ಯಾಮಿ ಮತ್ತೆ ಪ್ರತ್ಯಕ್ಷ
ಯಾಮಿ ಗೌತಮ್ ಎನ್ನುವ ಚೆಲುವೆಯ ನೆನಪಿದೆಯೆ? ಗೋಲ್ಡನ್ ಸ್ಚಾರ್ ಗಣೇಶ್ ಅಭಿನಯದ ಕನ್ನಡ ಸಿನಿಮಾ 'ಉಲ್ಲಾಸ ಉತ್ಸಾಹ'ದ ನಾಯಕಿ.

ಯಾಮಿ ಗೌತಮ್ ಎನ್ನುವ ಚೆಲುವೆಯ ನೆನಪಿದೆಯೆ? ಮೂರು ವರ್ಷ ಹಿಂದೆ ತೆರೆ ಕಂಡಿದ್ದ, ಗೋಲ್ಡನ್ ಸ್ಚಾರ್ ಗಣೇಶ್ ಅಭಿನಯದ ಕನ್ನಡ ಸಿನಿಮಾ 'ಉಲ್ಲಾಸ ಉತ್ಸಾಹ'ದ ನಾಯಕಿ. ಅಲ್ಲಿಯವರೆಗೆ ಹಿಂದಿ ಕಿರುತೆರೆ ಧಾರಾವಾಹಿಗಳು, ರಿಯಾಲಿಟಿ ಶೋಗಳಲ್ಲಿ ಮಿನುಗುತ್ತಿದ್ದಳು ಹುಡುಗಿ. ಸ್ಯಾಂಡಲ್ವುಡ್ ಮೂಲಕ ಬೆಳ್ಳಿಪರದೆಗೆ ಜಿಗಿದರೂ ಗುರಿ ಬಾಲಿವುಡ್ ಆಗಿತ್ತು. ಕಳೆದ ವರ್ಷದ ಯಶಸ್ವಿ ಚಿತ್ರಗಳಲ್ಲಿ ಒಂದಾದ 'ವಿಕಿ ಡೋನರ್' ಮೂಲಕ ಆ ಕನಸೂ ನನಸಾಯಿತು. ಈಕೆಯ ನಟನೆ ಬಗ್ಗೆಯೂ ಒಳ್ಳೆಯ ಮಾತುಗಳೂ ಬಂದವು. ಆದರೆ ಅವು ಅವಕಾಶಗಳಾಗಿ ಪರಿವರ್ತನೆ ಆಗಲಿಲ್ಲ. ಈಗ 'ಅಮಾನ್ ಕಿ ಆಶಾ' ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾಳೆ ಹುಡುಗಿ. ಇದು 'ಸೆರೆಸ್ ಕ್ವೆರಿಡೋಸ್' (ಓನ್ಲಿ ಹ್ಯೂಮನ್) ಎನ್ನುವ ಸ್ಪ್ಯಾನಿಶ್ ಸಿನಿಮಾದ ರೀಮೇಕ್. ಇ.ನಿವಾಸ್ ನಿರ್ದೇಶನದ ಸಿನಿಮಾದಲ್ಲಿ ಪಾಕಿಸ್ತಾನದ ಗಾಯಕ, ನಟ ಅಲಿ ಜಾಫರ್ ನಾಯಕ. 'ಇಡೀ ಸಿನಿಮಾದ ಚಿತ್ರೀಕರಣ ಲಂಡನ್ನಲ್ಲಿ ನಡೆದಿದೆ' ಎನ್ನುವ ಯಾಮಿಗೆ, ಈ ಸಿನಿಮಾವಾದರೂ ತನ್ನ ವೃತ್ತಿ ಬದುಕಿಗೆ ಹೊಸ ತಿರುವು ಕೊಡಬಹುದು ಎನ್ನುವ ನಂಬಿಕೆ. ಚಿತ್ರ ಮುಂಗಾರು ಆರಂಭವಾದ ನಂತರ ತೆರೆ ಕಾಣಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


