ವಾಣಿಜ್ಯ

ರಿಲಾಯನ್ಸ್ ರೀಟೇಲ್ ಗೆ ಮುಖೇಶ್ ಅಂಬಾನಿ ಪುತ್ರಿ ಇಶಾ ನೂತನ ಅಧ್ಯಕ್ಷ್ಯೆ! 

ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರು ರಿಲಾಯನ್ಸ್ ರೀಟೇಲ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ರಿಲಾಯನ್ಸ್ ರೀಟೇಲ್ ಗೆ ಮುಖೇಶ್ ಅಂಬಾನಿ ಪುತ್ರಿ ಇಶಾ ನೂತನ ಅಧ್ಯಕ್ಷ್ಯೆ! 
ಇಶಾ ಅಂಬಾನಿ
Published On :

ಮುಂಬೈ: ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರು ರಿಲಾಯನ್ಸ್ ರೀಟೇಲ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದಕ್ಕೂ ಮುನ್ನ ರಿಲಾಯನ್ಸ್ ಇಂಡಸ್ಟ್ರೀಸ್ ನ ಜವಾಬ್ದಾರಿಯನ್ನು ಅಂಬಾನಿ ತಮ್ಮ ಹಿರಿಯ ಪುತ್ರ ಆಕಾಶ್ ಅಂಬಾನಿಗೆ ವಹಿಸಿದ್ದರು.

ಇಶಾ ಈಗ ರಿಲಾಯನ್ಸ್ ರೀಟೇಲ್ ವೆಂಚರ್ಸ್ ನ ನಿರ್ದೇಶಕರಾಗಿದ್ದು, ಬೋರ್ಡ್ ಆಫ್ ರಿಲಾಯನ್ಸ್ ರೀಟೇಲ್ ನಲ್ಲಿ ಇಶಾ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಮುಖೇಶ್ ಅಂಬಾನಿ ತಮ್ಮ ಎಲ್ಲಾ ಉದ್ಯಮಗಳಿಗೂ ಉತ್ತರಾಧಿಕಾರಿಗಳನ್ನು ನೇಮಕ ಮಾಡುವ ಯೋಜನೆ ಹೊಂದಿದ್ದು, ಉಳಿದ ಉದ್ಯಮಗಳಿಗೆ ಇನ್ನೆರಡು ದಿನಗಳಲ್ಲಿ ಹೊಸ ಅಧ್ಯಕ್ಷರ ನೇಮಕ ಘೋಷಣೆಯಾಗುವ ನಿರೀಕ್ಷೆ ಇದೆ.

ಅಂಬಾನಿ ಅವರ ಅವಳಿ ಮಕ್ಕಳು ರಿಲಾಯನ್ಸ್ ರೀಟೇಲ್ ವೆಂಚರ್ಸ್ ಗೆ ಮೆಟಾ ಪ್ಲಾಟ್ಫಾರ್ಮ್ ನೊಂದಿಗಿನ ಹೂಡಿಕೆ ಹಾಗೂ ಜಿಯೋ ಮಾರ್ಟ್ ಗೆ ಸಂಬಂಧಿಸಿದ ಮಾತುಕತೆಯ ತಂಡದಲ್ಲಿ 2014 ರಿಂದ ಇದ್ದರು. 2008 ರಲ್ಲಿ ಇಶಾ ಫೋರ್ಬ್ಸ್ ನಲ್ಲಿ ಕಿರಿಯ ಬಿಲಿಯನೇರ್ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.