Operation Sindoor: ಭಾರತ ವಾಯುದಾಳಿ ಬೆನ್ನಲ್ಲೇ ಪಾಕಿಸ್ತಾನ ಷೇರುಮಾರುಕಟ್ಟೆಯಲ್ಲಿ 'ರಕ್ತಪಾತ'; 6,200 ಅಂಕ ಕುಸಿತ!
ಪಾಕಿಸ್ತಾನ ಷೇರು ವಿನಿಮಯ ಕೇಂದ್ರ PSX (Pakistan Stock Exchange) ಸೂಚ್ಯಂಕ ಇಂದು ಒಂದೇ ದಿನ ಬರೊಬ್ಬರಿ 6560.82 ಅಂಕಗಳು ಅಂದರೆ ಶೇ. 5.78ರಷ್ಟು ಕುಸಿತ ಕಂಡು 107,007.68 ಅಂಕಗಳಿಗೆ ಕುಸಿತವಾಗಿದೆ.

ಲಾಹೋರ್: ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ Operation Sindoor ಸೇನಾ ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಷೇರುಮಾರುಕಟ್ಟೆಯಲ್ಲಿ ರಕ್ತಪಾತವಾಗಿದ್ದು, ಒಂದೇ ದಿನ 6,200 ಅಂಕಗಳ ಕುಸಿತವಾಗಿದೆ.
ಪಾಕಿಸ್ತಾನ ಷೇರು ವಿನಿಮಯ ಕೇಂದ್ರ PSX (Pakistan Stock Exchange) ಸೂಚ್ಯಂಕ ಇಂದು ಒಂದೇ ದಿನ ಬರೊಬ್ಬರಿ 6560.82 ಅಂಕಗಳು ಅಂದರೆ ಶೇ. 5.78ರಷ್ಟು ಕುಸಿತ ಕಂಡು 107,007.68 ಅಂಕಗಳಿಗೆ ಕುಸಿತವಾಗಿದೆ. ಹಿಂದಿನ ದಿನ 112,403.94 ಅಂಕಗಳಷ್ಟಿದ್ದ ಪಿಎಸ್ಎಕ್ಸ್ ಸೂಚ್ಯಂಕ ಇಂದು 6560.82 ಅಂಕಗಳ ಕುಸಿತಗೊಂಡು 107,007.68 ಅಂಕಗಳಿಗೆ ಕುಸಿತವಾಗಿದೆ.
ಪಾಕಿಸ್ತಾನದ ವಾಣಿಜ್ಯ ಬ್ಯಾಂಕುಗಳು, ತೈಲ ಮತ್ತು ಅನಿಲ ಪರಿಶೋಧನಾ ಕಂಪನಿಗಳು, OMCಗಳು, ವಿದ್ಯುತ್ ಉತ್ಪಾದನೆ ಮತ್ತು ಸಂಸ್ಕರಣಾಗಾರಗಳು ಸೇರಿದಂತೆ ಪ್ರಮುಖ ವಲಯಗಳು ಭಾರೀ ನಷ್ಟವನ್ನು ಎದುರಿಸುತ್ತಿರುವುದರಿಂದ ಹೂಡಿಕೆದಾರರು ತಮ್ಮ ಷೇರುಗಳ ಮಾರಾಟ ಮಾಡಲು ಮುಂದಾಗಿದ್ದು ಇಂದಿನ ಕುಸಿತಕ್ಕೆ ಕಾರಣವಾಯಿತು. ಪ್ರಮುಖವಾಗಿ OGDC, PPL, POL, HUBCO, SNGPL ಮತ್ತು SSGC ಯಂತಹ ಪ್ರಮುಖ ಷೇರುಗಳು ಸಹ ನಷ್ಟದಲ್ಲಿ ವಹಿವಾಟು ನಡೆಸಿದವು.
ಭಾರತದಿಂದ ಆಪರೇಷನ್ ಸಿಂದೂರ್
ಭಾರತೀಯ ಸೇನೆ ಬುಧವಾರ ಮುಂಜಾನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳು ಮತ್ತು ಅವರ ಕುಟುಂಬಗಳಿಗೆ ನ್ಯಾಯ ಒದಗಿಸಲು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರವನ್ನು ಇಂದು ನಸುಕಿನ ಜಾವ 1.05ರಿಂದ 1.30ರ ನಡುವೆ ಪ್ರಾರಂಭಿಸಿದವು. ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಅದನ್ನು ಯಶಸ್ವಿಯಾಗಿ ನಾಶಪಡಿಸಲಾಯಿತು.
ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ. ಈ ಪೈಕಿ ನಾಲ್ಕು ಪಾಕಿಸ್ತಾನದ ಮುಖ್ಯ ಭೂಭಾಗದಲ್ಲಿ ಮತ್ತು ಐದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿವೆ. ಈ ನಿರ್ದಿಷ್ಛ ದಾಳಿಯಲ್ಲಿ ಭಾರತೀಯ ಸೇನೆ ಯಾವುದೇ ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಬದಲಾಗಿ, ನಿಷೇಧಿತ ಭಯೋತ್ಪಾದಕ ಗುಂಪುಗಳು ಕಾರ್ಯಾಚರಣೆ ಕೇಂದ್ರಗಳಾಗಿ ಬಳಸಿದ ಪರಿಶೀಲಿಸಿದ ಆಧಾರದ ಮೇಲೆ ಎಲ್ಲಾ ತಾಣಗಳನ್ನು ಆಯ್ಕೆ ಮಾಡಲಾಗಿತ್ತು ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



