ವಾಣಿಜ್ಯ

ಹಿಂದುಜಾ ಗ್ರೂಪ್ ಅಧ್ಯಕ್ಷ ಗೋಪಿಚಂದ್ ಹಿಂದುಜಾ ನಿಧನ

ವ್ಯವಹಾರ ವಲಯದಲ್ಲಿ 'ಜಿಪಿ' ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಗೋಪಿಚಂದ್ ಪಿ. ಹಿಂದೂಜಾ ಅವರು ಕಳೆದ ಕೆಲವು ವಾರಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.

ಹಿಂದುಜಾ ಗ್ರೂಪ್ ಅಧ್ಯಕ್ಷ ಗೋಪಿಚಂದ್ ಹಿಂದುಜಾ ನಿಧನ
ಗೋಪಿಚಂದ್ ಹಿಂದುಜಾ
Published On :

ಲಂಡನ್: ಹಿಂದೂಜಾ ಗ್ರೂಪ್ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ ಅವರು ಲಂಡನ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬದ ಆಪ್ತ ಮೂಲಗಳು ಮಂಗಳವಾರ ತಿಳಿಸಿವೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ವ್ಯವಹಾರ ವಲಯದಲ್ಲಿ 'ಜಿಪಿ' ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಗೋಪಿಚಂದ್ ಪಿ. ಹಿಂದೂಜಾ ಅವರು ಕಳೆದ ಕೆಲವು ವಾರಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ಅವರು ಹೇಳಿದ್ದಾರೆ.

ಹಿಂದೂಜಾ ಕುಟುಂಬದ ಎರಡನೇ ತಲೆಮಾರಿಗೆ ಸೇರಿದ ಗೋಪಿಚಂದ್ ಅವರು, ಮೇ 2023 ರಲ್ಲಿ ತಮ್ಮ ಹಿರಿಯ ಸಹೋದರ ಶ್ರೀಚಂದ್ ಅವರ ಮರಣದ ನಂತರ ಹಿಂದುಜಾ ಗ್ರೂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಗೋಪಿಚಂದ್ ಹಿಂದುಜಾ ಅವರು ಪತ್ನಿ ಸುನೀತಾ, ಪುತ್ರರಾದ ಸಂಜಯ್ ಮತ್ತು ಧೀರಜ್ ಹಾಗೂ ಮಗಳು ರೀಟಾ ಅವರನ್ನು ಅಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.