ಬಾಲಿವುಡ್

ಬಿಗ್‌ಬಾಸ್

ಬಾಲಿವುಡ್‌ನಲ್ಲಿ ಕಲೆಕ್ಷನ್ ವಿಷಯದಲ್ಲಿ ದಾಖಲೆ ಮಾಡಿ 100 ಕ್ರೋರ್ ಕ್ಲಬ್ ಸೇರುವ ಸಿನಿಮಾಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಲೇ ಇದೆ.

ಬಿಗ್‌ಬಾಸ್
Published On :

ಬಾಲಿವುಡ್‌ನಲ್ಲಿ ಕಲೆಕ್ಷನ್ ವಿಷಯದಲ್ಲಿ ದಾಖಲೆ ಮಾಡಿ 100 ಕ್ರೋರ್ ಕ್ಲಬ್ ಸೇರುವ ಸಿನಿಮಾಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಲೇ ಇದೆ. ಆದರೆ ಅಲ್ಲಿಯೂ ಕೆಲವು ಚಿತ್ರಗಳು ಕಲೆಕ್ಷನ್‌ಗಿಂತ ಮುನ್ನವೇ ಕೆಲವು ವಿಶೇಷ ಕೆಟಗರಿಗಳಲ್ಲಿ ದಾಖಲೆ ಬರೆಯುವುದೂ ಉಂಟು. ಅಂಥ ವಿಶೇಷ ದಾಖಲೆಗೆ ಈಗ ಅಕ್ಷಯ್ ಕುಮಾರ್ ಅಭಿನಯದ 'ಬಾಸ್‌' ಚಿತ್ರ ಸೇರ್ಪಡೆಯಾಗಿದೆ.
 ಬಾಸ್ ಚಿತ್ರದ ದಾಖಲೆ ಎಂದರೆ ಅದು ಸಂಗೀತ ಲೋಕದ ಬಿಗ್‌ಬಾಸ್ ಎನಿಸಿಕೊಂಡ ಮೈಕೆಲ್ ಜಾಕ್ಸನ್‌ರ 'ದಿಸ್ ಈಸ್ ಇಟ್‌'ನ ದಾಖಲೆಯನ್ನು ಬ್ರೇಕ್ ಮಾಡಿರುವುದು. ಈ ದಾಖಲೆ ಆಗಿರುವುದು ಬಾಸ್ ಚಿತ್ರ ಪೋಸ್ಟರ್ ಮುಖಾಂತರ. ಅಕ್ಷಯ್ ಕುಮಾರ್ ಅಭಿಮಾನಿಗಳೆಲ್ಲ ಸೇರಿ 'ಬಾಸ್‌' ಚಿತ್ರದ ಅತಿ ದೊಡ್ಡ ಪೋಸ್ಟರ್ ಅನ್ನು  ಇಂಗ್ಲೆಂಡಿನಲ್ಲಿ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಅವರು ತೆಗೆದುಕೊಂಡ ಸಮಯ ನಾಲ್ಕು ತಿಂಗಳು. ಈ ಪೋಸ್ಟರ್ ನೋಡಿ 'ಇದೊಂದು ಅತಿ ದೊಡ್ಡ ಗೌರವ. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ ಅಕ್ಷಯ್.
58.87 ಮೀಟರ್ ಅಗಲ ಮತ್ತು 54.94 ಮೀಟರ್ ಎತ್ತರದ 'ಬಾಸ್‌' ಚಿತ್ರದ ಈ ಪೋಸ್ಟರ್ ಇಂಗ್ಲೆಂಡಿನ ಲಿಟಲ್ ಗ್ರಾನ್ಸ್‌ಡೆನ್ ಏರ್‌ಫೀಲ್ಡ್‌ನಲ್ಲಿ ಅಕ್ಟೋಬರ್ 3ರಂದು ಬಿಡುಗಡೆಯಾಗಿದೆ. ಮೈಕೆಲ್ ಜಾಕ್ಸನ್‌ರ ಪೋಸ್ಟರ್ ತಯಾರಿಸಿದ್ದ ಮ್ಯಾಕ್ರೊ ಆರ್ಟ್ಸ್ ವತಿಯಿಂದಲೇ ಬಾಸ್ ಚಿತ್ರದ ಈ ಪೋಸ್ಟರ್ ತಯಾರಾಗಿರುವುದು ವಿಶೇಷ. ಇಂಗ್ಲೆಂಡಿನಲ್ಲೇ ಈ ಪೋಸ್ಟರ್‌ಗೆ ಅಧಿಕೃತ ದಾಖಲೆಯ ಮೊಹರು ಬಿದ್ದಿದ್ದು ಈಗ ಈ ಪೋಸ್ಟರ್ ಗಿನ್ನಿಸ್ ದಾಖಲೆಗೂ ಪಾತ್ರವಾಗಿದೆ. ಹಾಗಾಗಿ ಬಾಸ್ ಚಿತ್ರದ ಪೋಸ್ಟರ್ ಗಿನ್ನಿಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ  ಕಾಣಿಸಿಕೊಂಡಿದೆ.
ಆಂತೊನಿ ಡಿಸೋಜಾ ನಿರ್ದೇಶನದ 'ಬಾಸ್‌' ಒಂದು ಕಾಮಿಡಿ ಚಿತ್ರವಾಗಿದ್ದು, ಆಕ್ಷಯ್ ಜೊತೆಗೆ ಮಿಥುನ್ ಚಕ್ರವರ್ತಿ, ಡ್ಯಾನಿ, ಅದಿತಿ ರಾವ್, ಪರೀಕ್ಷಿತ್ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರ ಅಕ್ಟೋಬರ್ 16ರಂದು ತೆರೆಕಾಣಲಿದೆ.
ಅಂತೂ ಇಲ್ಲಿಯವರೆಗೆ ಜಗತ್ತಿನ ಅತಿದೊಡ್ಡ ಪೋಸ್ಟರ್ ಎಂಬ ಖ್ಯಾತಿ 'ದಿಸ್ ಈಸ್ ಇಟ್‌'ದಾಗಿತ್ತು. ಈಗ
ಅದು ಬಾಸ್ ಪಾಲಾಗಿದೆ...ದಟ್ಸ್ ಇಟ್.

- ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.