ವಾಣಿಜ್ಯ

Indian Stock Market: ಷೇರುಮಾರುಕಟ್ಟೆಯಲ್ಲಿ ಮತ್ತೆ ಕರಡಿ ಕುಣಿತ, ಸತತ 5ನೇ ದಿನವೂ ಕುಸಿದ Sensex

ಭಾರತೀಯ ಷೇರುಮಾರುಕಟ್ಟೆ ಇಂದು ಶೇ.1.25ರಿಂದ ಶೇ.1.36ರವರೆಗೂ ಕುಸಿದಿದೆ. ಸೆನ್ಸೆಕ್ಸ್ ಇಂದು ಶೇ.1.25ರಷ್ಟು ಅಂದರೆ, 984.23 ಅಂಕಗಳ ಕುಸಿತದೊಂದಿಗೆ 77,690.95 ಅಂಕಗಳಿಗೆ ಕುಸಿದಿದೆ.

Indian Stock Market: ಷೇರುಮಾರುಕಟ್ಟೆಯಲ್ಲಿ ಮತ್ತೆ ಕರಡಿ ಕುಣಿತ, ಸತತ 5ನೇ ದಿನವೂ ಕುಸಿದ Sensex
ಭಾರತೀಯ ಷೇರುಮಾರುಕಟ್ಟೆ
Published On :

ಮುಂಬೈ: ಸತತ ಕುಸಿತದ ಹಾದಿಯಲ್ಲಿ ಸಾಗಿರುವ ಭಾರತೀಯ ಷೇರುಮಾರುಕಟ್ಟೆ 5ನೇ ದಿನವೂ ಭಾರಿ ಪ್ರಮಾಣದಲ್ಲಿ ಕುಸಿತ ದಾಖಲಿಸಿದ್ದು, ಸೆನ್ಸೆಕ್ಸ್ ಬರೊಬ್ಬರಿ 984.23 ಅಂಕಗಳ ಕುಸಿತ ಕಂಡಿದೆ.

ಭಾರತೀಯ ಷೇರುಮಾರುಕಟ್ಟೆ ಇಂದು ಶೇ.1.25ರಿಂದ ಶೇ.1.36ರವರೆಗೂ ಕುಸಿದಿದೆ.

ಸೆನ್ಸೆಕ್ಸ್ ಇಂದು ಶೇ.1.25ರಷ್ಟು ಅಂದರೆ, 984.23 ಅಂಕಗಳ ಕುಸಿತದೊಂದಿಗೆ 77,690.95 ಅಂಕಗಳಿಗೆ ಕುಸಿದಿದೆ. ಅಂತೆಯೇ ನಿಫ್ಚಿ ಶೇ.1.36ರಷ್ಟು ಕುಸಿತದೊಂದಿಗೆ 324.40 ಅಂಕಗಳ ಕುಸಿತ ಕಂಡು 23,559.05 ಅಂಕಗಳಿಗೆ ಕುಸಿದಿದೆ.

ತುಲನಾತ್ಮಕವಾಗಿ ದುರ್ಬಲವಾದ Q2 (2ನೇ ತ್ರೈಮಾಸಿಕ ವರದಿ)ಗಳಿಕೆಗಳು, ನಿರಂತರ ವಿದೇಶಿ ನಿಧಿಯ ಹರಿವು ಮತ್ತು ಹೆಚ್ಚುತ್ತಿರುವ ದೇಶೀಯ ಹಣದುಬ್ಬರ ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.

"ಡಾಲರ್ ಸೂಚ್ಯಂಕದಲ್ಲಿನ ಏರಿಕೆ ಮತ್ತು ಪಟ್ಟುಬಿಡದ ವಿದೇಶಿ ಹೊರಹರಿವಿನ ನಡುವೆ ವಲಯಗಳಾದ್ಯಂತ ಮಾರಾಟದ ಕಾರಣದಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಸಕಾರಾತ್ಮಕ ಪ್ರಾರಂಭದ ಹೊರತಾಗಿಯೂ ದಿನದವಾಹಿಟಿನ ಹೊತ್ತಿಗೆ ಕುಸಿದಿದೆ ಎಂದು ICRA ಅನಾಲಿಟಿಕ್ಸ್ ಹೇಳಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ 30 ಸಂಸ್ಥೆಗಳ ಪೈಕಿ ಟಾಟಾ ಮೋಟಾರ್ಸ್, NTPC, ಏಷ್ಯನ್ ಪೇಂಟ್ಸ್ ಮತ್ತು ಇನ್ಫೋಸಿಸ್ ಸಂಸ್ಥೆಗಳು ಮಾತ್ರ ಇಂದು ಲಾಭಾಂಶ ಗಳಿಸಿದ್ದು, ಉಳಿದೆಲ್ಲಾ ಸಂಸ್ಥೆಗಳ ಷೇರುಗಳು ನಷ್ಟ ಅನುಭವಿಸಿವೆ.

ಈ ಪೈಕಿ ಮಹೀಂದ್ರ ಮತ್ತು ಮಹೀಂದ್ರ, ಟಾಟಾ ಸ್ಟೀಲ್, ಅದಾನಿ ಪೋರ್ಟ್ಸ್, JSW ಸ್ಟೀಲ್, ಮತ್ತು ಇಂಡಸ್ಇಂಡ್ ಬ್ಯಾಂಕ್ ಸಂಸ್ಥೆಗಳ ನಷ್ಟದ ಪ್ರಮಾಣದ ಹೆಚ್ಚಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.