ವಾಣಿಜ್ಯ

Indian Stock Market: ಮೂರೇ ದಿನಕ್ಕೆ ಮತ್ತೆ ಕುಸಿತ, Sensex ಭಾರಿ ಇಳಿಕೆ, ಯಾರಿಗೆ ನಷ್ಟ?

ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತದ ಹಾದಿ ಹಿಡಿದಿದ್ದು, ವಾರಾಂತ್ಯದ ದಿನವಾದ ಇಂದು ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತ ಅನುಭವಿಸಿದೆ.

Indian Stock Market: ಮೂರೇ ದಿನಕ್ಕೆ ಮತ್ತೆ ಕುಸಿತ, Sensex ಭಾರಿ ಇಳಿಕೆ, ಯಾರಿಗೆ ನಷ್ಟ?
ಭಾರತೀಯ ಷೇರು ಮಾರುಕಟ್ಟೆ
Published On :

ಮುಂಬೈ: ಹೊಸ ಹುರುಪಿನೊಂದಿಗೆ ಚೇತೇಹಾರಿ ವಹಿವಾಟಿನ ಮೂಲಕ ಹೊಸ ವರ್ಷ 2025ನ್ನು ಆರಂಭಿಸಿದ್ದ ಭಾರತೀಯ ಷೇರುಮಾರುಕಟ್ಟೆ ಮೂರೇ ದಿನಕ್ಕೆ ಭಾರಿ ಕುಸಿತ ಅನುಭವಿಸಿದೆ.

ಹೌದು.. ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತದ ಹಾದಿ ಹಿಡಿದಿದ್ದು, ವಾರಾಂತ್ಯದ ದಿನವಾದ ಇಂದು ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತ ಅನುಭವಿಸಿದೆ.

ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.90ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಶೇ.0.76ರಷ್ಟು ಕುಸಿತ ದಾಖಲಿಸಿದೆ.

ಸೆನ್ಸೆಕ್ಸ್ ಇಂದು 720.60 ಅಂಕಗಳ ಇಳಿಕೆಯೊಂದಿಗೆ 79,223.11 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 183.90 ಅಂಕಗಳ ಇಳಿಕೆಯೊಂದಿಗೆ 24,004.75 ಅಂಕಗಳಿಗೆ ಕುಸಿತವಾಗಿ ದಿನದ ಮತ್ತು ವಾರಾಂತ್ಯದ ವಹಿವಾಟು ಅಂತ್ಯಗೊಳಿಸಿದೆ.

ಕುಸಿತಕ್ಕೆ ಕಾರಣ

ವರ್ಷಾರಂಭದ ಮೊದಲೆರಡು ದಿನ ಶೇ. 2.3ರಷ್ಟು ಭಾರೀ ಏರಿಕೆ ಕಂಡಿದ್ದ ಸೂಚ್ಯಂಕಗಳು ಇಂದು ಏಕಾಏಕಿ ಕುಸಿತ ಕಂಡಿವೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳು ಈ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಪ್ರಮುಖವಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರಗಳು ಏರಿಕೆ ಕಂಡಿದ್ದು, ಬ್ರೆಂಟ್‌ ಮಾದರಿಯ ಕಚ್ಚಾ ತೈಲ ದರ ಬ್ಯಾರಲ್‌ಗೆ 1.29 ಡಾಲರ್ ಅಥವಾ ಶೇ. 1.7ರಷ್ಟು ಏರಿಕೆ ಕಂಡಿದ್ದು 75.93 ಡಾಲರ್‌ಗೆ ತಲುಪಿದೆ.

ಇದಲ್ಲದೆ ಅಮೆರಿಕದ ಹೊಸ ಆರ್ಥಿಕ ದತ್ತಾಂಶಗಳು ಪ್ರಬಲವಾದ ಕಾರ್ಮಿಕ ಮಾರುಕಟ್ಟೆಯ ಸಂಕೇತ ನೀಡಿವೆ. ಇದರಿಂದ ಆಕ್ರಮಣಕಾರಿಯಾಗಿ ಬಡ್ಡಿ ದರ ಕಡಿತದ ಸಾಧ್ಯತೆ ದೂರವಾಗಿದೆ. ಈ ಹಿಂದೆ ನಾಲ್ಕು ಬಾರಿ ಬಡ್ಡಿ ದರ ಕಡಿತ ಮಾಡುವುದಾಗಿ ಹೇಳಿದ್ದ ಅಮೆರಿಕದ ಫೆಡರಲ್‌ ರಿಸರ್ವ್‌ ಇದೀಗ ಕೇವಲ 2 ಬಾರಿ ಬಡ್ಡಿ ಕಡಿತ ಮಾಡುವ ಸುಳಿವು ನೀಡಿದೆ. ಇದೂ ಕೂಡ ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಜೊಮ್ಯಾಟೊ, ಎಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಅದಾನಿ ಪೋರ್ಟ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ಲಾರ್ಸೆನ್ & ಟೂಬ್ರೊ, ಎಚ್‌ಸಿಎಲ್ ಟೆಕ್ ಮತ್ತು ಐಟಿಸಿ ಸಂಸ್ಥೆಯ ಷೇರುಗಳು ನಷ್ಟ ಕಂಡಿದೆ.

ಅಂತೆಯೇ ಟಾಟಾ ಮೋಟಾರ್ಸ್, ನೆಸ್ಲೆ, ಟೈಟಾನ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.