ವಾಣಿಜ್ಯ

Indian Stock Market: ಮಾರುಕಟ್ಟೆ ಹಾವು-ಏಣಿ ಆಟ; ನಿನ್ನೆ ಏರಿಕೆ.. ಇಂದು ಇಳಿಕೆ..; Sensex 300 ಅಂಕ ಕುಸಿತ!

ಬುಧವಾರ ಷೇರುಮಾರುಕಟ್ಟೆಯ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಎಫ್ ಎಂಸಿಜಿ, ಗ್ರಾಹಕ ಬಳಿಕೆ ವಸ್ತುಗಳು ಮತ್ತು ರಿಯಾಲ್ಟಿ ವಲಯದ ಷೇರುಗಳ ಮೌಲ್ಯ ಕುಸಿತಕಂಡಿವೆ.

Indian Stock Market: ಮಾರುಕಟ್ಟೆ ಹಾವು-ಏಣಿ ಆಟ; ನಿನ್ನೆ ಏರಿಕೆ.. ಇಂದು ಇಳಿಕೆ..; Sensex 300 ಅಂಕ ಕುಸಿತ!
ಭಾರತೀಯ ಷೇರುಮಾರುಕಟ್ಟೆ
Published On :

ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಹಾವು-ಏಣಿ ಆಟ ನಡೆದಿದ್ದು, ನಿನ್ನೆ ಏರಿಕೆಯಲ್ಲಿ ಮುಕ್ತಾಯಗೊಂಡಿದ್ದ ಮಾರುಕಟ್ಟೆ ಇಂದು ಇಳಿಕೆಯಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಹೌದು... ಬುಧವಾರ ಷೇರುಮಾರುಕಟ್ಟೆಯ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಎಫ್ ಎಂಸಿಜಿ, ಗ್ರಾಹಕ ಬಳಿಕೆ ವಸ್ತುಗಳು ಮತ್ತು ರಿಯಾಲ್ಟಿ ವಲಯದ ಷೇರುಗಳ ಮೌಲ್ಯ ಕುಸಿತಕಂಡಿವೆ.

ಮಂಗಳವಾರ ಭಾರಿ ಏರಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಬುಧವಾರ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.40ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.18ರಷ್ಟು ಅಲ್ಪ ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು 312.53ಅಂಕಗಳ ಇಳಿಕೆಯೊಂದಿಗೆ 78,271.28 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 42.95 ಅಂಕಗಳ ಇಳಿಕೆಯೊಂದಿಗೆ 23,739.25 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಹಿಂಡಾಲ್ಕೊ ಇಂಡಸ್ಟ್ರೀಸ್, ಒಎನ್‌ಜಿಸಿ, ಅಪೊಲೊ ಆಸ್ಪತ್ರೆಗಳು, ಬಿಪಿಸಿಎಲ್, ಅದಾನಿ ಪೋರ್ಟ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಏಷ್ಯನ್ ಪೇಂಟ್ಸ್, ಟೈಟಾನ್ ಕಂಪನಿ, ನೆಸ್ಲೆ ಇಂಡಿಯಾ, HUL, ಬ್ರಿಟಾನಿಯಾ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.