ಬಾಲಿವುಡ್

ಐ ಲವ್ ಯೂ ಹೇಳಿ ಪ್ಲೀಸ್...!

ಟಾಲಿವುಡ್‌ನಲ್ಲಿ ಬಿಡುವಿಲ್ಲದೆ ನಟಿಸುತ್ತಿರುವ ನಟಿ ತಾಪ್ಸಿಗೆ ಈಗ ಖಿನ್ನತೆಯೊಂದು ಶುರುವಾಗಿದೆ. ನನ್ನನ್ನು ಯಾರು ಮೆಚ್ಚುಕೊಂಡಿಲ್ಲ,...

ಐ ಲವ್ ಯೂ ಹೇಳಿ ಪ್ಲೀಸ್...!
Published On :

ಟಾಲಿವುಡ್‌ನಲ್ಲಿ ಬಿಡುವಿಲ್ಲದೆ ನಟಿಸುತ್ತಿರುವ ನಟಿ ತಾಪ್ಸಿಗೆ ಈಗ ಖಿನ್ನತೆಯೊಂದು ಶುರುವಾಗಿದೆ. ನನ್ನನ್ನು ಯಾರು ಮೆಚ್ಚುಕೊಂಡಿಲ್ಲ, ಯಾರೂ ನನ್ನ ಲವ್ ಮಾಡು ಎಂದು ಕೇಳುತ್ತಿಲ್ಲ ಎಂಬ ಚಿಂತೆ ಕಾಡುತಿದೆಯಂತೆ. ಮೊದಮೊದಲು ನಾನು ನೋಡಲು ಅಷ್ಟು ಚೆನ್ನಾಗಿರಲಿಲ್ಲ. ಹಾಗಾಗಿ ಯಾರೂ ನನ್ನನ್ನು ಪ್ರಪೋಸ್ ಮಾಡಿರಲ್ಲಿಲ್ಲ. ಆದರೀಗ ನಾನು ಅಂದವಾಗಿದ್ದರೂ ಸಹ ಯಾರು ನನಗೆ ಐ ಲವ್ ಯೂ ಎಂದು ಹೇಳೋಕೆ ಮುಂದೆ ಬರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ನಾನು ನಟಿಯಾಗಿರುವುದು. ಬೇರೆ ದಿನಗಳಲ್ಲಿ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಈ ಚಿಂತೆ ಕಾಡಲಾರಂಭಿಸುತ್ತದೆ. ಏಕೆಂದರೆ ಅಂದು ಪ್ರೇಮಿಗಳು ಒಬ್ಬರನ್ನೊಬ್ಬರು ಅಪ್ಪುತ್ತ, ಕಾಣಿಕೆಗಳನ್ನು ನೀಡುತ್ತಾ ಪ್ರಪಂಚದ ಇರೋ ಬರೋ ಮಾತುಗಳನ್ನೆಲ್ಲಾ ಹರಟುತ್ತಾರೆ ಎಂಬುದನ್ನು ತಿಳಿದಾಗ ಅಂತಹ ಲೈಫ್ ನನಗೂ ಬೇಕು ಅನಿಸುತ್ತದೆ ಎಂದಿದ್ದಾಳೆ ತಾಪ್ಸಿ. ಯಾರಾದರೂ ಅಪ್ಲಿಕೇಶನ್ ಹಾಕುವುದಿದ್ದರೆ ಪ್ರಯತ್ನ ಮಾಡಬಹುದು!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.