ವೃತ್ತಿ & ಉದ್ಯೋಗ ಅವಕಾಶಗಳು

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ದೀರಾ? ಬೆಂಗಳೂರಿನಲ್ಲಿದೆ ಉತ್ತಮ ಉದ್ಯೋಗಾವಕಾಶ; ₹70,000 ಸಂಬಳ

ನವಕಲ್ಯಾಣ ಕರ್ನಾಟಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ 2026-27ನೇ ಸಾಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ದೀರಾ? ಬೆಂಗಳೂರಿನಲ್ಲಿದೆ ಉತ್ತಮ ಉದ್ಯೋಗಾವಕಾಶ; ₹70,000 ಸಂಬಳ
ನವಕಲ್ಯಾಣ ಕರ್ನಾಟಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಸಂಸ್ಥೆ — AI Image
Published On :

ಬೆಂಗಳೂರು: ಬ್ಯಾಂಕಿಂಗ್ ಹಾಗೂ ಸಹಕಾರ ಕ್ಷೇತ್ರದಲ್ಲಿ ಉತ್ತಮ ವೇತನದೊಂದಿಗೆ ಸ್ಥಿರವಾದ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಮಹತ್ವದ ಮತ್ತು ಆಕರ್ಷಕ ಅವಕಾಶ. ಬೆಂಗಳೂರಿನ ರಾಜಾಜಿನಗರದಲ್ಲಿ ಪ್ರಧಾನ ಕಚೇರಿ ಹೊಂದಿರುವ ನವಕಲ್ಯಾಣ ಕರ್ನಾಟಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಸಂಸ್ಥೆಯು, ತನ್ನ ಆಡಳಿತ ಮತ್ತು ಗ್ರಾಹಕ ಸೇವಾ ವಿಭಾಗಗಳನ್ನು ಬಲಪಡಿಸಲು ಅರ್ಹ ಹಾಗೂ ಅನುಭವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ಡೆಪ್ಯುಟಿ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್: ಬ್ಯಾಂಕಿಂಗ್ ಮತ್ತು ಸಹಕಾರಿ ಸಂಸ್ಥೆಗಳ ಆಡಳಿತ ನಿರ್ವಹಣೆಯಲ್ಲಿ ಅನುಭವ ಹೊಂದಿರುವ ಪದವೀಧರರಿಗೆ ಆದ್ಯತೆ.

  • ಕಸ್ಟಮರ್ ರಿಲೇಶನ್‌ಶಿಪ್ ಎಕ್ಸಿಕ್ಯೂಟಿವ್: ಗ್ರಾಹಕರ ಸೇವೆ ಮತ್ತು ದೈನಂದಿನ ಬ್ಯಾಂಕಿಂಗ್ ವ್ಯವಹಾರಗಳ ನಿರ್ವಹಣೆಗಾಗಿ ಈ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಹತೆ:

  • ವಿದ್ಯಾರ್ಹತೆ:

    • ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಮುಗಿಸಿರಬೇಕು.

    • ಕಂಪ್ಯೂಟರ್/ತಾಂತ್ರಿಕ ವಿದ್ಯಾರ್ಹತೆ ಮತ್ತು ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

ವಯೋಮಿತಿ:

  • ಕನಿಷ್ಠ 30 ವರ್ಷ ಮತ್ತು ಗರಿಷ್ಠ 45 ವರ್ಷ.

ಪ್ರಮುಖ ದಿನಾಂಕ:

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 09, 2026

ವೇತನ ಶ್ರೇಣಿ:

  • ₹23,000 ರಿಂದ 51,000 ರೂಪಾಯಿಗಳಾಗಿದ್ದು, ಮನೆಬಾಡಿಗೆ ಭತ್ಯೆ, ತುಟ್ಟಿ ಭತ್ಯೆ, HRA, PF, Gratuity, ಅಟಲ್ ಪೆನ್ಷನ್ ಮತ್ತು ಆರೋಗ್ಯ ವಿಮೆ ಸೇರಿದಂತೆ ಒಟ್ಟು ಮಾಸಿಕ ಆದಾಯ ಅಂದಾಜು 70,000 ರೂಪಾಯಿಗಳ ವರೆಗೆ ಸಿಗಲಿದೆ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದೊಳಗೆ (ಅಕ್ಟೋಬರ್ 09, 2026) ಸಂಸ್ಥೆಯ ಅಧಿಕೃತ ನಿಯಮಾವಳಿಗಳ ಪ್ರಕಾರ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿರುತ್ತದೆ. ಹೆಚ್ಚಿನ ಅಧಿಕೃತ ಮಾಹಿತಿ, ನಿಖರ ವಯೋಮಿತಿ ಮತ್ತು ಅರ್ಜಿ ನಮೂನೆಗಾಗಿ ಅಭ್ಯರ್ಥಿಗಳು ನವಕಲ್ಯಾಣ ಕರ್ನಾಟಕ ಸೌಹಾರ್ದ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಬಹುದು.

ಅರ್ಜಿ ತಲುಪಿಸಬೇಕಾದ ವಿಳಾಸ:

  • ಮುಖ್ಯಕಾರ್ಯನಿರ್ವಾಹಣಾಧಿಕಾರಿ,

    ನವಕಲ್ಯಾಣ ಕರ್ನಾಟಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ,

    ನಂ. 277/27, 59ನೇ ಅಡ್ಡರಸ್ತೆ, ವಾಟಾಳ್ ನಾಗರಾಜ್ ರಸ್ತೆ,

    3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560 010.

ಆಸಕ್ತರು ತಮ್ಮ ಸ್ವ-ಹಸ್ತಾಕ್ಷರದ ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ, ಸಂಪರ್ಕ ವಿವರಗಳನ್ನು ನಮೂದಿಸಬೇಕು. ಇದರೊಂದಿಗೆ ಎಸ್ಎಸ್ಎಲ್‍ಸಿ, ಪದವಿ, ಸ್ನಾತಕೋತ್ತರ ಪದವಿಯ ಎಲ್ಲಾ ಸೆಮಿಸ್ಟರ್ ಅಂಕಪಟ್ಟಿಗಳು ಹಾಗೂ ಅನುಭವ ಪ್ರಮಾಣಪತ್ರಗಳ ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಬೇಕು.

*ಅರ್ಜಿಯ ಲಕೋಟೆಯ ಮೇಲೆ ಯಾವ ಹುದ್ದೆಗೆ ಅರ್ಜಿ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು (ಉದಾ: ಉಪ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅಥವಾ ಗ್ರಾಹಕ ಸಂಪರ್ಕ ನಿರ್ವಾಹಕರು).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.