ಸಾಲ ಮಾಡಿ ಖರೀದಿಸಿದ ಮೊಬೈಲ್ EMI ಕಟ್ಟದ ತಕ್ಷಣ ಮೊಬೈಲ್ ಲಾಕ್ ಮಾಡುವಂತಿಲ್ಲ: ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದ RBI
ಬ್ಯಾಂಕ್‌ಗಳಿಂದ ಸಾಲ ಪಡೆದು ಸರಿಯಾದ ಸಮಯಕ್ಕೆ ಮರುಪಾವತಿ ಮಾಡದಿದ್ದರೆ ಮೊಬೈಲ್ ಫೋನ್ ಲಾಕ್ ಮಾಡಲಾಗುತ್ತದೆ ಎಂಬ ಆತಂಕ ಅನೇಕರಲ್ಲಿದೆ. ಈ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದು, ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ): ಕೆಲವರಿಗೆ Apple ಪ್ರೀಮಿಯಂ ಬೇಕು, ಕೆಲವರಿಗೆ Samsung ನ ಬಾಳಿಕೆ ಬೇಕು, ಇನ್ನೂ ಕೆಲವರಿಗೆ OnePlus ನ ಸೂಪರ್ ವ್ಯಾಲ್ಯೂ ಬೇಕು. ಹೀಗೆ, ರೆಡ್‌ಮಿ, ಒಪ್ಪೋ, ರಿಯಲ್‌ಮಿ, ಮೋಟೋ, ಇನ್‌ಫಿನಿಕ್ಸ್ ನಂತಹ ಬ್ರಾಂಡ್‌ಗಳನ್ನು ಕೈಗೆಟುಕುವ ಬೆಲೆಗೆ ಖರೀದಿಸುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಆದರೆ ಪೂರ್ತಿ ಹಣ ಒಂದೇ ಬಾರಿ ಕೊಡಲು ಆಗದ ಕಾರಣ ಬಹಳಷ್ಟು ಜನರು ಬ್ಯಾಂಕ್‌ಗಳು ಮತ್ತು NBFC ಗಳಿಂದ Device Financing ಅಥವಾ No Cost EMI ಮೂಲಕ ಮೊಬೈಲ್ ಖರೀದಿಸುತ್ತಾರೆ. ಇಲ್ಲಿಯೇ ಸಮಸ್ಯೆ ಶುರುವಾಗುತ್ತದೆ. ಅದುವೇ, EMI ಕಟ್ಟದಿದ್ದರೆ ಮೊಬೈಲ್ ಲಾಕ್ ಆಗುತ್ತಾ?
ಹೌದು. ಕೆಲವು ಕಂಪನಿಗಳು ಮತ್ತು ಫೈನಾನ್ಸ್ ಪಾರ್ಟ್ನರ್‌ಗಳು ಈಗ "ಫೋನ್ ಲಾಕ್ ಟೆಕ್ನಾಲಜಿ" ಬಳಸುತ್ತಿದ್ದಾರೆ. ನೀವು ಸಾಲ ತೆಗೆದುಕೊಂಡು ಸರಿಯಾದ ಸಮಯಕ್ಕೆ EMI ಮರುಪಾವತಿ ಮಾಡದಿದ್ದರೆ ಕಂಪನಿಯು ರಿಮೋಟ್ ಆಗಿ ನಿಮ್ಮ ಮೊಬೈಲ್ ಅನ್ನು ಲಾಕ್ ಮಾಡಬಹುದು. ಅಂದರೆ ಫೋನ್ ಆನ್ ಮಾಡಿದರೂ ಬಳಸಲು ಆಗುವುದಿಲ್ಲ. ಕರೆ, ಇಂಟರ್ನೆಟ್, ಆ್ಯಪ್ ಯಾವುದೂ ಕೆಲಸ ಮಾಡುವುದಿಲ್ಲ. ಹಾಗಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕುರಿತು ಸ್ಪಷ್ಟ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:
ಭಾರತೀಯ ರಿಸರ್ವ್ ಬ್ಯಾಂಕ್, ಗ್ರಾಹಕರು ಫೋನ್ EMI ಪಾವತಿಸಲು ವಿಫಲರಾದರೆ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು (NBFC) ಇಷ್ಟಬಂದಂತೆ ಫೋನ್‌ಗಳನ್ನು ಲಾಕ್ ಮಾಡುವಂತಿಲ್ಲ. ಅದರಂತೆ, ಜನವರಿ 1, 2027 ರಿಂದ ಜಾರಿಗೆ ಬರುವಂತೆ, ಆರ್‌ಬಿಐ ಹೊಸ ನಿಯಮಗಳ ಪ್ರಕಾರ, ಸಾಲ ಪಾವತಿ ಕನಿಷ್ಠ 30 ದಿನಗಳು ವಿಳಂಬವಾಗದ ಹೊರತು ಮತ್ತು ಸಾಲಗಾರನಿಗೆ ಸೂಚನೆಯನ್ನು ಕಳುಹಿಸದ ಹೊರತು ಸಾಲ ನೀಡಿದವರು ಆ ಡಿವೈಸ್ ಮೇಲೆ ನಿರ್ಬಂಧಗಳನ್ನು ವಿಧಿಸಲು ಸಾಧ್ಯವಿಲ್ಲ. ಹಾಗಾದ್ರೆ, ಸಾಲ ಮರುಪಾವತಿ ಮಾಡದಾಗ ಮೊಬೈಲ್ ಫೋನ್ ಯಾವಾಗ ಲಾಕ್ ಆಗುತ್ತದೆ?
