Indian Army ದಾಳಿ ಭೀತಿ: ಪಾಕಿಸ್ತಾನ ಷೇರು ಮಾರುಕಟ್ಟೆ ತಲ್ಲಣ; ಒಂದೇ ದಿನ 3,500 ಅಂಕ ಕುಸಿತ! ಸಚಿವರ ಹೇಳಿಕೆ ಕಾರಣ?
ಪಾಕಿಸ್ತಾನ ಷೇರು ವಿನಿಮಯ ಕೇಂದ್ರ PSX (Pakistan Stock Exchange) ಸೂಚ್ಯಂಕ ಇಂದು ಒಂದೇ ದಿನ ಬರೊಬ್ಬರಿ 3,545.61 ಅಂಕಗಳು ಅಂದರೆ ಶೇ. 3.09ರಷ್ಟು ಕುಸಿತ ಕಂಡು 111,326.57 ಅಂಕಗಳಿಗೆ ಕುಸಿತವಾಗಿದೆ.

ಲಾಹೋರ್: ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತದಿಂದ ಯುದ್ಧ ಭೀತಿ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ತಲ್ಲಣ ಮುಂದುವರೆದಿದ್ದು, ಇದೀಗ ಪಾಕಿಸ್ತಾನ ಷೇರುಮಾರುಕಟ್ಟೆ ಕೂಡ ಭಾರಿ ಕುಸಿತ ಕಂಡಿದೆ.
ಪಾಕಿಸ್ತಾನ ಷೇರು ವಿನಿಮಯ ಕೇಂದ್ರ PSX (Pakistan Stock Exchange) ಸೂಚ್ಯಂಕ ಇಂದು ಒಂದೇ ದಿನ ಬರೊಬ್ಬರಿ 3,545.61 ಅಂಕಗಳು ಅಂದರೆ ಶೇ. 3.09ರಷ್ಟು ಕುಸಿತ ಕಂಡು 111,326.57 ಅಂಕಗಳಿಗೆ ಕುಸಿತವಾಗಿದೆ. ಹಿಂದಿನ ದಿನ 114,872.18 ಅಂಕಗಳಷ್ಟಿದ್ದ ಪಿಎಸ್ಎಕ್ಸ್ ಸೂಚ್ಯಂಕ ಇಂದು 3,545.61 ಅಂಕಗಳ ಕುಸಿತಗೊಂಡು 111,326.57 ಅಂಕಗಳಿಗೆ ಕುಸಿತವಾಗಿದೆ.
ತಲ್ಲಣ ಮೂಡಿಸಿದ ಮಧ್ಯರಾತ್ರಿ ಸುದ್ದಿಗೋಷ್ಠಿ
ಇನ್ನು ನಿನ್ನೆಯಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಯ ಮೂರು ದಳಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ನಿನ್ನೆ ತಡರಾತ್ರಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದ ಪಾಕಿಸ್ತಾನದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಟ್ಟಾ ತರಾರ್ ಭಾರತದ ದಾಳಿ ಕುರಿತು ಹೇಳಿದ್ದರು.
'ಮುಂದಿನ 24ರಿಂದ 36 ಗಂಟೆಯೊಳಗೆ ಭಾರತ ಪಾಕಿಸ್ತಾನದ ಮೇಲೆ ಸೇನಾ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನ ತಲ್ಲಣ ಆರಂಭವಾಗಿದೆ. ಇದು ಪಾಕಿಸ್ತಾನ ಷೇರುಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ.
ಸುದ್ದಿಗೋಷ್ಠಿ ಬಳಿಕವೇ ತಲ್ಲಣ
ಇನ್ನು ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಎಕೆಡಿ ಸೆಕ್ಯುರಿಟೀಸ್ನ ಸಂಶೋಧನಾ ನಿರ್ದೇಶಕ ಅವೈಸ್ ಅಶ್ರಫ್, 'ಪಾಕಿಸ್ತಾನದ ವಿರುದ್ಧ ಭಾರತ ನಡೆಸುವ ಸಂಭಾವ್ಯ ಮಿಲಿಟರಿ ಕ್ರಮದ ಬಗ್ಗೆ ಹೂಡಿಕೆದಾರರು ಚಿಂತಿತರಾಗಿದ್ದಾರೆ, ಮಾಹಿತಿ ಸಚಿವರ ಪತ್ರಿಕಾಗೋಷ್ಠಿಯ ನಂತರ ಈ ಕಳವಳಗಳು ತೀವ್ರಗೊಂಡಿವೆ" ಎಂದು ಹೇಳಿದರು.
ಅಂತೆಯೇ ಚೇಸ್ ಸೆಕ್ಯುರಿಟೀಸ್ನ ಸಂಶೋಧನಾ ನಿರ್ದೇಶಕ ಯೂಸುಫ್ ಎಂ ಫಾರೂಕ್ ಕೂಡ ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದು, ಮಾಹಿತಿ ಸಚಿವರ ಹೇಳಿಕೆ ಬಳಿಕ ಪಾಕಿಸ್ತಾನ ಷೇರು ಮಾರುಕಟ್ಟೆ ಒತ್ತಡದಲ್ಲಿದೆ. ಅಲ್ಪಾವಧಿಯಲ್ಲಿ ಮಾರುಕಟ್ಟೆಯು ಪಾಕಿಸ್ತಾನ-ಭಾರತ ಉದ್ವಿಗ್ನತೆಯ ಸುದ್ದಿ ಹರಿವನ್ನು ಅನುಸರಿಸುತ್ತದೆ ಎಂದು ಅವರು ಹೇಳಿದರು.
ಆರಿಫ್ ಹಬೀಬ್ ಲಿಮಿಟೆಡ್ನ ಸಂಶೋಧನಾ ಮುಖ್ಯಸ್ಥೆ ಸನಾ ತೌಫಿಕ್ ಕೂಡ ಕುಸಿತಕ್ಕೆ ಪ್ರಾಥಮಿಕವಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳೇ ಕಾರಣ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



