ಗೃಹ ಸಾಲದ ದರದಲ್ಲಿ 25 ಬಿಪಿಎಸ್ ರಿಯಾಯಿತಿ ಘೋಷಿಸಿದ ಎಸ್ ಬಿಐ
ದೇಶದ ಅತಿ ದೊಡ್ಡ ಲೆಂಡರ್ ಎಸ್ ಬಿಐ ಗೃಹ ಸಾಲದ ದರದಲ್ಲಿ 25 ಬಿಪಿ ಎಸ್ ರಿಯಾಯಿತಿ ಘೋಷಿಸಿದೆ.

ಮುಂಬೈ: ದೇಶದ ಅತಿ ದೊಡ್ಡ ಲೆಂಡರ್ ಎಸ್ ಬಿಐ ಗೃಹ ಸಾಲದ ದರದಲ್ಲಿ 25 ಬಿಪಿ ಎಸ್ ರಿಯಾಯಿತಿ ಘೋಷಿಸಿದೆ.
ಈ ಮೂಲಕ ಎಸ್ ಬಿಐ ನ ಗ್ರಾಹಕರು ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ 25 ಬೇಸಿಸ್ ಪಾಯಿಂಟ್ ಗಳಷ್ಟು ರಿಯಾಯಿತಿ ಪಡೆಯಲಿದ್ದಾರೆ. 75 ಲಕ್ಷದ ಮೇಲಿನ ಸಾಲಕ್ಕೆ ಇದು ಅನ್ವಯವಾಗಲಿದೆ.
ಇದಕ್ಕೆ ಕೆಲವು ಷರತ್ತುಗಳು ಅನ್ವಯವಾಗಲಿದ್ದು, ಸಿಬಿಐಎಲ್ ಸ್ಕೋರ್ ಆಧಾರದಲ್ಲಿ ಹಾಗೂ ಯೋನೋ ಮೂಲಕ ವ್ಯವಹರಿಸಿದರೆ ಈ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಹಬ್ಬದ ಆಫರ್ ಗಳ ಘೋಷಣೆಯ ವಿಸ್ತರಣೆಯಾಗಿ ಎಸ್ ಬಿಐ 25 ಬಿಪಿಎಸ್ ಗಳ ರಿಯಾಯಿತಿಯನ್ನು ಘೋಷಿಸಿದೆ.
30 ಲಕ್ಷ ದಿಂದ 2 ಕೋಟಿ ರೂಪಾಯಿಗಳ ಗೃಹ ಸಾಲದವರೆಗೂ ಈ ಹಿಂದಿದ್ದ 10 ಬಿಪಿಎಸ್ ನಿಂದ 20 ಬಿಪಿಎಸ್ ವರೆಗೆ ರಿಯಾಯಿತಿ ದೊರೆಯಲಿದೆ. ಯೋನೋ ಮೂಲಕ ವ್ಯವಹರಿಸುವ ಗ್ರಾಹಕರಿಗೆ ಹೆಚ್ಚುವರು 5 ಬಿಪಿಎಸ್ ರಿಯಾಯಿತಿ ದೊರೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


