Indian Stock Market: ಇರಾನ್ vs ಇಸ್ರೇಲ್ ಯುದ್ಧ; ಸತತ 2ನೇ ದಿನವೂ ಮಾರುಕಟ್ಟೆ ಕುಸಿತ, ರೂಪಾಯಿ ಮೌಲ್ಯ ಇಳಿಕೆ
ಬುಧವಾರ ಭಾರತೀಯ ಷೇರುಮಾರುಕಟ್ಟೆ ಮತ್ತೆ ಇಳಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಮುಂಬೈ: ಅತ್ತ ಇಸ್ರೇಲ್ ಇರಾನ್ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಆ ಯುದ್ಧ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದ್ದು, ಸತತ 2ನೇ ದಿನವೂ ಮಾರುಕಟ್ಟೆ ರೆಡ್ ನಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ.
ಬುಧವಾರ ಭಾರತೀಯ ಷೇರುಮಾರುಕಟ್ಟೆ ಮತ್ತೆ ಇಳಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.17ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.17ರಷ್ಟು ಕುಸಿತ ದಾಖಲಿಸಿದೆ.
ಸೆನ್ಸೆಕ್ಸ್ ಇಂದು 138.64ಅಂಕಗಳ ಕುಸಿತದೊಂದಿಗೆ 81,444.66 ಅಂಕಗಳಿಗೆ ಕುಸಿತವಾಗಿದೆ. ನಿಫ್ಟಿ 41.35 ಅಂಕಗಳ ಇಳಿಕೆಯೊಂದಿಗೆ 24,812.05 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ, ಮಾಧ್ಯಮ, ಲೋಹ, ತೈಲ ಮತ್ತು ಅನಿಲ, ರಿಯಾಲ್ಟಿ ಕ್ಷೇತ್ರದ ಷೇರುಗಳ ಮೌಲ್ಯ ಕುಸಿತಕಂಡಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟಿಸಿಎಸ್, ಅದಾನಿ ಪೋರ್ಟ್ಸ್, ಹಿಂದೂಸ್ತಾನ್ ಯುನಿಲಿವರ್, ಬಜಾಜ್ ಫೈನಾನ್ಸ್ ಸರ್ವಿಸ್, ನೆಸ್ಲೆ ಇಂಡಿಯಾ, ಎನ್ ಟಿಪಿಸಿ, ಹೆಚ್ ಸಿಐ ಟೆಕ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟರ್ಸ್ ಮತ್ತು ಎಲ್ ಅಂಡ್ ಟಿ ಸಂಸ್ಥೆಗಳ ಷೇರುಗಳು ನಷ್ಟ ಕಂಡಿವೆ.
ರೂಪಾಯಿ ಮೌಲ್ಯ ಕುಸಿತ
ಇನ್ನು ಬುಧವಾರ ಡಾಲರ್ ಎದುರು ರೂಪಾಯಿ ಮೌಲ್ಯ 13 ಪೈಸೆ ಕುಸಿದು 86.47 ರೂಗೆ ತಲುಪಿದೆ. ದುರ್ಬಲ ದೇಶೀಯ ಷೇರು ಮಾರುಕಟ್ಟೆಗಳು ಮತ್ತು ಡಾಲರ್ನ ವಿಶಾಲ ಬಲದ ಮಧ್ಯೆ ರೂಪಾಯಿ ಮೌಲ್ಯ ಕುಸಿದಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ಹೇಳಿದ್ದಾರೆ.
ಇದಲ್ಲದೆ, ಹೆಚ್ಚಿದ ಜಾಗತಿಕ ಕಚ್ಚಾ ತೈಲ ಬೆಲೆಗಳು ಮತ್ತು ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡವು ಸ್ಥಳೀಯ ಘಟಕದ ಮೇಲೆ ಹೊರೆಯಾಗಿದೆ. ಪ್ರಮುಖವಾಗಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಜಾಗತಿಕ ಮಾರುಕಟ್ಟೆಗಳಲ್ಲಿ ಅಪಾಯದ ಹಿಂಜರಿಕೆಯಿಂದಾಗಿ ದೇಶೀಯ ಮಾರುಕಟ್ಟೆಗಳು ಕುಸಿಯುತ್ತಿವೆ. ಇದಲ್ಲದೆ ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಘಟಕವು ಭಾರೀ ಏರಿಳಿತವನ್ನು ಕಂಡಿತು.
ತಾರಕಕ್ಕೇರಿದ ಇರಾನ್-ಇಸ್ರೇಲ್ ಸಂಘರ್ಷ
ಇನ್ನು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷ ತಾರಕಕ್ಕೇರಿದ್ದು, ಶಾಂತಿ ಕಾಪಾಡುವಂತೆ ಅಮೆರಿಕ ನೀಡಿದ್ದ ಎಚ್ಚರಿಕೆಯನ್ನೂ ಇರಾನ್ ತಿರಸ್ಕರಿಸಿದೆ. ಇದು ಸಂಘರ್ಷ ಉಲ್ಪಣವಾಗುವಂತೆ ಮಾಡಿದೆ. ಬೇಷರತ್ತಾಗಿ ಶರಣಾಗುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಗೂ ಡೊಂಟ್ ಕೇರ್ ಎಂದ ಅಯತೊಲ್ಲಾ ಅಲಿ ಖಮೇನಿ ಇರಾನ್ ಶರಣಾಗುವುದಿಲ್ಲ ಎಂದು ಗುಡುಗಿದ್ದಾರೆ.
ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಖಮೇನಿ, ಇರಾನ್ ಶರಣಾಗುವ ರಾಷ್ಟ್ರವಲ್ಲ. ಅಲ್ಲದೇ ಯಾವುದೇ ಮಿಲಿಟರಿ ಹಸ್ತಕ್ಷೇಪವು ನಿಸ್ಸಂದೇಹವಾಗಿ ಸರಿಪಡಿಸಲಾಗದ ಹಾನಿಗೆ ಕಾರಣವಾಗುತ್ತದೆ ಎಂಬುದನ್ನು ಅಮೆರಿಕನ್ನರು ತಿಳಿದಿರಬೇಕು ಎಂದರು. ಅಂತೆಯೇ ಇರಾನ್ ರಾಷ್ಟ್ರವನ್ನು ಚೆನ್ನಾಗಿ ಬಲ್ಲವರೂ, ಅದರ ಇತಿಹಾಸದ ಬಗ್ಗೆ ತಿಳಿದಿರುವವರು ಎಂದಿಗೂ ಈ ರಾಷ್ಟ್ರದೊಂದಿಗೆ ಬೆದರಿಕೆಯ ಭಾಷೆಯಲ್ಲಿ ಮಾತನಾಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



