ಕೊನೆಗೂ ಅಮಲಾ-ಧನುಷ್ ಜೋಡಿ
ಮಾದಕ ಚೆಲುವಿನ ಒಡತಿ ಅಮಲಾ ಪೌಲ್ ಕೊನೆಗೂ ಬೇಸರದಿಂದ ಹೊರಬಂದಿದ್ದಾಳೆ. ಅಷ್ಟಕ್ಕೂ ಅವಳಿಗೆ ಆಗಿದ್ದ ಬೇಸರ...

ಮಾದಕ ಚೆಲುವಿನ ಒಡತಿ ಅಮಲಾ ಪೌಲ್ ಕೊನೆಗೂ ಬೇಸರದಿಂದ ಹೊರಬಂದಿದ್ದಾಳೆ. ಅಷ್ಟಕ್ಕೂ ಅವಳಿಗೆ ಆಗಿದ್ದ ಬೇಸರ ಏನೆಂದರೆ ಧನುಷ್ ಜತೆ '3' ಚಿತ್ರದಲ್ಲಿ ನಟಿಸುವ ಅವಕಾಶ ತಪ್ಪಿಹೋಯಿತು ಎನ್ನುವುದು. ಡೇಟ್ಸ್ ಸಮಸ್ಯೆಯಿಂದ '3' ಆಫರ್ ಒಪ್ಪಿಕೊಳ್ಳಲು ಅಮಲಾಗೆ ಸಾಧ್ಯವಾಗಿರಲಿಲ್ಲ. ಧನುಷ್ ಮುಂದಿನ ಸಿನಿಮಾ 'ಎಥಿರ್ ನೀಚಲ್'ನಲ್ಲಿ ಅಮಲಾ ನಾಯಕಿ. ಛಾಯಾಗ್ರಾಹಕ ವೇಲ್ರಾಜ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಕುರಿತು ಟ್ವೀಟಿಸಿರುವ ಅಮಲಾ, 'ಧನುಷ್ ಜತೆ ನಟಿಸುತ್ತಿರುವುದಕ್ಕೆ ಎಷ್ಟು ಸಂತೋಷವಾಗಿದೆ ಎಂದರೆ ಅದನ್ನು ತಾಳಿಕೊಳ್ಳಲು ನನ್ನಿಂದ ಆಗುತ್ತಿಲ್ಲ' ಎಂದಿದ್ದಾಳೆ. ಆಗಸ್ಟ್ನಲ್ಲಿ ಚಿತ್ರೀಕರಣ ಶುರುವಾಗಲಿದೆ. ತನ್ನದು ಚೆನ್ನೈನ ಸಂಪ್ರದಾಯಸ್ಥ ಹುಡುಗಿ ಪಾತ್ರ. ಇದೊಂದು ಫ್ಯಾಮಿಲಿ ಎಂಟರ್ಟೇನ್ಮೆಂಟ್ ಸಿನಿಮಾ ಎಂದು ವಿವರವನ್ನೂ ಒದಗಿಸಿದ್ದಾಳೆ ಸುಂದರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


