆ ಸಾಮಾಜಿಕ ತಾಣ ಮತ್ತು ಪತ್ರಿಕೆಗಳಲ್ಲಿ ಮಾತ್ರ ಬಿಸಿಗಾಳಿ ಬೀಸಿಲ್ಲ. ಬಾಲಿವುಡ್ ಒಳಗೂ ಇದು ಚರ್ಚೆಗೆ ಗ್ರಾಸವಾಗಿದೆ...

ಇದು ಕಂಗನಾ ಚಾಯ್ಸ್
ಕಂಗನಾ ರನೌತ್
Published On :

ದೀಪಿಕಾ ಪಡುಕೋಣೆಯ ಮೈ ಚಾಯ್ಸ್ ವಿಡಿಯೋ ಬಗ್ಗೆ ಸಾಮಾಜಿಕ ತಾಣ ಮತ್ತು ಪತ್ರಿಕೆಗಳಲ್ಲಿ ಮಾತ್ರ ಬಿಸಿಗಾಳಿ ಬೀಸಿಲ್ಲ. ಬಾಲಿವುಡ್ ಒಳಗೂ ಇದು ಚರ್ಚೆಗೆ ಗ್ರಾಸವಾಗಿದೆ. ಪರ ವಿರೋಧ ಅಭಿಪ್ರಾಯಗಳಲ್ಲಿ ವಿರೋಧಾಭಿಪ್ರಾಯಗಳೇ ಹೆಚ್ಚು ಮಹಿಳಾ ವೋಟ್ ಪಡೆದಿವೆ. ಅಚ್ಚರಿ ಯೆಂದರೆ, ದೀಪಿಕಾಗಿಂತ ಬಿಡುಬೀಸಾಗಿ ನಟಿಸಿದ ನಟಿಯರೆಲ್ಲ ದೀಪಿಕಾ ಚಾಯ್ಸನ್ನು ವಿರೋಧಿಸುತ್ತಿದ್ದಾರೆ.

ಮೊನ್ನೆ ಸೋನಾಕ್ಷಿ ಸಿನ್ಹಾ ವುಮನ್ ಎಂಪವರ್ಮೆಂಟ್‍ಗೂ ಸ್ವೇಚ್ಛಾಚಾರಕ್ಕೂ ವ್ಯತ್ಯಾಸ ಇದೆ ಎಂದು ದೀಪಿಕಾಳ ಪ್ರತಿ ಹೇಳಿಕೆಗೂ ವಿರುದ್ಧದ ಉತ್ತರ ನೀಡಿದ್ದಳು. ಈಗ ರಾಷ್ಟ್ರಪ್ರಶಸ್ತಿ ವಿಜೇತೆ ಕಂಗನಾ ಸರದಿ.

ಸೆಕ್ಸಿಸ್ಟ್ ಆಗೋದ್ರಿಂದ ಮಹಿಳಾ ಸಬಲೀಕರಣ ಆಗಿಬಿಡೋಲ್ಲ ಎಂದು ನೇರವಾಗಿ ದೀಪಿಕಾ ವಿಡಿಯೋವನ್ನು ಟೀಕಿಸಿದ್ದಾಳೆ ಕ್ವೀನ್ ಕಂಗನಾ. ಗಂಡಸರಲ್ಲಿ ಕೀಳರಿಮೆ ಹುಟ್ಟಿಸೋದು ಎಂಪವರ್‍ಮೆಂಟ್ ಅಲ್ಲ. ಸಬಲೀಕರಣ ಅನ್ನೋದು ದೇಹ ಸಂಬಂಧಿ ರೆವಲೂಷನ್ ಅಲ್ಲ. ದಿಢೀರ್ ಆಗುವ ಬದಲಾವಣೆಯೂ ಅಲ್ಲ ಎಂದು ಹೇಳಿರುವ ಕಂಗನಾ, ಇನ್ನು ಇಪ್ಪತ್ತು ವರ್ಷ ಆ ನಿಟ್ಟಿನಲ್ಲಿ ಬಲಗೊಳ್ಳುತ್ತಾ ಹೋದರೆ ನಿಜವಾದ ಸಬಲೀಕರಣ ಸಾಧ್ಯ ಎನ್ನುತ್ತಾಳೆ. ಇದರೊಂದಿಗೆ, ದೀಪಿಕಾ ವಿಡಿಯೋ ಮೂಲಕ ಹೀಗೆ ಜನಾಭಿಪ್ರಾಯಗಳು ಹೊರಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂಬುದು ಆಕೆಯ ಅಭಿಮತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.