ವಾಣಿಜ್ಯ

ಹೊಸ ವರ್ಷಕ್ಕೆ ಜಿಯೋ ಆಫರ್: 399 ರೂಗಳ ಮೇಲೆ ಶೇ.100 ರಷ್ಟು ಕ್ಯಾಶ್ ಬ್ಯಾಕ್

ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ಗ್ರಾಹಕರಿಗಾಗಿ ಹೊಸ ಕೊಡುಗೆ ಘೋಷಿಸಿದ್ದು, ಶೇ.100 ರಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡಿದೆ.

ಹೊಸ ವರ್ಷಕ್ಕೆ ಜಿಯೋ ಆಫರ್: 399 ರೂಗಳ ಮೇಲೆ ಶೇ.100 ರಷ್ಟು ಕ್ಯಾಶ್ ಬ್ಯಾಕ್
ಹೊಸ ವರ್ಷಕ್ಕೆ ಜಿಯೋ ಆಫರ್: 399 ರೂಗಳ ಮೇಲೆ ಶೇ.100 ರಷ್ಟು ಕ್ಯಾಶ್ ಬ್ಯಾಕ್
Published On :
ನವದೆಹಲಿ: ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ಗ್ರಾಹಕರಿಗಾಗಿ ಹೊಸ ಕೊಡುಗೆ ಘೋಷಿಸಿದ್ದು, ಶೇ.100 ರಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡಿದೆ. 
ಎಜಿಒ ಸಹಯೋಗದಲ್ಲಿ ಹೊಸ ವರ್ಷದ ಕೊಡುಗೆ ಘೋಷಿಸಿರುವ ಜಿಯೋ, ಕೂಪನ್ ರೂಪದಲ್ಲಿ ಶೇ.100 ರಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ.  399 ರೂಪಾಯಿಗಳ ಮೇಲಿನ ರೀಚಾರ್ಜ್ ಗೆ ಕ್ಯಾಶ್ ಬ್ಯಾಕ್ ಸಿಗಲಿದೆ.
399 ರೂ.ಗಳ ರೀಚಾರ್ಜ್ ಮಾಡಿಸಿದರೆ  ಮೈಜಿಯೋ ಕೂಪನ್ ಸೆಕ್ಷನ್ ನಲ್ಲಿ ಕೂಪನ್ ಕ್ರೆಡಿಟ್ ಆಗಲಿದೆ. ನಂತರ ಎಜಿಯೋ ಆಪ್ ಅಥವಾ ವೆಬ್ ಸೈಟ್ ನಲ್ಲಿ ಕೂಪನ್ ನ್ನು ಬಳಕೆ ಮಾಡಬಹುದಾಗಿದೆ. ಹೊಸ ಹಾಗೂ ಈಗಿರುವ ಜಿಯೋ ಗ್ರಾಹಕರಿಗೆ ಈ ಆಫರ್ ಅನ್ವಯವಾಗಲಿದ್ದು ಜ.31 ವರೆಗೆ ಲಭ್ಯವಿರಲಿದೆ. ಕೂಪನ್ ಗಳನ್ನು ಮಾರ್ಚ್ 15 ಒಳಗೆ ಬಳಕೆ ಮಾಡಬಹುದಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.