ಬಾಲಿವುಡ್ ನಟಿ ಸನ್ನಿ ವಿರುದ್ಧ ಕೇಸ್ ದಾಖಲು
ಏಕ್ ಪಹೆಲೀ ಲೀಲಾ ಚಿತ್ರದ ಪ್ರಮೋಶನ್ ನಲ್ಲಿ ಮುಳುಗಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ವಿರುದ್ದ ಎಫ್‍ಐಆರ್ ದಾಖಲಾಗಿದೆ...

ಏಕ್ ಪಹೇಲಿ ಲೀಲಾ ಚಿತ್ರದ ಪ್ರಮೋಶನ್ ನಲ್ಲಿ ಮುಳುಗಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ವಿರುದ್ದ ಎಫ್‍ಐಆರ್ ದಾಖಲಾಗಿದೆ.
ಬೇರೆ ಯಾವುದೋ ಉದ್ದೇಶಕ್ಕಾಗಿ ಫೈವ್ ಸ್ಟಾರ್ ಹೋಟೆಲ್ ಗೆ ಸನ್ನಿ ಲಿಯೋನ್ ಬಂದಿದ್ದಾಳೆಂದು ತಿಳಿದ ಸಾರ್ವಜನಿಕರು ಅವಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಸನ್ನಿ ಲಿಯೋನ್ ನಟನೆಯ ಏಕ್ ಪಹೆಲೀ ಲೀಲಾ ಚಿತ್ರದ ಬಿಡುಗಡೆಯ ಹಂತದಲ್ಲಿರುವುದರಿಂದ ಚಿತ್ರದ ಪ್ರಮೋಷನ್‍ನನ್ನು ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಆಯೋಜಿಸಲಾಗಿತ್ತು. ಆದರೆ ಕೊನೆ ಹಂತದಲ್ಲಿ ಬೇರೆಡೆ ಸ್ಥಳಾಂತರಿಸಲಾಯಿತು.
ಆದರೆ ಅಲ್ಲಿನ ಜನ ಸನ್ನಿ 'ಬೇರೆ ಉದ್ದೇಶ'ಕ್ಕಾಗಿ ಬಂದಿದ್ದಾಳೆ ಎಂದು ತಿಳಿದು ಅವಳ ಮೇಲೆ ದೂರು ದಾಖಲಿಸಿದ್ದರು. ಸನ್ನಿ ಲಿಯೋನ್ ತಂಡದವರು ಸಿನಿಮಾ ಪ್ರಮೋಷನ್‍ಗೆ ಬಂದಿದ್ದಾಗಿ ಖಚಿತಪಡಿಸಿದ ಮೇಲೆ ಸಾರ್ವಜನಿಕರು ಕೇಸ್ ವಾಪಸ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


