ಕೇಂದ್ರ ಸರ್ಕಾರಿ ಉದ್ಯೋಗಾವಕಾಶ: 212 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ UPSC
UPSC Recruitment 2026: ಕೇಂದ್ರ ಸರ್ಕಾರದ ಕೆಲಸಕ್ಕೆ ಕಾಯುತ್ತಿರುವವರಿಗೆ ಭರ್ಜರಿ ಸುದ್ದಿ. UPSC ವಿವಿಧ ಸಚಿವಾಲಯಗಳಲ್ಲಿ ಖಾಲಿ ಇರುವ ಒಟ್ಟು 212 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:

UPSC Recruitment 2026: ಕೇಂದ್ರ ಸರ್ಕಾರದ ಕೆಲಸಕ್ಕೆ ಕಾಯುತ್ತಿರುವವರಿಗೆ ಭರ್ಜರಿ ಸುದ್ದಿ. ಕೇಂದ್ರ ಲೋಕಸೇವಾ ಆಯೋಗ ಅಂದರೆ UPSC ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 212 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆ ಸೆಪ್ಟೆಂಬರ್ 12 ರಿಂದ ಆರಂಭವಾಗಿದ್ದು, ನೇಮಕಾತಿ ಕುರಿತ ವಿವರ ಇಲ್ಲಿದೆ:
ಹುದ್ದೆಗಳ ವಿವರ:
ನೇಮಕಾತಿ ಸಂಸ್ಥೆ: ಕೇಂದ್ರ ಲೋಕಸೇವಾ ಆಯೋಗ
ಒಟ್ಟು ಹುದ್ದೆಗಳು: 212
ಸಹಾಯಕ ಸಾರ್ವಜನಿಕ ಅಭಿಯೋಜಕರು: 140 ಹುದ್ದೆಗಳು
ಸ್ಪೆಷಲಿಸ್ಟ್ ಗ್ರೇಡ್ 3 ಸಹಾಯಕ ಪ್ರಾಧ್ಯಾಪಕರು (ಜನರಲ್ ಮೆಡಿಸಿನ್): 60 ಹುದ್ದೆಗಳು
ಸ್ಪೆಷಲಿಸ್ಟ್ ಗ್ರೇಡ್ 3 ಸಹಾಯಕ ಪ್ರಾಧ್ಯಾಪಕರು (ಅಂಗರಚನಾಶಾಸ್ತ್ರ): 4 ಹುದ್ದೆಗಳು
ಸಾರ್ವಜನಿಕ ಕಾನೂನು ಅಧಿಕಾರಿ / ಜಿಲ್ಲಾ ಮೊಕದ್ದಮೆ ಅಧಿಕಾರಿ / ಕಾನೂನು ಅಧಿಕಾರಿ (ಲಡಾಖ್): 4 ಹುದ್ದೆಗಳು
ಸಹಾಯಕ ಸಂಪಾದಕರು (ಭಾರತೀಯ ಗಣಿ ಬ್ಯೂರೋ): 2 ಹುದ್ದೆಗಳು
ಸ್ಪೆಷಲಿಸ್ಟ್ ಗ್ರೇಡ್ 2 (ಜೂನಿಯರ್ ಸ್ಕೇಲ್ - ಅರಿವಳಿಕೆಶಾಸ್ತ್ರ): 1 ಹುದ್ದೆ
ಸ್ಪೆಷಲಿಸ್ಟ್ ಗ್ರೇಡ್ 2 (ಜೂನಿಯರ್ ಸ್ಕೇಲ್ - ಪೀಡಿಯಾಟ್ರಿಕ್ಸ್): 1 ಹುದ್ದೆ
ಅರ್ಹತೆ:
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ MBBS, ಕಾನೂನು ಪದವಿ (Law Degree), ಸ್ನಾತಕೋತ್ತರ ಪದವಿ (PG in relevant subjects), ಅಥವಾ CA/ICWA/Master's Degree ಪಡೆದಿರಬೇಕು.
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 50 ವರ್ಷಗಳು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ಜೊತೆಗೆ ಲಡಾಖ್ ನಿವಾಸಿಗಳಿಗೆ ಲಡಾಖ್ ಕೇಂದ್ರಾಡಳಿತ ಪ್ರದೇಶದ ತಹಶೀಲ್ದಾರ್ ನೀಡಿರುವ ಸ್ಥಳೀಯ ವಾಸಸ್ಥಳ ಪ್ರಮಾಣಪತ್ರ ಕಡ್ಡಾಯ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: 12-09-2026
ಕೊನೆಯ ದಿನಾಂಕ (ಸಾಮಾನ್ಯ ಹುದ್ದೆಗಳಿಗೆ): 02-10-2026 ( (ಲಡಾಖ್ ಆಡಳಿತದ ವ್ಯಾಪ್ತಿಯ ಹುದ್ದೆಗಳಿಗೆ ಅಕ್ಟೋಬರ್ 9 ರವರೆಗೆ ಅವಕಾಶವಿದೆ).
ಅರ್ಜಿ ಶುಲ್ಕ: ₹25 (ಮಹಿಳೆಯರು, SC, ST ಮತ್ತು PwBD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ).
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು UPSC ಯ ಅಧಿಕೃತ ಅಪ್ಲಿಕೇಶನ್ ಪೋರ್ಟಲ್ UPSC Online Portal ಗೆ ಭೇಟಿ ನೀಡಿ, 'ಒನ್ ಟೈಮ್ ರಿಜಿಸ್ಟ್ರೇಷನ್' (OTR) ಮಾಡಿಕೊಳ್ಳುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




