ಬಾಲಿವುಡ್

ರೀ ಎಂಟ್ರಿ...

ಬಾಲಿವುಡ್‌ನ ಝಲಕ್ ಮಾಧುರ್ಯದ ನಗುವಿನ ರಾಣಿ ಮಾಧುರಿ ಮತ್ತೆ ಸಿನಿರಂಗಕ್ಕೆ ಲಗ್ಗೆ ಹಾಕಲಿದ್ದಾಳೆ. 'ದೇವದಾಸ್‌' ನಂತಹ...

ರೀ ಎಂಟ್ರಿ...
Published On :

ಬಾಲಿವುಡ್‌ನ ಝಲಕ್ ಮಾಧುರ್ಯದ ನಗುವಿನ ರಾಣಿ ಮಾಧುರಿ ಮತ್ತೆ ಸಿನಿರಂಗಕ್ಕೆ ಲಗ್ಗೆ ಹಾಕಲಿದ್ದಾಳೆ. 'ದೇವದಾಸ್‌' ನಂತಹ ಹಿಟ್ ಚಿತ್ರದಲ್ಲಿ ಮಿಂಚಿದ್ದ ಮಾಧುರಿ ಈಗ ಮತ್ತೆ ಎರಡನೇ ಇನ್ನಿಂಗ್ಸ್ ಗಾಗಿ 'ದೇದ್ ಇಷ್ಕಿಯಾ' ದಲ್ಲಿ ನಟಿಸಿ ಮತ್ತೊಮ್ಮೆ ಅಭಿಮಾನಿಗಳ ಹೃದಯದ ಕದವನ್ನು ಬಡಿದಿದ್ದಾಳೆ. ಜಗತ್ಪ್ರಸಿದ್ಧ ಕಲಾವಿದ ಎಮ್.ಎಫ್.ಹುಸೇನ್‌ರಿಂದ ಸೌಂದರ್ಯದ ಖನಿ ಎಂದು ಕರೆಸಿಕೊಂಡಿದ್ದಲ್ಲದೆ, ನೃತ್ಯದ ಬಗ್ಗೆಯೂ ಪ್ರಶಂಸೆ ಪಡೆದುಕೊಂಡಿದ್ದ ಆಕೆ, ಹುಸೇನ್ ನಿರ್ದೇಶನದ 'ಗಜ ಗಾಮಿನಿ'ಯಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಳು. 'ತೇಜಾಬ್‌' ಚಿತ್ರದಿಂದ ರಸಿಕರ ಮನದಲ್ಲಿ ನೆಲೆ ನಿಂತ ಮಾಧುರಿ ಮದುವೆಯಾಗಿ ಹೊರನಾಡಿಗೆ ಹಾರುವವರೆಗೂ ಯಾರಿಗೂ ಮೊದಲ ಸ್ಥಾನವನ್ನು ಬಿಟ್ಟು ಕೊಟ್ಟಿರಲಿಲ್ಲ. ತನ್ನದೇ ಆದ ಅಭಿಮಾನಿ ವೃಂದವನ್ನು ಹೊಂದಿದ್ದ ಮಾಧುರಿ ದಿಲ್, ಸಾಜನ್, ಬೇಟಾ, ಹಮ್ ಆಪ್ಕೆ ಹೈ ಕೌನ್, ದಿಲ್ ತೋ ಪಾಗಲ್ ಹೈ, ಚಿತ್ರಗಳಲ್ಲಿ ಅಭಿಮಾನಿಗಳ ಮನ ಸೂರೆಗೊಂಡಿದ್ದ ಮಾಧುರಿ ಮತ್ತೇ ಅದೇ ತರಹದ ಮೋಡಿ ಮಾಡುವಳೇ ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.