ದೆಹಲಿಯಲ್ಲಿ ಮಹಿಳೆ ಸುರಕ್ಷಿತಳಲ್ಲ: ಸೋನಂ ಕಪೂರ್
ಎಂಎನ್‌ಸಿಯ ಮಹಿಳಾ ಉದ್ಯೋಗಿ ಮೇಲೆ ಕ್ಯಾಬ್ ಡ್ರೈವರ್ ಅತ್ಯಾಚಾರವೆಸಗಿರುವ...

ಮುಂಬೈ: ಎಂಎನ್‌ಸಿಯ ಮಹಿಳಾ ಉದ್ಯೋಗಿ ಮೇಲೆ ಕ್ಯಾಬ್ ಡ್ರೈವರ್ ಅತ್ಯಾಚಾರವೆಸಗಿರುವ ಘಟನೆಯನ್ನು ಖಂಡಿಸಿರುವ ಬಾಲಿವುಡ್ ನಟಿ ಸೋನಂ ಕಪೂರ್, ದೆಹಲಿ ಮಹಿಳೆಗೆ ಸುರಕ್ಷಿತ ತಾಣವಲ್ಲ ಎಂದು ಹೇಳಿದ್ದಾರೆ.
ಈ ರೀತಿ ಘಟನೆಗಳು ಇದೇ ಮೊದಲು ಆಗುತ್ತಿಲ್ಲ. ದೆಹಲಿಯಲ್ಲಿ ಇಂತಹ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಆದರೆ, ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಇಲ್ಲಿ ನಿರಂತರವಾಗಿ ಮಹಿಳಾ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಹೇಳಬೇಕಾದರೆ, ಮಹಿಳೆಗೆ ದೆಹಲಿ ಸುರಕ್ಷಿತ ತಾಣವಲ್ಲ ಎಂದು ಅವರು ತಿಳಿಸಿದ್ದಾರೆ.
ದೆಹಲಿಗೆ ಹೋಲಿಸಿದರೆ, ಮುಂಬೈನಲ್ಲಿ ಮಹಿಳೆಯರಿಗೆ ಸುರಕ್ಷಿತವಿದೆ. ಇಲ್ಲಿ ಯೂಬರ್ ಕ್ಯಾಂಬ್ ಕಂಪನಿ ತಪ್ಪೇನಿಲ್ಲ. ಇಲ್ಲಿ ಡ್ರೈವರ್ ಅತ್ಯಾಚಾರವೆಸಗಿದ್ದಾನೆ. ಇದರ ಬಗ್ಗೆ ಕಾನೂನು ಕ್ರಮಕೈಗೊಳ್ಳಬೇಕು. ಸರ್ಕಾರವೇ ಇದಕ್ಕೆ ಹೊಣೆಯಾಗುತ್ತದೆ. ಸರ್ಕಾರ ಅಗತ್ಯ ಕ್ರಮಕೈಗೊಂಡು ಇಂತಹ ಘಟನೆಗಳನ್ನು ತಡೆಯಬೇಕು. ಮಹಿಳೆ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


