ವಾಣಿಜ್ಯ

Indian Stock Market: ಗ್ರೀನ್ ನಲ್ಲಿ ಮಾರುಕಟ್ಟೆ ವಾರದ ವಹಿವಾಟು ಅಂತ್ಯ; ಬ್ಯಾಂಕ್, ಆಟೋ ಷೇರುಗಳ ಏರಿಕೆ!

ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದಲ್ಲಿ ಚೇತೋಹಾರಿ ವಹಿವಾಟು ನಡೆಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಗ್ರೀನ್ ನಲ್ಲಿ ದಿನದ ಮತ್ತು ವಾರಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.

Indian Stock Market: ಗ್ರೀನ್ ನಲ್ಲಿ ಮಾರುಕಟ್ಟೆ ವಾರದ ವಹಿವಾಟು ಅಂತ್ಯ; ಬ್ಯಾಂಕ್, ಆಟೋ ಷೇರುಗಳ ಏರಿಕೆ!
ಭಾರತೀಯ ಷೇರುಮಾರುಕಟ್ಟೆ
Published On :

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಏರಿಳಿತ ಮುಂದುವರೆದಿದ್ದು, ವಾರದ ಅಂತಿಮ ದಿನ ಮಾರುಕಟ್ಟೆ ಏರಿಕೆಯೊಂದಿಗೆ ತನ್ನ ವಾರದ ವಹಿವಾಟು ಅಂತ್ಯಗೊಳಿಸಿದೆ.

ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದಲ್ಲಿ ಚೇತೋಹಾರಿ ವಹಿವಾಟು ನಡೆಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಗ್ರೀನ್ ನಲ್ಲಿ ದಿನದ ಮತ್ತು ವಾರಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.29ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ0.27ರಷ್ಟು ಏರಿಕೆಯಾಗಿದೆ.

ಸೆನ್ಸೆಕ್ಸ್ ಇಂದು 226.59 ಅಂಕಗಳ ಏರಿಕೆಯೊಂದಿಗೆ 78,699.07 ಅಂಕಗಳಿಗೆ ಏರಿದ್ದರೆ, ನಿಫ್ಟಿ ಕೇವಲ 63.20 ಅಂಕಗಳ ಏರಿಕೆಯೊಂದಿಗೆ 23,813.40 ಅಂಕಗಳಿಗೆ ಏರಿಕೆಯಾಗಿ ದಿನದ ಮತ್ತು ವಾರದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಬ್ಯಾಕಿಂಗ್, ಫಾರ್ಮಾ, ಮೀಡಿಯಾ ಮತ್ತು ಆಟೋ ವಲಯದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಬ್ಲೂಚಿಪ್ ಪ್ಯಾಕ್ ನಲ್ಲಿ ಪಟ್ಟಿ ಮಾಡಲಾದ 30 ಸಂಸ್ಥೆಗಳ ಪೈಕಿ ಮಹೀಂದ್ರಾ ಮತ್ತು ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಟಾಟಾ ಮೋಟಾರ್ಸ್, ಬಜಾಜ್ ಫಿನ್‌ಸರ್ವ್, ನೆಸ್ಲೆ ಮತ್ತು ಐಸಿಐಸಿಐ ಬ್ಯಾಂಕ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ.

ಅಂತೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಸ್ಟೀಲ್, ಅದಾನಿ ಪೋರ್ಟ್ಸ್, ಜೊಮಾಟೊ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಎಚ್‌ಸಿಎಲ್ ಟೆಕ್ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.