'ಕ್ಯಾಬರೆ'ಯಲ್ಲಿ ಕ್ರಿಕೆಟಿಗ ಶ್ರೀಶಾಂತ್
ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿ ನಿಷೇಧಕ್ಕೊಳಗಾದ ಕ್ರಿಕೆಟಿಗ ಶ್ರೀಶಾಂತ್ ಈಗ ಏನು ಮಾಡುತ್ತಿದ್ದಾರೆ?

ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿ ನಿಷೇಧಕ್ಕೊಳಗಾದ ಕ್ರಿಕೆಟಿಗ ಶ್ರೀಶಾಂತ್ ಈಗ ಏನು ಮಾಡುತ್ತಿದ್ದಾರೆ?
ಉತ್ತರ: ಅವರು 'ಕ್ಯಾಬರೆ'ಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ!
ಹೌದಾ? ಎಂದು ಹುಬ್ಬೇರಿಸಬೇಡಿ. ಕ್ಯಾಬರೆ ಅನ್ನೋದು ಹೊಸ ಚಿತ್ರವೊಂದರ ಹೆಸರು ಅಷ್ಟೇ. ಬೌಲರ್ ಮಾತ್ರವಲ್ಲ ಉತ್ತಮ ಡ್ಯಾನ್ಸರ್ ಕೂಡಾ ಆಗಿರುವ ಶ್ರೀಶಾಂತ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಂದ ಹಾಗೆ ಶ್ರೀಶಾಂತ್‌ನ್ನು ಬಾಲಿವುಡ್‌ಗೆ ಪರಿಚಯಿಸುತ್ತಿರುವವರು ಬೇರೆ ಯಾರೂ ಅಲ್ಲ. ಖ್ಯಾತ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಪುತ್ರಿ ಪೂಜಾ ಭಟ್!
ಪೂಜಾ ಭಟ್ ನಿರ್ಮಿಸುತ್ತಿರುವ 'ಕ್ಯಾಬರೆ' ಹೆಸರಿನ ಚಿತ್ರದಲ್ಲಿ ಶ್ರೀಶಾಂತ್ ಡ್ಯಾನ್ಸರ್ ಸಲಹೆಗಾರನಾಗಿ ಬಣ್ಣ ಹಚ್ಚಲಿದ್ದಾರೆ.
ಪ್ರಸ್ತುತ ಸಿನಿಮಾದಲ್ಲಿ ರಿಚಾ ಚಡ್ಡಾ ಡ್ಯಾನ್ಸರ್ ಆಗಿ ಅಭಿನಯಿಸುತ್ತಿದ್ದು, ಆಕೆಗೊಬ್ಬ ಮಲಯಾಳಿ ಸಲಹೆಗಾರನಿರುತ್ತಾನಂತೆ. ಆ ಮಲಯಾಳಿ ಸಲಹೆಗಾರನಾಗಿ ಶ್ರೀಶಾಂತ್ ನಟಿಸಲಿದ್ದಾರೆ ಎಂದು ಪೂಜಾ ಭಟ್ ಹೇಳಿದ್ದಾರೆ.
ಈ ತಿಂಗಳು ನಾನು ಶ್ರೀಶಾಂತ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ್ದೆ. ಮಲಯಾಳಿ ಡ್ಯಾನ್ಸ್ ಸಲಹೆಗಾರನೊಬ್ಬನ ಪಾತ್ರಕ್ಕಾಗಿ ನಾವು ಸ್ವಲ್ಪ ವಯಸ್ಸಾಗಿರುವ ವ್ಯಕ್ತಿಯ ಹುಡುಕಾಟದಲ್ಲಿದ್ದೆವು. ಆದರೆ ನಾನು ಶ್ರೀಶಾಂತ್‌ನ್ನು ಭೇಟಿ ಮಾಡಿದ ತಕ್ಷಣ, ಈತ ನಮ್ಮ ಪಾತ್ರಕ್ಕೆ ತಕ್ಕ ವ್ಯಕ್ತಿ ಎಂದು ನನಗೆ ಅನಿಸಿತು. ಈ ಪಾತ್ರವು ಅವನ ವ್ಯಕ್ತಿತ್ವಕ್ಕೆ ಹತ್ತಿರವಾಗುವಂತದ್ದು. ಆತನ ಮಲಯಾಳಂ ಉಚ್ಛಾರಣಾ ಶೈಲಿಯನ್ನು ನಾವು ಹಾಗೇ ಬಳಸಿಕೊಳ್ಳಲಿದ್ದೇವೆ. ಆತ ಒಳ್ಳೆಯ ಪರ್ಫಾಮರ್, ಈ ಚಿತ್ರದಲ್ಲಿ ಅವನು ಉತ್ತಮ ನಟನೆಯನ್ನು ತೋರಿಸಲಿದ್ದಾನೆ ಎಂಬ ವಿಶ್ವಾಸ ನನಗಿದೆ ಎಂದು ಪೂಜಾ ಹೇಳಿದ್ದಾರೆ.
31ರ ಹರೆಯದ ಶ್ರೀಶಾಂತ್ ಈ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲೂ ಭಾಗವಹಿಸಿದ್ದರು.
ಏನೇ ಆಗಲಿ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿರುವ ಕೇರಳದ ಪೇಸ್ ಬೌಲರ್ ಇದೀಗ ಬಾಲಿವುಡ್‌ಗೆ ಕಾಲಿಡುವ ಮೂಲಕ ಯಾವ ರೀತಿ ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


