ಪಿತ್ತ ನೆತ್ತಿಗೇರಿಲ್ಲ!
'ನನ್ನದು ಸಮಚಿತ್ತ'. ಹಾಗಂತ ಹೇಳಿಕೊಂಡಿದ್ದಾಳೆ 'ಆಶಿಖಿ- 2' ಚೆಲುವೆ ಶ್ರದ್ಧಾ ಕಪೂರ್. ಸಿನಿಮಾ ಕಮರ್ಷಿಯಲ್ ಯಶಸ್ಸು ಕಂಡಿದೆ...

'ನನ್ನದು ಸಮಚಿತ್ತ'. ಹಾಗಂತ ಹೇಳಿಕೊಂಡಿದ್ದಾಳೆ 'ಆಶಿಖಿ- 2' ಚೆಲುವೆ ಶ್ರದ್ಧಾ ಕಪೂರ್. ಸಿನಿಮಾ ಕಮರ್ಷಿಯಲ್ ಯಶಸ್ಸು ಕಂಡಿದೆ. ಅದರಿಂದ ಶ್ರದ್ಧಾ ಉಬ್ಬಿಲ್ಲವಂತೆ. 'ಯಶಸ್ಸನ್ನು ತಲೆಗೇರಿಸಿಕೊಂಡು, ವೈಫಲ್ಯವನ್ನು ಹೃದಯದಲ್ಲಿಟ್ಟುಕೊಳ್ಳುವ ಜಾಯಮಾನ ನನ್ನದಲ್ಲ. ನನಗೆ ಸೋಲು-ಗೆಲುವು ಎರಡೂ ಒಂದೇ' ಎನ್ನುತ್ತ ಚೆಂದವಾಗಿ ನಗುತ್ತಾಳೆ ತರುಣಿ.
ಬಾಲಿವುಡ್ನ ಸ್ಪರ್ಧೆ, ನಂ.1 ಸ್ಥಾನ ಇತ್ಯಾದಿಗಳ ಬಗ್ಗೆ ಶ್ರದ್ಧಾಗೆ ನಂಬಿಕೆ ಇಲ್ಲವಂತೆ. ಪೈಪೋಟಿಯಲ್ಲಿ ನಂಬಿಕೆ ಇಟ್ಟವಳು ತಾನಲ್ಲ ಎನ್ನುವುದು ಅವರ ಹೇಳಿಕೆ. 'ನನಗೆ ಬೇರೆಯವರು ಸ್ಪರ್ಧಿಗಳಲ್ಲ. ನನಗೆ ನಾನೇ ಸ್ಪರ್ಧಿ. ಸಿನಿಮಾದಿಂದ ಸಿನಿಮಾಕ್ಕೆ ಸುಧಾರಿಸಿಕೊಳ್ಳುವುದು ಹೇಗೆ? ಜನ ಮೆಚ್ಚುವ ಅಭಿನಯ ನೀಡುವುದು ಹೇಗೆ ಎನ್ನುವುದರ ಬಗ್ಗೆ ನನ್ನ ಆಲೋಚನೆ' ಎಂದಿದ್ದಾಳೆ ಶ್ರದ್ಧಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


