SSLC ಪಾಸದವರಿಗೆ ಗುಡ್ ನ್ಯೂಸ್: ವಿಜಯಪುರ ಬ್ಯಾಂಕ್‌ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಬಳ ₹43 ಸಾವಿರ
ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಲಿಮಿಟೆಡ್ ಒಟ್ಟು 60 ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ:

SS Bank Recruitment 2026: ಸರ್ಕಾರಿ ಅಥವಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಎದುರು ನೋಡುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ. ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 60 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. ಕೇವಲ SSLC ಪಾಸಾದ ಅಭ್ಯರ್ಥಿಗಳಿಂದ ಹಿಡಿದು ಯಾವುದೇ ಪದವಿ ಮುಗಿಸಿದವರಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಆಕರ್ಷಕ ವೇತನ ಶ್ರೇಣಿಯ ಇದೆ. ಹಾಗಾಗಿ, ನೇಮಕಾತಿ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಒಟ್ಟು 60 ಹುದ್ದೆಗಳು
ಅಟೆಂಡರ್ –3
ಕಿರಿಯ ಸಹಾಯಕ– 15
ಹಿರಿಯ ಸಹಾಯಕ– 10
ಜೂನಿಯರ್ ಮ್ಯಾನೇಜರ್– 06
ವಾಹನ ಚಾಲಕ– 1
ಸಿಪಾಯಿ- 19
ನೈಟ್ ವಾಚ್‌ಮನ್- 6
ಅರ್ಹತೆ:
ವಿದ್ಯಾರ್ಹತೆ:
ಕಿರಿಯ ವ್ಯವಸ್ಥಾಪಕರು, ಹಿರಿಯ ಸಹಾಯಕರು, ಕಿರಿಯ ಸಹಾಯಕರು: ಅಂಗೀಕೃತ ವಿಶ್ವವಿದ್ಯಾಲಯದ ಪದವಿ ಹಾಗೂ ಕಂಪ್ಯೂಟರ್ ಜ್ಞಾನ. (ಸಾಮಾನ್ಯ/ಇತರೆ ವರ್ಗಕ್ಕೆ ಕನಿಷ್ಠ 60% ಅಂಕ, SC/ST/Cat-1/ಮಾಜಿ ಸೈನಿಕರಿಗೆ ಕನಿಷ್ಠ 45% ಅಂಕ)
ಅಟೆಂಡರ್, ವಾಹನ ಚಾಲಕ, ಸಿಪಾಯಿ, ನೈಟ್ ವಾಚ್‌ಮನ್: ಎಸ್.ಎಸ್.ಎಲ್.ಸಿ/ CBSE ತೇರ್ಗಡೆ. (ವಾಹನ ಚಾಲಕನಿಗೆ ಚಾಲ್ತಿಯಲ್ಲಿರುವ ಲಘು ವಾಹನ ಚಾಲನಾ ಪರವಾನಗಿ ಕಡ್ಡಾಯ)
ಸೂಚನೆ: ಎಲ್ಲಾ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯ.
ವಯೋಮಿತಿ (15-09-2026 ಕ್ಕೆ ಅನ್ವಯಿಸುವಂತೆ):
ಕನಿಷ್ಠ ವಯಸ್ಸು: 18 ವರ್ಷ ತುಂಬಿರಬೇಕು.
ಗರಿಷ್ಠ ವಯಸ್ಸು: 35 ವರ್ಷ (2A, 2B, 3A, 3Bಗೆ 3 ವರ್ಷ, SC / ST / ಪ್ರವರ್ಗ-1ಗೆ 5 ವರ್ಷ ರಿಯಾಯಿತಿ ಇದೆ)
ಅರ್ಜಿ ಶುಲ್ಕ
ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗದವರು: ರೂ. 1,200/-
SC / ST / ಪ್ರವರ್ಗ-1 ಹಾಗೂ ಮಾಜಿ ಸೈನಿಕರು: ರೂ. 600/-
ಸಂಬಳ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಯ ಆಧಾರದ ಮೇಲೆ ಪ್ರತಿ ತಿಂಗಳು ₹14,550 ರಿಂದ ₹43,200 ವರೆಗೆ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಕಿರಿಯ ವ್ಯವಸ್ಥಾಪಕ, ಹಿರಿಯ ಹಾಗೂ ಕಿರಿಯ ಸಹಾಯಕ ಹುದ್ದೆಗಳಿಗೆ:
ಅರ್ಹತಾ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ಲಿಖಿತ ಪರೀಕ್ಷೆಯ ಒಟ್ಟು ಅಂಕ: 200 (ಕನ್ನಡ ಭಾಷೆ - 50, ಸಹಕಾರ - 50, ಇಂಗ್ಲಿಷ್ - 25, ಸಾಮಾನ್ಯ ಜ್ಞಾನ - 25, ಬ್ಯಾಂಕಿಂಗ್ - 25, ಭಾರತದ ಸಂವಿಧಾನ - 25).
ಲಿಖಿತ ಪರೀಕ್ಷೆಯ ಅಂಕಗಳನ್ನು 85% ಕ್ಕೆ ಇಳಿಸಿ, 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಅಟೆಂಡರ್, ಸಿಪಾಯಿ, ರಾತ್ರಿ ಕಾವಲುಗಾರ ಹಾಗೂ ವಾಹನ ಚಾಲಕ ಹುದ್ದೆಗಳಿಗೆ:
SSLC ಮೆರಿಟ್ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ನೇರ ಸಂದರ್ಶನಕ್ಕೆ ಕರೆಯಲಾಗುವುದು (ವಾಹನ ಚಾಲಕರಿಗೆ ಪ್ರಾವೀಣ್ಯತೆ ಪರೀಕ್ಷೆ ಇರುತ್ತದೆ).
ಆಯ್ಕೆಯಾದ ಅಭ್ಯರ್ಥಿಗಳು 2 ವರ್ಷಗಳ ಪರೀಕ್ಷಾರ್ಥ ಅವಧಿಯಲ್ಲಿ (Probationary Period) ಇರಬೇಕಾಗುತ್ತದೆ ಮತ್ತು ಬ್ಯಾಂಕ್ ಸೂಚಿಸಿದಂತೆ ಭದ್ರತಾ ಠೇವಣಿ/ಬಾಂಡ್ ಒದಗಿಸಬೇಕಾಗುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 26-08-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-09-2026 (ಸಂಜೆ 5:30 ರವರೆಗೆ)
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ ಮಾತ್ರ (https://ssbankvijaypur.com/index.php/appln_form)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




