ಬಾಲಿವುಡ್

ಚಕ್ರವರ್ತಿಯ ಶ್ರದ್ಧೆ

ಮಿಥುನ್ ಚಕ್ರವರ್ತಿ ಬಾಲಿವುಡ್‌ನ ಹಿರಿಯ ನಟ. 'ಮಿಥುನ್ ದಾದಾ' ಎಂದು ಕಿರಿಯ ಕಲಾವಿದರು ಅವರನ್ನು ಪ್ರೀತಿಯಿಂದ ಕರೆಯುತ್ತಾರೆ.

ಚಕ್ರವರ್ತಿಯ ಶ್ರದ್ಧೆ
Published On :

ಮಿಥುನ್ ಚಕ್ರವರ್ತಿ ಬಾಲಿವುಡ್‌ನ ಹಿರಿಯ ನಟ. 'ಮಿಥುನ್ ದಾದಾ' ಎಂದು ಕಿರಿಯ ಕಲಾವಿದರು ಅವರನ್ನು ಪ್ರೀತಿಯಿಂದ ಕರೆಯುವುದುಂಟು. ಅವರಿಗೆ ಕೆಲಸದಲ್ಲಿ ಎಷ್ಟು ಪ್ರೀತಿ, ಎಂಥ ಶ್ರದ್ಧೆ ಎಂದರೆ ಈಗಲೂ ಚಿತ್ರೀಕರಣಕ್ಕೆ ಮುನ್ನ ಟೆಕ್ನಿಕಲ್ ರಿಹರ್ಸಲ್‌ನಲ್ಲಿ ಭಾಗವಹಿಸುತ್ತಾರೆ. ಅಶು ನಿರ್ದೇಶನದ 'ಎನಿಮಿ' ಚಿತ್ರಕ್ಕಾಗಿ ಜೈಲಿನ ದೃಶ್ಯ ರಿಹರ್ಸಲ್‌ನಲ್ಲಿ ಪಾಲ್ಗೊಂಡು ದಾದಾ ಚಿತ್ರತಂಡಕ್ಕೆ ಅಚ್ಚರಿ ಮೂಡಿಸಿದರು. ದೃಶ್ಯ ಕ್ಯಾಮೆರಾದಲ್ಲಿ ಹೇಗೆ ಕಾಣುತ್ತದೆ ಎನ್ನುವುದನ್ನು ನೋಡಿಕೊಳ್ಳಲು ಜ್ಯೂನಿಯರ್ ಆರ್ಟಿಸ್ಟ್‌ಗಳು ಅಥವಾ ಅಸಿಸ್ಟಂಟ್‌ಗಳಿಂದ ಟೆಕ್ನಿಕಲ್ ರಿಹರ್ಸಲ್ ಮಾಡಿಸಲಾಗುತ್ತದೆ. ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ದಾದಾ, ಸ್ವಯಂ ಪ್ರೇರಣೆಯಿಂದ ತಾವೇ ರಿಹರ್ಸಲ್‌ನಲ್ಲಿ ಪಾಲ್ಗೊಂಡರು. ಮಿಥುನ್ ಚಕ್ರವರ್ತಿ, ಸುನೀಲ್ ಶೆಟ್ಟಿ, ಕೆ.ಕೆ. ಮೆನನ್ ಕಾಂಬಿನೇಷನ್‌ನ ಮೊದಲ ಸಿನಿಮಾ 'ಎನಿಮಿ'.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.