EMI ತಪ್ಪಿದ ತಕ್ಷಣ ಫೋನ್ ಲಾಕ್ ಆಗುವುದಿಲ್ಲ
ಒಂದು EMI ಮಿಸ್ ಆದ ತಕ್ಷಣವೇ ಫೋನ್ ಲಾಕ್ ಮಾಡಲು ಆರ್‌ಬಿಐ ಅವಕಾಶ ನೀಡಿಲ್ಲ. ಅದರಂತೆ, ಸಾಲದ ಖಾತೆಯು ಕನಿಷ್ಠ 30 ದಿನಗಳವರೆಗೆ ಬಾಕಿ ಇದ್ದರೆ ಮಾತ್ರ ಹಂತ-ಹಂತವಾಗಿ ನಿರ್ಬಂಧಗಳನ್ನು ಹೇರಬಹುದು. ಅದಕ್ಕೂ ಮುನ್ನ ಗ್ರಾಹಕರಿಗೆ ಅಧಿಕೃತ ನೋಟಿಸ್ ನೀಡುವುದು ಕಡ್ಡಾಯ. ಜೊತೆಗೆ, ಸಂಪೂರ್ಣ ಲಾಕ್ ಅಥವಾ ಕಠಿಣ ನಿರ್ಬಂಧಗಳನ್ನು 60 ದಿನಗಳವರೆಗೆ ಸಾಲ ಮರುಪಾವತಿ ಮಾಡದಿದ್ದರೆ ಮಾತ್ರ ಅನ್ವಯಿಸಲು ಅವಕಾಶವಿದೆ.
ಯಾವ ಫೋನ್‌ಗಳನ್ನು ಮಾತ್ರ ಲಾಕ್ ಮಾಡಬಹುದು?
ನೀವು ಯಾವ ಮೊಬೈಲ್ ಖರೀದಿಸಲು ಲೋನ್ (EMI) ಪಡೆದಿದ್ದೀರೋ, ಆ ನಿರ್ದಿಷ್ಟ ಫೋನ್ ಅನ್ನು ಮಾತ್ರ ಹಣಕಾಸು ಸಂಸ್ಥೆಗಳು ನಿಯಂತ್ರಿಸಬಹುದು. ಹಾಗಾಗಿ, ನೀವು ವೈಯಕ್ತಿಕ ಸಾಲ, ಗೃಹ ಸಾಲ ಅಥವಾ ವಾಹನ ಸಾಲದ EMI ಕಟ್ಟದಿದ್ದರೆ, ಬ್ಯಾಂಕುಗಳು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಅನ್ನು ಲಾಕ್ ಮಾಡುವಂತಿಲ್ಲ.
ಲಾಕ್ ಮಾಡಿದರು ಸೌಲಭ್ಯಗಳನ್ನು ಬಂದ್ ಮಾಡುವಂತಿಲ್ಲ?
ಫೋನ್ ಅನ್ನು ಭಾಗಶಃ ನಿಯಂತ್ರಿಸಿದರೂ, ಗ್ರಾಹಕರಿಗೆ ಅಗತ್ಯವಿರುವ ಇನ್‌ಕಮಿಂಗ್ ಕರೆಗಳು ಮತ್ತು SMS ಸೇವೆಗಳು ಜೊತೆಗೆ ತುರ್ತು ಕರೆಗಳು ಮತ್ತು ಸರ್ಕಾರದ ಸಾರ್ವಜನಿಕ ಸುರಕ್ಷತೆಯ ನೋಟಿಫಿಕೇಶನ್‌ಗಳನ್ನು ಬಂದ್ ಮಾಡುವಂತಿಲ್ಲ!
EMI ಕಟ್ಟಿದ 1 ಗಂಟೆಯೊಳಗೆ ಫೋನ್ ಅನ್‌ಲಾಕ್ ಆಗಬೇಕು!
ಮುಂದುವರೆದು, ಗ್ರಾಹಕರು ಬಾಕಿ ಇರುವ EMI ಹಣವನ್ನು ಪಾವತಿಸಿದ ತಕ್ಷಣ, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು 1 ಗಂಟೆಯ ಒಳಗಾಗಿ ಫೋನ್‌ನ ಎಲ್ಲಾ ಸೌಲಭ್ಯಗಳನ್ನು ಮರುಸ್ಥಾಪಿಸಬೇಕು. ಒಂದು ವೇಳೆ ಬ್ಯಾಂಕ್ ತಡ ಮಾಡಿದರೆ, ವಿಳಂಬವಾದ ಪ್ರತಿ ಗಂಟೆಗೆ ಗ್ರಾಹಕರಿಗೆ ₹250 ರೂಪಾಯಿ ಪರಿಹಾರವನ್ನು ಬ್ಯಾಂಕುಗಳೇ ನೀಡಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




