ತೆರಿಗೆದಾರರು ಡಿಸೆಂಬರ್ 31 ರಿಂದ 'ವಿವಾದ್ ಸೆ ವಿಶ್ವಾಸ್' 2024 ಸ್ಕೀಮ್ ಆಯ್ಕೆ ಮಾಡಬಹುದು: CBDT ಮುಖ್ಯಸ್ಥ
ತೆರಿಗೆದಾರರು ಈ ಹೊಸ ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ, ಹೀಗೆ ಉಳಿದ ಹಲವು ಮೇಲ್ಮನವಿಗಳು ಇತ್ಯರ್ಥವಾಗಲಿವೆ ಎಂದು ಅವರು ತಿಳಿಸಿದ್ದಾರೆ.

ನವದೆಹಲಿ: ಬಾಕಿ ಉಳಿದಿರುವ ನೇರ ತೆರಿಗೆ ಮೇಲ್ಮನವಿಯ ಇತ್ಯರ್ಥಕ್ಕಾಗಿ ಬಜೆಟ್ನಲ್ಲಿ ಘೋಷಿಸಲಾದ 'ವಿವಾದ್ ಸೇ ವಿಶ್ವಾಸ್' ಯೋಜನೆಯನ್ನು ಈ ವರ್ಷ ಪ್ರಾರಂಭಿಸಲಾಗುವುದು. ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು CBDT ಅಧ್ಯಕ್ಷ ರವಿ ಅಗರವಾಲ್ ಬುಧವಾರ ಹೇಳಿದ್ದಾರೆ.
ಬಜೆಟ್ ನಂತರದ ಸಂದರ್ಶನದಲ್ಲಿ ಪಿಟಿಐಗೆ ಮಾತನಾಡಿದ ಅವರು, ದೇಶದ ವಿವಿಧ ನ್ಯಾಯಾಲಯಗಳಲ್ಲಿ ನೇರ ತೆರಿಗೆ ಸಂಬಂಧಿತ ಸಾಕಷ್ಟು ಮೇಲ್ಮನೆಗಳು ದಾಖಲಾಗಿವೆ. ತೆರಿಗೆದಾರರು ಈ ಹೊಸ ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ, ಹೀಗೆ ಉಳಿದ ಹಲವು ಮೇಲ್ಮನವಿಗಳು ಇತ್ಯರ್ಥವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ನೇರ ತೆರಿಗೆ ಅಥವಾ ಆದಾಯ ತೆರಿಗೆ ವರ್ಗದ ಅಡಿಯ ಪ್ರಕರಣಗಳಿಗೆ 2020ರಲ್ಲಿ ಮೊದಲ ಬಾರಿಗೆ 'ವಿವಾದ್ ಸೇ ವಿಶ್ವಾಸ್' ಯೋಜನೆಯನ್ನು ಸರ್ಕಾರ ಪರಿಚಯಿಸಿತು. ಹಲವು ಲಕ್ಷ ತೆರಿಗೆದಾರರು ಈ ಯೋಜನೆಯ ಲಾಭ ಪಡೆದಿದ್ದರಿಂದ ಸುಮಾರು 75,000 ಕೋಟಿ ಆದಾಯ ಬಂದಿದೆ. ಡಿಸೆಂಬರ್ 31 ರೊಳಗೆ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಶೀಘ್ರದಲ್ಲಿ ಈ ಕುರಿತು ಅಧಿಸೂಚನೆ ಬಿಡುಗಡೆ ಮಾಡಲಾಗುವುದು. ಅದರೊಂದಿಗೆ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆಗಳಿಗೆ ಉತ್ತರ ನೀಡಲಾಗುವುದು ಎಂದು ಅಗರ್ ವಾಲ್ ಹೇಳಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ "ಬಾಕಿ ಉಳಿದಿರುವ ಮೇಲ್ಮನವಿಗಳ ಇತ್ಯರ್ಥಕ್ಕಾಗಿ" ಯೋಜನೆಯನ್ನು ಪರಿಚಯಿಸಲು ಪ್ರಸ್ತಾಪಿಸಿದ್ದಾರೆ." ಇದನ್ನು ನಿರ್ದಿಷ್ಟ ದಿನಾಂಕದಿಂದ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಯೋಜನೆಗೆ ಕೊನೆಯ ದಿನಾಂಕವನ್ನು ಸಹ ಸೂಚಿಸಲು ಪ್ರಸ್ತಾಪಿಸಲಾಗಿದೆ" ಎಂದು ಸಚಿವರು ಮಂಗಳವಾರ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



