ಜಿಎಸ್ ಟಿ ಗೊಂದಲ: 44 ಅಂಕಗಳ ಇಳಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ 18 ಅಂಕ ಇಳಿಕೆ!
ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಅಲ್ಪ ಇಳಿಕೆ ಕಂಡಿದೆ.

ಮುಂಬೈ: ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಅಲ್ಪ ಇಳಿಕೆ ಕಂಡಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 44.47 ಅಂಕಗಳ ಇಳಿಕೆಯೊಂದಿಗೆ 30,813.05 ಅಂಕಗಳಿಗೆ ಇಳಿಕೆಯಾಗಿದ್ದು, ಸೆನ್ಸೆಕ್ಸ್ ಶೇ.0.14 ಳಷ್ಟು ನಷ್ಟ ಅನುಭವಿಸಿದೆ. ಅಂತೆಯೇ ನಿಫ್ಟಿ ಕೂಡ 18 ಅಂಕಗಳ ಕುಸಿತ ಕಂಡಿದ್ದು, 9,486.10 ಅಂಕಗಳಿಗೆ ಇಳಿಕೆಯಾಗಿದೆ. ಇನ್ನು ನಿಫ್ಟಿಯಲ್ಲಿ ಶೇ.0.19ರಷ್ಟು ನಷ್ಟ ಕಂಡುಬಂದಿದೆ. ಪ್ರಮುಖವಾಗಿ ಜಿಎಸ್ ಟಿ ಕಾಯ್ದೆಯ ಕುರಿತಾದ ಹೂಡಿಕೆದಾರರಲ್ಲಿನ ಗೊಂದಲವೇ ಇಂದಿನ ವಹಿವಾಟಿನ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಇನ್ನು ಎಲ್ ಅಂಡ್ ಟಿ ಮತ್ತು ಭಾರ್ತಿ ಏರ್ ಟೆಲ್ ಸಂಸ್ಥೆಗಳು ತಲಾ ಶೇ.2.22 ನಷ್ಟ ಅನುಭವಿಸಿದ್ದು, ಐಸಿಸಿಐ ಬ್ಯಾಂಕ್ ಶೇ.1.26 ಮತ್ತು ಟಾಟಾ ಮೋಟಾರ್ಸ್ ಸಂಸ್ಥೆ ಶೇ.1.23 ರಷು ನಷ್ಟ ಅನುಭವಿಸಿವೆ.
ದೇಶದ ತೆರಿಗೆ ವ್ಯವಸ್ಥೆ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣಾ ಕ್ರಮ ಜಿಎಎಸ್ ಟಿ ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ರಾತ್ರಿ 12 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ನ ವಿಶೇಷ ಅಧಿವೇಶನದಲ್ಲಿ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ಟಿ) ಗೆ ಚಾಲನೆ ನೀಡಲಿದ್ದಾರೆ. ದಶಕಗಳಿಂದ ಚಾಲ್ತಿಯಲ್ಲಿದ್ದ ಹಳೆ ತೆರಿಗೆ ಪದ್ಧತಿಗೆ ಬದಲಾಗಿ ಈಗಿನ ಸ್ಥಿತಿಗೆ ಅನ್ವಯವಾಗುವಂತೆ ಪರಿಷ್ಕರಿಸಲಾಗಿರುವ ಹೊಸ ಸರಕು ಮತ್ತು ಸೇವಾ ತೆರಿಗೆ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


