ನಾನು ಅಂಥವಳಲ್ಲ...
ಅವಳು ಹಣಕ್ಕಾಗಿ ನೀಲಿ ಚಿತ್ರಗಳಲ್ಲಿ ನಟಿಸುವ 'ಪೋರ್ನ್ ಕ್ವೀನ್'. ಈ ರೂಪದರ್ಶಿಗೆ ಆಗಾಗ ಪ್ರಚಾರಕ್ಕೆ ನಗ್ನವಾಗುವ, ತನ್ನ ಬೆತ್ತಲೆ...

ಅವಳು ಹಣಕ್ಕಾಗಿ ನೀಲಿ ಚಿತ್ರಗಳಲ್ಲಿ ನಟಿಸುವ 'ಪೋರ್ನ್ ಕ್ವೀನ್'. ಈ ರೂಪದರ್ಶಿಗೆ ಆಗಾಗ ಪ್ರಚಾರಕ್ಕೆ ನಗ್ನವಾಗುವ, ತನ್ನ ಬೆತ್ತಲೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುವ ಚಟ. ಇಬ್ಬರೂ ಬಾಲಿವುಡ್ನಲ್ಲಿ ನೆಲೆ ನಿಲ್ಲಲು ಪ್ರಯತ್ನಿಸುತ್ತಿರುವವರೇ. ಆದರೂ ಇವಳಿಗೆ ಅವಳೆಂದರೆ ಆಗದು. ಅವಳೊಂದಿಗೆ ತನ್ನನ್ನು ಹೋಲಿಕೆ ಮಾಡುವವರನ್ನು ಕಂಡರೆ ಕಡುಕೋಪ. ಪೂನಂ ಪಾಂಡೆ ಚೊಚ್ಚಲ ಸಿನಿಮಾ 'ನಶಾ' ಈ ವಾರ ಬಿಡುಗಡೆಯಾಗುತ್ತಿದೆ. ಅದರಲ್ಲಿ ಹೀರೋ ಜತೆ ಆಕೆಯ ಸರಸದ ಎಂಎಂಎಸ್ಗಳು ಪಡ್ಡೆಗಳನ್ನು ಬಿಸಿಯೇರಿಸಿದ್ದವು. ಪೋಸ್ಟರ್ಗಳಲ್ಲಿ ರಾರಾಜಿಸಿದ್ದೂ ನೂಲೆಳೆಯೂ ಇಲ್ಲದ ಪೂನಂ ದೇಹ. ಹೀಗಾಗಿಯೇ ಅವಳನ್ನು ಸನ್ನಿ ಲಿಯೋನ್ ಜತೆ ಜನ ಹೋಲಿಸಲಾರಂಭಿಸಿದರು. 'ನಾನು ಅಂಥವಳಲ್ಲ. ನನ್ನನ್ನು ಸನ್ನಿ ಲಿಯೋನ್ ಜತೆ ಹೋಲಿಸಬೇಡಿ. ರೇಖಾ, ಮಾಧುರಿ ದೀಕ್ಷಿತ್, ಕಾಜೋಲ್ ನನ್ನ ಮೆಚ್ಚಿನ ನಟಿಯರು.ಅವರೊಂದಿಗೆ ನನ್ನನ್ನು ಹೋಲಿಸಿಕೊಳ್ಳಲು ಇಷ್ಟಪಡುತ್ತೇನೆ' ಎಂದು ಖಾರವಾಗಿ ಹೇಳಿದ್ದಾಳೆ ಪೂನಂ ಪಾಂಡೆ. ಆಕೆ ಆಗಾಗ ಬೆತ್ತಲಾಗುವುದು, ಕಡಿಮೆ ಬಟ್ಟೆ ಧರಿಸುವುದು ಸಮಾಜಸೇವೆಗಂತೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


