ವಾಣಿಜ್ಯ

ಲೋಕಸಭೆ ಚುನಾವಣೆ 2024 ಮತ ಎಣಿಕೆ; ವಹಿವಾಟು ಆರಂಭಕ್ಕೆ ಷೇರುಪೇಟೆ ಕುಸಿತ

ಲೋಕಸಭೆ ಚುನಾವಣೆ 2024ರ ಫಲಿತಾಂಶದ ಮತ ಎಣಿಕೆ ಸಾಗುತ್ತಿದ್ದಂತೆ ಆರಂಭಿಕ ಟ್ರೆಂಡ್ ಪ್ರಕಾರ ಎನ್ ಡಿಎ ಮುನ್ನಡೆ ಸಾಧಿಸುತ್ತಿದ್ದು, ಮಂಗಳವಾರ ಷೇರುಪೇಟೆ ವಹಿವಾಟು ಆರಂಭಕ್ಕೆ ಕುಸಿತ ಕಂಡುಬಂತು.

ಲೋಕಸಭೆ ಚುನಾವಣೆ 2024 ಮತ ಎಣಿಕೆ; ವಹಿವಾಟು ಆರಂಭಕ್ಕೆ ಷೇರುಪೇಟೆ ಕುಸಿತ
ಸಾಂದರ್ಭಿಕ ಚಿತ್ರ
Published On :

ಮುಂಬೈ: ಲೋಕಸಭೆ ಚುನಾವಣೆ 2024ರ ಫಲಿತಾಂಶದ ಮತ ಎಣಿಕೆ ಸಾಗುತ್ತಿದ್ದಂತೆ ಆರಂಭಿಕ ಟ್ರೆಂಡ್ ಪ್ರಕಾರ ಎನ್ ಡಿಎ ಮುನ್ನಡೆ ಸಾಧಿಸುತ್ತಿದ್ದು, ಮಂಗಳವಾರ ಷೇರುಪೇಟೆ ವಹಿವಾಟು ಆರಂಭಕ್ಕೆ ಕುಸಿತ ಕಂಡುಬಂತು.

ನಿನ್ನೆ ಸೋಮವಾರ ವಹಿವಾಟು ಅಂತ್ಯಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಇಂದು ಬೆಳಗ್ಗೆ ಕುಸಿತ ಕಂಡುಬಂದಿದೆ.

Story image

ಇಂದು ಬೆಳಗ್ಗೆ ವಹಿವಾಟು ಆರಂಭದಲ್ಲಿ, ಸೆನ್ಸೆಕ್ಸ್ 1,135.48 ಪಾಯಿಂಟ್‌ಗಳ ಕುಸಿತದೊಂದಿಗೆ 75,333.30 ಕ್ಕೆ ತಲುಪಿದರೆ, ನಿಫ್ಟಿ 408.35 ಪಾಯಿಂಟ್‌ಗಳ ಕುಸಿತದೊಂದಿಗೆ 22,855.55 ಕ್ಕೆ ತಲುಪಿತು. ನಿಫ್ಟಿ ಕಂಪನಿಗಳ ಪೈಕಿ 6 ಕಂಪೆನಿಗಳು ಮಾತ್ರ ಮುನ್ನಡೆಯುತ್ತಿದ್ದು, 44 ಕುಸಿತ ಕಂಡಿದ್ದು, ಹೂಡಿಕೆದಾರರು ಲೋಕಸಭೆ ಚುನಾವಣೆ ಫಲಿತಾಂಶವನ್ನು ನೋಡಿಕೊಂಡು ಎಚ್ಚರಿಕೆಯ ಹೆಜ್ಜೆ ಇರಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.