ಬಾಲಿವುಡ್

ಹನ್ಸಿಕಾ ಲವ್ವಿ ಡವ್ವಿ

ಹನ್ಸಿಕಾ ಲವ್ವಿ ಡವ್ವಿ
Published On :

ಗಾಸಿಪ್‌ಗಳಲ್ಲಿ ಬಾಲಿವುಡ್‌ಗಿಂತ ತಾನೇನೂ ಕಮ್ಮಿ ಇಲ್ಲಾ ಎಂದು ದಕ್ಷಿಣ ಭಾರತದ ಕಾಲಿವುಡ್ ಇತ್ತೀಚಿನ ದಿನಗಳಲ್ಲಿ ನಿರೂಪಿಸಲು ಹೊರಟಿದೆ. ಇಲ್ಲೂ ದಿನಕ್ಕೊಂದು ಪ್ರೇಮ ಕಹಾನಿ ಬೆಳಕಿಗೆ ಬರುತ್ತಿದೆ. ಯಾರು  ಯಾರನ್ನ, ಯಾವಾಗ ಎಷ್ಟು ಸಮಯ ಪ್ರೀತಿಸುತ್ತಾರೆ ಎಂಬುದನ್ನು ತಿಳಿಯುವುದು ಬಲು ಕಷ್ಟದ ಕೆಲಸ ಎನ್ನುತ್ತಿದ್ದಾರೆ ಕಾಲಿವುಡ್ ಮಂದಿ. ಕೆಲವು ದಿನಗಳ ಹಿಂದೆ ಸಿಂಬು, ಹನ್ಸಿಕಾ, ನಯನತಾರ ಹಾಗೂ ಆರ್ಯ ಅವರ ಪ್ರೇಮ ಪ್ರಕರಣವನ್ನು ಮಾಧ್ಯಮಗಳೂ ದೊಡ್ಡ ಸುದ್ದಿಮಾಡಿದ್ದವು. ಈಗ ಮತ್ತೆ ಅವುಗಳ ಕಣ್ಣು ಹನ್ಸಿಕಾ ಮತ್ತು ತಮಿಳಿನ ಖ್ಯಾತ ಹಾಸ್ಯ ಕಲಾವಿದ ಸಂತಾನಂ ಮೇಲೆ ಬಿದ್ದಿದೆ. ಅವುಗಳ ಸುದ್ದಿ ಪ್ರಕಾರ ಇವರಿಬ್ಬರ ನಡುವೆ ಲವ್ವಿ ಡವ್ವಿ ನಡೀತಾ ಇದೆಯಂತೆ. ನಿಜಕ್ಕೂ ಇದಾಗಿದ್ದರೆ ಇದೊಂದು ಬ್ರೇಕಿಂಗ್ ನ್ಯೂಸ್!  ಹನ್ಸಿಕಾಳ ಈ ರೀತಿಯ ವರ್ತನೆಗೆ ಸಿಂಬು ಮೇಲೆ ಆಕೆಗಿರುವ ಕೋಪವೇ? ಅಥವಾ ನಿಜಕ್ಕೂ ಸಂತಾನಂ ಬಗ್ಗೆ ಇರುವ ಪ್ರೀತಿಯಾ? ಎಂಬುದು ತಿಳಿಯುತ್ತಿಲ್ಲ. ಇಬ್ಬರಲ್ಲಿ ಯಾರು ಹರಕೆಯ ಕುರಿ ಎಂಬುದೇ ಈಗಿರುವ ಪ್ರಶ್ನೆ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.