ಬಾಲಿವುಡ್

ಬಾರ್ಡರ್ 2, 3, 4...

'ಸಂದೇಶೆ ಆತೀ ಹೈ...' ಹಾಡು ಕೇಳದವರು ಯಾರು? 1997ರ ಯಶಸ್ವಿ ಹಿಂದಿ ಚಿತ್ರ 'ಬಾರ್ಡರ್‌'ನ ಜನಪ್ರಿಯ ಗೀತೆ ಅದು.

ಬಾರ್ಡರ್ 2, 3, 4...
Published On :

'ಸಂದೇಶೆ ಆತೀ ಹೈ...' ಹಾಡು ಕೇಳದವರು ಯಾರು? 1997ರ ಯಶಸ್ವಿ ಹಿಂದಿ ಚಿತ್ರ 'ಬಾರ್ಡರ್‌'ನ ಜನಪ್ರಿಯ ಗೀತೆ ಅದು. ಈ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದವರು ಅನು ಮಲಿಕ್. ಈಗ ಸ್ವಾತಂತ್ರ್ಯ ದಿನಾಚರಣೆ ಹೊತ್ತಲ್ಲಿ ಹೊರಬಿದ್ದಿರುವ ಸಂಗತಿ ಎಂದರೆ 'ಬಾರ್ಡರ್ 2' ಚಿತ್ರಕ್ಕಾಗಿ ನಿದೇರ್ಶಕ ಜೆ.ಪಿ. ದತ್ತಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಾರಾಗಣದ ಬಗ್ಗೆ ಅವರು ಬಾಯಿ ಬಿಟ್ಟಿಲ್ಲ. ಆದರೆ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಅನು ಮಲಿಕ್ ಅವರದೇ ಎನ್ನುವುದು ಖಚಿತವಾಗಿದೆ. 'ಅನು, ವಿ ಆರ್ ಆನ್. ಬಿ ರೆಡಿ' ಎಂದು ತಮ್ಮ ಎಂದಿನ ಶೈಲಿಯಲ್ಲಿ ದತ್ತಾ ಸೂಚನೆ ನೀಡಿದ್ದಾರಂತೆ. ಅನು ಮಲಿಕ್ ಪ್ರಕಾರ, ಮುಂದಿನ ದಿನಗಳಲ್ಲಿ 'ಬಾರ್ಡರ್ 3' ಮತ್ತು 'ಬಾರ್ಡರ್ 4' ಕೂಡ ಬರಲಿದ್ದು, ಅದನ್ನು ಗಮನದಲ್ಲಿಟ್ಟುಕೊಂಡೇ ದತ್ತಾ ಕಥೆ ಹೆಣೆಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.