ವಾಣಿಜ್ಯ

'ದುರಹಂಕಾರ': Lamborghini ವಿರುದ್ಧ ಭಾರತದ ಉದ್ಯಮಿ Gautam Singhania ಆಕ್ರೋಶ

ಕಾರು ಕೆಟ್ಟು ನಿಂತಿದ್ದು, ಈ ಕುರಿತ ಗ್ರಾಹಕರ ದೂರುಗಳಿಗೆ ಇಟಾಲಿಯನ್‌ ಕಾರು ತಯಾರಿಕಾ ಕಂಪನಿ ಲ್ಯಾಂಬೋರ್ಗಿನಿ ಸ್ಪಂದಿಸದೆ ಅಹಂಕಾರ ತೋರುತ್ತಿದೆ ಎಂದು ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಕಿಡಿಕಾರಿದ್ದಾರೆ.

'ದುರಹಂಕಾರ': Lamborghini ವಿರುದ್ಧ ಭಾರತದ ಉದ್ಯಮಿ Gautam Singhania ಆಕ್ರೋಶ
ರೇಮಂಡ್ ಗ್ರೂಪ್ ಮುಖ್ಯಸ್ಥ ಗೌತಮ್ ಸಿಂಘಾನಿಯಾ
Published On :

ನವದೆಹಲಿ: ಖರೀದಿ ಮಾಡಿದ ಕೇವಲ 15 ದಿನದಲ್ಲೇ ರಸ್ತೆಯಲ್ಲೇ ಕೆಟ್ಟು ನಿಂತ ದುಬಾರಿ Lamborghini ಕಾರಿನ ವಿರುದ್ಧ ಭಾರತದ ಖ್ಯಾತ ಉದ್ಯಮಿ ಗೌತಮ್ ಸಿಂಘಾನಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರು ಕೆಟ್ಟು ನಿಂತಿದ್ದು, ಈ ಕುರಿತ ಗ್ರಾಹಕರ ದೂರುಗಳಿಗೆ ಇಟಾಲಿಯನ್‌ ಕಾರು ತಯಾರಿಕಾ ಕಂಪನಿ ಲ್ಯಾಂಬೋರ್ಗಿನಿ ಸ್ಪಂದಿಸದೆ ಅಹಂಕಾರ ತೋರುತ್ತಿದೆ ಎಂದು ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಕಿಡಿಕಾರಿದ್ದಾರೆ.

ಎಕ್ಸ್ ನಲ್ಲಿ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಗೌತಮ್ ಸಿಂಘಾನಿಯಾ, ತಮ್ಮ ಲ್ಯಾಂಬೋರ್ಗಿನಿ ರೆವಲ್ಟೊ ಕಾರು ತಾಂತ್ರಿಕ ದೋಷದಿಂದಾಗಿ ಮುಂಬೈನ ಟ್ರಾನ್ಸ್‌ ಹಾರ್ಬರ್‌ ಲಿಂಕ್‌ ಬಳಿ ಕೆಟ್ಟು ನಿಂತ ಬಗ್ಗೆ ಈ ಹಿಂದೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ದುರಹಂಕಾರ

ಕಾರಿನ ದುರಸ್ತಿ ಕುರಿತು ಸಂಸ್ಥೆಯನ್ನು ಸಂಪರ್ಕಿಸಿದಾಗ ಈ ಬಗ್ಗೆ ಕಂಪನಿ ಪ್ರತಿಕ್ರಿಯಿಸಲಿಲ್ಲ ಎಂದಿರುವ ಅವರು, ಮತ್ತೊಂದು ಪೋಸ್ಟ್‌ ಹಂಚಿಕೊಂಡು ‘ಲ್ಯಾಂಬೋರ್ಗಿನಿಯ ಭಾರತದ ಮುಖ್ಯಸ್ಥ ಶರದ್‌ ಅಗರ್ವಾಲ್‌ ಮತ್ತು ಏಷ್ಯಾ ಮುಖ್ಯಸ್ಥ ಫ್ರಾನ್ಸೆಸ್ಕೊ ಸ್ಕಾರ್ಡಾವೊನಿ ಅವರ ದುರಹಂಕಾರದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಗ್ರಾಹಕರ ಸಮಸ್ಯೆಗಳೇನು ಎಂಬುದನ್ನು ಪರಿಶೀಲಿಸಲು ಯಾರೂ ಸಂಪರ್ಕಿಸಲಿಲ್ಲ.

ಭಾರತದ ಮುಖ್ಯಸ್ಥ ಶರದ್‌ ಅವರು ಕೂಡ ನಿಷ್ಠಾವಂತ ಗ್ರಾಹಕರಿಗೆ ಕನಿಷ್ಠ ಪಕ್ಷ ದೂರವಾಣಿ ಕರೆ ಮಾಡಿ ವಿಚಾರಿಸದಿರುವುದು ಆಘಾತಕಾರಿಯಾಗಿದೆ. ಲ್ಯಾಂಬೋರ್ಗಿನಿ ಬ್ರ್ಯಾಂಡ್ ದುರಹಂಕಾರವು ಮತ್ತೊಂದು ಹಂತಕ್ಕೆ ಹೋಗುತ್ತಿದೆಯೇ?’ ಎಂದು ಗೌತಮ್ ಸಿಂಘಾನಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟಕ್ಕೂ ಆಗಿದ್ದೇನು?

ಈ ತಿಂಗಳ ಆರಂಭದಲ್ಲಿ ಹೊಸ ಲ್ಯಾಂಬೊರ್ಗಿನಿ ರೆವಲ್ಟೊವನ್ನು ಟೆಸ್ಟ್‌ ಡ್ರೈವ್‌ಗಾಗಿ ತೆಗೆದುಕೊಂಡು ಹೋದಾಗ ವಿದ್ಯುತ್‌ ವೈಫಲ್ಯದಿಂದ ಟ್ರಾನ್ಸ್‌ ಹಾರ್ಬರ್‌ ಲಿಂಕ್‌ ಬಳಿ ಕಾರು ಕೆಟ್ಟು ನಿಂತ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದರು. ‘ಇದು ಹೊಚ್ಚಹೊಸ ಕಾರು. ಖರೀದಿಸಿದ 15 ದಿನಗಳಲ್ಲೇ ಸಮಸ್ಯೆ ಎದುರಾಗಿದೆ. ಈ ರೀತಿ ಇನ್ನೂ ಎರಡು ಕಾರುಗಳಲ್ಲಿ ದೋಷ ಉಂಟಾಗಿರುವ ಬಗ್ಗೆ ಕೇಳಿದ್ದೇನೆ. ಹೀಗಿದ್ದರೂ ಈ ಕಾರುಗಳು ಭಾರತದಲ್ಲಿ ವಿಶ್ವಾಸಾರ್ಹವೇ?’ ಎಂದು ಪ್ರಶ್ನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.