ಆಯ್ದ ನಗರಗಳಲ್ಲಿ ಶುಲ್ಕ ಹೆಚ್ಚಿಸಿದ ಝೊಮ್ಯಾಟೊ!
ಶುಲ್ಕ ಏರಿಕೆಗೆ ಕಾರಣಗಳನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಿದಾಗ, Zomato ಮತ್ತು Swiggy ಎರಡೂ ಸಂಸ್ಥೆಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದವು.

ನವದೆಹಲಿ: ಆಹಾರ ಡೆಲಿವರಿ ಸಂಸ್ಥೆ ಝೊಮ್ಯಾಟೊ ಪ್ರಮುಖ ನಗರಗಳಲ್ಲಿ ಶುಲ್ಕ ಹೆಚ್ಚಳ ಮಾಡಿದೆ.
ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಶುಲ್ಕವನ್ನು ಪ್ರತಿ ಆರ್ಡರ್ ಗೆ 5-6 ರೂಪಾಯಿಗಳನ್ನು ಝೊಮ್ಯಾಟೋ ಹೆಚ್ಚಳ ಮಾಡಿದೆ.
ಝೊಮ್ಯಾಟೋ ಗೆ ಪ್ರತಿಸ್ಪರ್ಧಿಯಾಗಿರುವ ಸ್ವಿಗ್ಗಿ ಸಹ ಹಲವು ನಗರಗಳಲ್ಲಿ ಶುಲ್ಕವನ್ನು ಹೆಚ್ಚಳ ಮಾಡಿತ್ತು. ಆದರೆ ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಪ್ರತಿ ಆರ್ಡರ್ ಗೆ 5 ರೂಪಾಯಿಗಳ ಶುಲ್ಕಕ್ಕೆ ಮತ್ತೆ ಬದಲಾವಣೆ ಮಾಡಿದೆ.
ಶುಲ್ಕ ಏರಿಕೆಗೆ ಕಾರಣಗಳನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಿದಾಗ, Zomato ಮತ್ತು Swiggy ಎರಡೂ ಸಂಸ್ಥೆಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದವು. ಎರಡು ಕಂಪನಿಗಳು ಕಳೆದ ವರ್ಷ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿದ್ದವು, ಆರಂಭದಲ್ಲಿ ಪ್ರತಿ ಆರ್ಡರ್‌ಗೆ 2 ರೂ ಇದ್ದ ಶುಲ್ಕವನ್ನು ಕ್ರಮೇಣ ಹೆಚ್ಚಿಸಲಾಗಿದೆ. ಪ್ಲಾಟ್‌ಫಾರ್ಮ್ ಶುಲ್ಕವನ್ನು ಆಹಾರ-ವಿತರಣಾ ಪ್ಲಾಟ್‌ಫಾರ್ಮ್‌ಗಳು ತಮ್ಮ ಲಾಭದಾಯಕತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ವಿಧಾನಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


