ವಾಣಿಜ್ಯ

ಷರಿಯಾ ಬ್ಯಾಂಕಿಂಗ್ ಪ್ರಾರಂಭಿಸಲು ಗಡುವಿಲ್ಲ: ಆರ್ ಬಿಐ

ಭಾರತದಲ್ಲಿ ಷರಿಯಾ ಬ್ಯಾಂಕಿಂಗ್ ಅಥವಾ ಬಡ್ಡಿ ರಹಿತ ಬ್ಯಾಂಕಿಂಗ್ ನ್ನು ಪ್ರಾರಂಭಿಸಲು ಗಡುವು ನೀಡಲಾಗಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಹೇಳಿದೆ.

ಷರಿಯಾ ಬ್ಯಾಂಕಿಂಗ್ ಪ್ರಾರಂಭಿಸಲು ಗಡುವಿಲ್ಲ: ಆರ್ ಬಿಐ
Published On :
ನವದೆಹಲಿ: ಭಾರತದಲ್ಲಿ ಷರಿಯಾ ಬ್ಯಾಂಕಿಂಗ್ ಅಥವಾ ಬಡ್ಡಿ ರಹಿತ ಬ್ಯಾಂಕಿಂಗ್ ನ್ನು ಪ್ರಾರಂಭಿಸಲು ಗಡುವು ನೀಡಲಾಗಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಹೇಳಿದೆ. 
ಇಸ್ಲಾಮ್ ನಲ್ಲಿ ಬಡ್ಡಿ ತೆಗೆದುಕೊಳ್ಳುವುದನ್ನು ಅಪರಾಧ ಎಂದು ಪರಿಗಣಿಸಲಾಗಿದ್ದು, ಹಣಕಾಸು ವ್ಯವಸ್ಥೆಯಲ್ಲಿ ಬಡ್ಡಿ ರಹಿತ ಇಸ್ಲಾಮಿಕ್ ಅಥವಾ ಷರಿಯಾ ಬ್ಯಾಂಕಿಂಗ್ ಗೆ ಅವಕಾಶ ಇದೆ. ಈ ಹಿಂದೆಯೂ ಆರ್ ಬಿಐ ಸಾಂಪ್ರದಾಯಿಕ ಬ್ಯಾಂಕ್ ಗಳಲ್ಲೇ ಇಸ್ಲಾಮಿಕ್ ಬ್ಯಾಂಕಿಂಗ್ ಅಥವಾ ಷರಿಯಾ ಬ್ಯಾಂಕಿಂಗ್ ನ್ನು ಪ್ರಾರಂಭಿಸುವ ಪ್ರಸ್ತಾವನೆ ನೀಡಿತ್ತು. 
ಈಗ ಷರಿಯಾ ಬ್ಯಾಂಕಿಂಗ್ ಗೆ ಸಂಬಂಧಿಸಿದಂತೆ ಆರ್ ಟಿಐ ಅರ್ಜಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಆರ್ ಬಿಐ ಷರಿಯಾ ಬ್ಯಾಂಕಿಂಗ್ ಪ್ರಾರಂಭಿಸಲು ಗಡುವು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಭಾರತ ಸರ್ಕಾರದ ಸೂಚನೆಯ ಮೇರೆಗೆ ಆರ್ ಬಿಐ ರಚಿಸಿದ್ದ ಇಲಾಖೆಯ ಆಂತರಿಕ ತಂಡ ಷರಿಯಾ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಕಾನೂನು ತಾಂತ್ರಿಕ ಮತ್ತು ನಿಯಂತ್ರಣ ವಿಷಯಗಳ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿ ವರದಿ ನೀಡಿರುವುದಾಗಿ ಆರ್ ಟಿಐ ಪ್ರಶ್ನೆಗೆ ಆರ್ ಬಿಐ ಉತ್ತರ ನೀಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.