ಮದುವೆಯಾಚೆಗಿನ ಸಂಬಂಧ ಇಲ್ಲ ಎನ್ನುವುದು ಮೂರ್ಖತನ: ರೀಮಾ ಸೇನ್
ಮದುವೆಯಾಚೆಗಿನ ಸಂಬಂಧ ಬಗೆಗಿನ

ಮುಂಬೈ: ಮದುವೆಯಾಚೆಗಿನ ಸಂಬಂಧ ಬಗೆಗಿನ "ಇಶ್ಕ್ ಕಭಿ ಕರಿಯೋ ನ" ಸಿನೆಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿರುವ ನಟಿ ರೀಮಾ ಸೇನ್ ಸಮಾಜದಲ್ಲಿ ಅಂತಹ ಅಕ್ರಮ ಸಂಬಂಧಗಳು ಇಲ್ಲ ಇನ್ನುವುದು ಮೂರ್ಖತನ ಎಂದಿದ್ದಾರೆ.
ಪ್ರತೀಕ್ ಬಬ್ಬರ್ ಕೂಡ ಮುಖ್ಯ ಭೂಮಿಕೆಯಲ್ಲಿರುವ, ರಾಣ ಭಾಟಿಯಾ ನಿರ್ದೇಶನದ ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ ರೀಮಾ.
"ಪ್ರೇಕ್ಷಕರು ಇಂತಹ ವಿಷಯಗಳನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆ.. ನಿಜ ಜೀವನದಲ್ಲಿ ಇದು ನಡೆಯುತ್ತದೆ. ಸಮಾಜದಲ್ಲಿ ಮದುವೆಯಾಚೆಗಿನ ಅಕ್ರಮ ಸಂಬಂಧಗಳು ಇಲ್ಲ ಇನ್ನುವುದು ಮೂರ್ಖತನ" ಎಂದಿದ್ದಾರೆ.
"ಜನರು ಸಿನೆಮಾ ನೋಡಲು ಬಂದಾಗ ಸಿನೆಮಾ ಜೊತೆ ತಮ್ಮನ್ನು ಗುರುತಿಸಕೊಳ್ಳಲಿದ್ದಾರೆ" ಎನ್ನುತ್ತಾರೆ ರೀಮಾ.
ಈ ಸಿನೆಮಾ "ರೊಮ್ಯಾಂಟಿಕ್ ಥ್ರಿಲ್ಲರ್" ಎಂದಿದ್ದಾರೆ ರೀಮಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


