ಬೆಂಗಳೂರಿನಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ; ಈ ಕ್ರೀಡೆಗಳ ಚಾಂಪಿಯನ್‌ಗಳಿಗೆ ರೈಲ್ವೆಯಲ್ಲಿ ಕೇಂದ್ರ ಸರ್ಕಾರಿ ನೌಕರಿ
ರೈಲ್ವೇ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಕ್ರೀಡಾಪಟುಗಳಿಗೆ ಅತ್ಯುತ್ತಮ ಅವಕಾಶ ಒದಗಿಬಂದಿದೆ. ಬೆಂಗಳೂರಿನ ಯಲಹಂಕದಲ್ಲಿರುವ ಪ್ರಸಿದ್ಧ ರೈಲ್ ವೀಲ್ ಫ್ಯಾಕ್ಟರಿ ಪ್ರಸಕ್ತ ಸಾಲಿನ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

RWF Bengaluru Recruitment 2026: ಕೇಂದ್ರ ಸರ್ಕಾರಿ ಕೆಲಸದ ಕನಸು ಕಾಣುತ್ತಿರುವವರಿಗೆ ಭಾರತೀಯ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಕ್ರೀಡಾ ಕೋಟಾದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಕ್ರೀಡಾಪಟುಗಳಿಗೆ ಕರ್ನಾಟಕದಲ್ಲೇ ರೈಲ್ವೇ ಇಲಾಖೆ ಅತ್ಯುತ್ತಮ ಅವಕಾಶ ನೀಡಿದ್ದು, ಬೆಂಗಳೂರಿನ ಯಲಹಂಕದಲ್ಲಿರುವ ಪ್ರಸಿದ್ಧ ರೈಲ್ ವೀಲ್ ಫ್ಯಾಕ್ಟರಿಯು ಪ್ರಸಕ್ತ ಸಾಲಿನ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಯ ವಿವರ:
ಸಂಸ್ಥೆಯ ಹೆಸರು: ರೈಲ್ ವೀಲ್ ಫ್ಯಾಕ್ಟರಿ (ರೈಲ್ವೆ ಸಚಿವಾಲಯ), ಬೆಂಗಳೂರು
ಒಟ್ಟು ಹುದ್ದೆಗಳು: 15 ಹುದ್ದೆಗಳು (ಕ್ರೀಡಾ ಕೋಟಾ)
ಹುದ್ದೆಗಳ ಹೆಸರು: ಟೆಕ್ನೀಷಿಯನ್ ಗ್ರೇಡ್-III (Technician Gr. III), ಜೂನಿಯರ್ ಕ್ಲರ್ಕ್/ಅಕೌಂಟ್ಸ್ ಕ್ಲರ್ಕ್ (Junior Clerk/Accounts Clerk)
ಉದ್ಯೋಗ ಸ್ಥಳ: ಯಲಹಂಕ, ಬೆಂಗಳೂರು
ಅರ್ಹತೆ:
ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ/SSLC ಜೊತೆಗೆ ಐಟಿಐ (ITI) ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (ಪಿಯುಸಿ) ಉತ್ತೀರ್ಣರಾಗಿರಬೇಕು. ಇದರೊಂದಿಗೆ ಸಂಬಂಧಿತ ಕ್ರೀಡಾ ವಿಭಾಗದಲ್ಲಿ ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸಾಧನೆ ಮಾಡಿರಬೇಕು.
ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 25 ವರ್ಷ ವಯೋಮಿತಿ ಹೊಂದಿರಬೇಕು. (ರೈಲ್ವೆ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ).
ಅರ್ಜಿ ಶುಲ್ಕ:
ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ: ₹500/-
SC/ST / ಮಹಿಳೆ / ಅಂಗವಿಕಲ / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ: ₹250/-
ಪಾವತಿ ವಿಧಾನ: ಇಂಡಿಯನ್ ಪೋಸ್ಟಲ್ ಆರ್ಡರ್ ಅಥವಾ DD ಮೂಲಕ ಪಾವತಿಸಬೇಕು.
(ಪರೀಕ್ಷೆಗೆ ಹಾಜರಾದ ನಂತರ ಸಾಮಾನ್ಯ ಅಭ್ಯರ್ಥಿಗಳಿಗೆ 400 ರೂಪಾಯಿ ಹಾಗೂ SC/ST / ಮಹಿಳೆ / ಅಂಗವಿಕಲ / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳ 250 ರೂಪಾಯಿ ಸಂಪೂರ್ಣ ಶುಲ್ಕವನ್ನೂ ಮರುಪಾವತಿಯಾಗಲಿದೆ.)
ಅರ್ಜಿ ಸಲ್ಲಿಸುವ ವಿಧಾನ:
ರೈಲ್ ವೀಲ್ ಫ್ಯಾಕ್ಟರಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಎ-4 ಅಳತೆಯ ಬಿಳಿ ಕಾಗದದ ಮೇಲೆ ಅರ್ಜಿ ನಮೂನೆಯನ್ನು ಪ್ರಿಂಟ್ ತೆಗೆದುಕೊಳ್ಳಿ.
ನಿಮ್ಮ ಸ್ವಹಸ್ತಾಕ್ಷರದಲ್ಲಿ (ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ) ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ಅಂಟಿಸಿ ಮತ್ತು ಅಗತ್ಯವಿರುವ ಎಲ್ಲಾ ವಿದ್ಯಾರ್ಹತೆ ಹಾಗೂ ಕ್ರೀಡಾ ಪ್ರಮಾಣಪತ್ರಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ.
ಲಕೋಟೆಯ ಮೇಲೆ “Application against Sports Quota (Open Advertisement) dated 25.07.2026 – Recruitment for the year 2026-27” ಎಂದು ಸ್ಪಷ್ಟವಾಗಿ ಬರೆಯಿರಿ.
ಅರ್ಜಿ ಕಳುಹಿಸಬೇಕಾದ ವಿಳಾಸ:
Assistant Personnel Officer, Personnel Department, Rail Wheel Factory, Administrative Building, Yelahanka, Bangalore - 560064.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




