ಬಾಲಿವುಡ್

ಕಿಚ್ಚ ಸುದೀಪ್ ನಟನೆಗೆ ಅಜಯ್ ದೇವ್‌ಗನ್ ಮೆಚ್ಚುಗೆ

ನನಗೆ ಸುದೀಪ್ ಅವರ ನಟನೆ ಇಷ್ಟ...

ಕಿಚ್ಚ ಸುದೀಪ್ ನಟನೆಗೆ ಅಜಯ್ ದೇವ್‌ಗನ್ ಮೆಚ್ಚುಗೆ
ಅಜಯ್ ದೇವ್‌ಗನ್ & ಸುದೀಪ್
Published On :

ಮುಂಬೈ: ನನಗೆ ಸುದೀಪ್ ನಟನೆ ಇಷ್ಟ, 'ಆಕ್ಷನ್ ಜಾಕ್ಸನ್‌' ಚಿತ್ರದಲ್ಲಿ ಅವರಿಗೊಂದು ಪಾತ್ರ ಕೊಡಬಹುದೆ? ಎಂದು ನಾನು ಪ್ರಭುದೇವ ಅವರಲ್ಲಿ ಕೇಳಿದ್ದೆ. ದುರದೃಷ್ಟವಶಾತ್, ಅದು ನೆರವೇರಲಿಲ್ಲ ಎಂದು ಬಾಲಿವುಡ್ ನಟ ಅಜಯ್ ದೇವ್‌ಗನ್ ಹೇಳಿದ್ದಾರೆ.

ಆಕ್ಷನ್ ಜಾಕ್ಸನ್‌ ಚಿತ್ರ ನಿನ್ನೆ ತೆರೆ ಕಂಡಿತ್ತು.

'ಈಗ' ಚಿತ್ರದ ಹಿಂದಿ ಅವತರಣಿಕೆ 'ಮಕ್ಕಿ' ಚಿತ್ರದಲ್ಲಿ ಸುದೀಪ್ ಅಭಿನಯ ನೋಡಿ ನಾನು ಇಂಪ್ರೆಸ್ ಆಗಿದ್ದೇನೆ. ಅವರೊಂದಿಗೆ ಹಿಂದಿ ಚಿತ್ರವೊಂದರಲ್ಲಿ ನಟಿಸಬೇಕೆಂಬ ಬಯಕೆ ಹುಟ್ಟಿಕೊಂಡಿದ್ದು ಆಗಲೇ ಎಂದು ಅಜಯ್ ಹೇಳಿದ್ದಾರೆ.

ಅದೇ ವೇಳೆ ಸ್ಟಂಟ್  ಕೊರಿಯೋಗ್ರಾಫರ್ ರವಿ ವರ್ಮ ಬಗ್ಗೆಯೂ ಪ್ರಭುದೇವ ಮತ್ತು ಅಜಯ್ ದೇವ್‌ಗನ್ ಮೆಚ್ಚುಗೆ ಸೂಚಿಸಿದ್ದಾರೆ. ರವಿ ಒಳ್ಳೆಯ ಸ್ಟಂಟ್ ಕೊರಿಯೋಗ್ರಾಫರ್. ಪ್ರಭು ಮತ್ತು ರವಿಯವರ ಕಾಂಬಿನೇಷನ್‌ನಿಂದ ಒಳ್ಳೆಯ ನೃತ್ಯ, ಸ್ಟಂಟ್  ಸಿನಿಮಾದಲ್ಲಿ ಮೂಡಿಬಂದಿವೆ ಎಂದು ಅಜಯ್ ಅಭಿಪ್ರಾಯಪಟ್ಟಿದ್ದಾರೆ.

ಏನೇ ಆಗಲಿ, ಸ್ಯಾಂಡಲ್‌ವುಡ್ ಬಗ್ಗೆ ಬಾಲಿವುಡ್‌ನ ಹೀರೋ ಮೆಚ್ಚುಗೆ ಸೂಚಿಸುತ್ತಿರುವುದು ಒಂದೊಳ್ಳೆಯ ಬೆಳವಣಿಗೆಗೆ ನಾಂದಿ ಹಾಡಲಿದೆ ಎಂಬುದಂತೂ ನಿಜ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.