ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶ; 233 ನರ್ಸಿಂಗ್, ಫಾರ್ಮಸಿ ಆಫೀಸರ್ ಹುದ್ದೆಗಳಿಗೆ KEA ಅರ್ಜಿ ಆಹ್ವಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ಖಾಲಿ ಇರುವ ಒಟ್ಟು 233 ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಗ್ರೂಪ್-ಸಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.

KEA Recruitment 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ESIS ವೈದ್ಯಕೀಯ ಸೇವೆಗಳ ಇಲಾಖೆ ಮತ್ತು ವಿವಿಧ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 233 ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಗ್ರೂಪ್-ಸಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಉಳಿಕೆ ಮೂಲ ವೃಂದ:
ಫಾರ್ಮಸಿ ಅಧಿಕಾರಿ: 98 (92 ಸಾಮಾನ್ಯ + 05 ಮಾಜಿ ಸೈನಿಕರು + 01 ಬಾಕಿ ಹುದ್ದೆ)
ನರ್ಸಿಂಗ್ ಅಧಿಕಾರಿ (ಶುಶ್ರೂಷಾಧಿಕಾರಿ): 90 (72 ಸಾಮಾನ್ಯ + 11 ಮಾಜಿ ಸೈನಿಕರು + 07 ಬಾಕಿ ಹುದ್ದೆಗಳು)
ಕಲ್ಯಾಣ-ಕರ್ನಾಟಕ ವೃಂದ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ: ನರ್ಸಿಂಗ್ ಅಧಿಕಾರಿ 23 (17 ಸಾಮಾನ್ಯ + 06 ಬಾಕಿ ಉಳಿದಿರುವ ಹುದ್ದೆಗಳು)
ESI ಯೋಜನೆ (ಕಾರ್ಮಿಕ ರಾಜ್ಯ ವಿಮಾ ಯೋಜನೆ) ಫಾರ್ಮಸಿ ಅಧಿಕಾರಿ 11 (06 ಸಾಮಾನ್ಯ + 05 ಮಾಜಿ ಸೈನಿಕರು)
ESI ವೈದ್ಯಕೀಯ ಸೇವೆಗಳ ಇಲಾಖೆ ನರ್ಸಿಂಗ್ ಅಧಿಕಾರಿ 11 (ಮಾಜಿ ಸೈನಿಕರು)
ಒಟ್ಟು 233 ಹುದ್ದೆ
ಅರ್ಹತೆ:
ವಿದ್ಯಾರ್ಹತೆ:
ಫಾರ್ಮಸಿ ಅಧಿಕಾರಿ: ಡಿಪ್ಲೊಮಾ ಇನ್ ಫಾರ್ಮಸಿ (D.Pharm) ಮತ್ತು ಕರ್ನಾಟಕ ಫಾರ್ಮಸಿ ಕೌನ್ಸಿಲ್ ನೋಂದಣಿ
ನರ್ಸಿಂಗ್ ಅಧಿಕಾರಿ (ಶುಶ್ರೂಷಾಧಿಕಾರಿ): GNM ಅಥವಾ ಬಿ.ಎಸ್ಸಿ ನರ್ಸಿಂಗ್ (B.Sc Nursing) ಮತ್ತು ನರ್ಸಿಂಗ್ ಕೌನ್ಸಿಲ್ ನೋಂದಣಿ
ವಯೋಮಿತಿ (30 ಆಗಸ್ಟ್ 2026 ಕ್ಕೆ ಅನ್ವಯಿಸುವಂತೆ)
ಕನಿಷ್ಠ ವಯಸ್ಸು: 18 ವರ್ಷಗಳು
ಸಾಮಾನ್ಯ ಅರ್ಹತೆ (GM): ಗರಿಷ್ಠ 40 ವರ್ಷಗಳು
ಸಂಬಳ:
ಫಾರ್ಮಸಿ ಅಧಿಕಾರಿ: ₹ 44,425 – ₹ 83,700
ನರ್ಸಿಂಗ್ ಅಧಿಕಾರಿ (ಶುಶ್ರೂಷಾಧಿಕಾರಿ): ಗರಿಷ್ಠ ₹ 99,400 ವರೆಗೆ
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಒಬಿಸಿ (2A/2B/3A/3B) ಅಭ್ಯರ್ಥಿಗಳಿಗೆ: ₹750 (ಅರ್ಜಿ ಶುಲ್ಕ ₹500 + ಪ್ರಕ್ರಿಯೆ ಶುಲ್ಕ ₹250)
SC/ST/ಪವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: ರಿಯಾಯಿತಿ ಇರಲಿದೆ.
ಪ್ರಮುಖ ದಿನಾಂಕಗಳು
ಅಧಿಸೂಚನೆ ಪ್ರಕಟಣೆ: 06 ಆಗಸ್ಟ್ 2026
ಅರ್ಜಿ ಸಲ್ಲಿಕೆ ಆರಂಭ: 07 ಆಗಸ್ಟ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಆಗಸ್ಟ್ 2026
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು KEA ನಡೆಸುವ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಮತ್ತು ಮೂಲ ದಾಖಲಾತಿಗಳ ಪರಿಶೀಲನೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಕನ್ನಡವನ್ನು ಒಂದು ಭಾಷೆಯಾಗಿ ಓದದ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (KLPT) ಇರಲಿದೆ.
ಅರ್ಜಿ ಸಲ್ಲಿಕೆ
ಅರ್ಹ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ ಆದ https://cetonline.karnataka.gov.in/kea/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



