ವಾಣಿಜ್ಯ

ಕುಟುಂಬ ಒಡೆತನದ ಉದ್ಯಮ: ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 3ನೇ ಸ್ಥಾನ!

ಕುಟುಂಬ ಒಡೆತನದ ಉದ್ಯಮಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಹೊಂದಿದೆ.

ಕುಟುಂಬ ಒಡೆತನದ ಉದ್ಯಮ: ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 3ನೇ ಸ್ಥಾನ!
ಕುಟುಂಬ ಒಡೆತನದ ಉದ್ಯಮ: ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 3ನೇ ಸ್ಥಾನ!
Published On :
ನವದೆಹಲಿ: ಕುಟುಂಬ ಒಡೆತನದ ಉದ್ಯಮಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಹೊಂದಿದೆ. 
ಅಮೆರಿಕ, ಚೀನಾ, ಭಾರತ ಅನುಕ್ರಮವಾಗಿ ಜಗತ್ತಿನ ಟಾಪ್ 3 ರಾಷ್ಟ್ರಗಳಾಗಿದ್ದು ಮಾರುಕಟ್ಟೆ ಬಂಡವಾಳದಲ್ಲಿ ಒಟ್ಟಾರೆ 839 ಅಮೆರಿಕನ್ ಡಾಲರ್ ಹೊಂದಿರುವ 111 ಕಂಪನಿಗಳನ್ನು ಭಾರತ ಹೊಂದಿದೆ. ಚೀನಾ 159 ಸಂಸ್ಥೆಗಳನ್ನು ಹೊಂದಿದ್ದರೆ ಅಮೆರಿಕ 121 ಸಂಸ್ಥೆಗಳನ್ನು ಹೊಂದಿದೆ ಎಂದು ವರದಿಯ ಮೂಲಕ ತಿಳಿದುಬಂದಿದೆ. 
ಕ್ರೆಡಿಟ್ ಸ್ಯೂಸ್ಸೆ ಸಂಶೋಧನಾ ಸಂಸ್ಥೆ ಪ್ರಕಟಿಸಿರುವ, ಕ್ರೆಡಿಟ್ ಸ್ಯೂಸ್ ಫ್ಯಾಮಿಲಿ, 1000, 2018 ರ ವರದಿಯ ಪ್ರಕಾರ  ಜಪಾನ್ ಯೇತರ ಏಷ್ಯನ್ ಪ್ರದೇಶದ ಕುಟುಂಬ ಒಡೆತನದ ಪಟ್ಟಿಯಲ್ಲಿ ಚೀನಾ, ಭಾರತ ಹಾಗೂ ಹಾಂಕ್ ಕಾಂಗ್ ಪ್ರಾಬಲ್ಯ ಮೆರೆದಿದೆ. 
ಸಿಎಸ್ಆರ್ ಐ ಡೇಟಾಬೇಸ್ ನ ಪ್ರಕಾರ ಭಾರತ, ಚೀನಾ, ಹಾಂಗ್ ಕಾಂಗ್ ಪ್ರದೇಶಗಳು ಜಪಾನ್ ಯೇತರ ಏಷ್ಯನ್ ಪ್ರದೇಶದ ಕುಟುಂಬ ಒಡೆತನದ ಶೇ.65 ರಷ್ಟು ಸಂಸ್ಥೆಗಳನ್ನು ಹೊಂದಿದ್ದು, ಒಟ್ಟಾರೆ ಮಾರುಕಟ್ಟೆಯ ಪಾಲುದಾರಿಕೆಯಲ್ಲಿ 2.85 ಟ್ರಿಲಿಯನ್ ಡಾಲರ್ (ಶೇ.71) ರಷ್ಟನ್ನು ಹೊಂದಿದೆ. 
ಭಾರತದ ನಂತರದ ಸ್ಥಾನದಲ್ಲಿ ಕೊರಿಯಾ ಇದ್ದು,  ಮಾರುಕಟ್ಟೆ ಬಂಡವಾಳ 434.1 ಬಿಲಿಯನ್ ನಷ್ಟಿರುವ 43 ಸಂಸ್ಥೆಗಳನ್ನು ಹೊಂದಿದೆ. ನಂತರದ ಸ್ಥಾನಗಳಲ್ಲಿ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಥಾಯ್ಲ್ಯಾಂಡ್ ತಲಾ 26 ಸಂಸ್ಥೆಗಳನ್ನು ಹೊಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.