ಬೃಹತ್ ಠೇವಣಿ ಬಡ್ಡಿದರ ಕಡಿತಗೊಳಿಸಿದ ಎಸ್ ಬಿಐ!
ದೇಶದ ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಶೇ.1.9ರಷ್ಟು ಕಡಿತಗೊಳಿಸಿದ್ದು, ಈ ನೂತನ ದರಗಳ ನವೆಂಬರ್ 24ರಿಂದಲೇ ಜಾರಿಗೆ ಬಂದಿವೆ.

ನವದೆಹಲಿ: ದೇಶದ ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಶೇ.1.9ರಷ್ಟು ಕಡಿತಗೊಳಿಸಿದ್ದು, ಈ ನೂತನ ದರಗಳ ನವೆಂಬರ್ 24ರಿಂದಲೇ ಜಾರಿಗೆ ಬಂದಿವೆ.
ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು, 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಎಸ್ ಬಿಐಗೆ ಭಾರಿ ಪ್ರಮಾಣದಲ್ಲಿ ಠೇವಣಿ ಹರಿದು ಬರುತ್ತಿದ್ದು, ಇದೇ ಕಾರಣಕ್ಕೆ ಹಣದ ವೆಚ್ಚದಲ್ಲಿ ಭಾರಿ ಪ್ರಮಾಣದ ವ್ಯತ್ಯಾಸ ಕಂಡುಬರುತ್ತಿದೆ. ನೋಟು ನಿಷೇಧದ ಬಳಿಕ ಬ್ಯಾಂಕುಗಳಿಗೆ ಒಟ್ಟು 5.4 ಲಕ್ಷ ಕೋಟಿ ಠೇವಣಿ ಹರಿದುಬಂದಿದ್ದು, ಸ್ಟೇಟ್ ಬ್ಯಾಂಕ್ ಸಮೂಹವೊಂದಕ್ಕೇ 1.5ಲಕ್ಷ ಕೋಟಿ ರು. ಹಣ ಠೇವಣಿ ರೂಪದಲ್ಲ ಹರಿದುಬಂದಿದೆ. ಹೀಗಾಗಿ ಎಸ್ ಬಿಐ ತನ್ನ ಬೃಹತ್ ಠೇವಣಿ ಬಡ್ಡಿದರದಲ್ಲಿ ಶೇ.1.9ರಷ್ಟು ಕಡಿತಗೊಳಿಸಿದೆ ಎಂದು ತಿಳಿದುಬಂದಿದೆ.
ನವೆಂಬರ್ 8ರ ಬಳಿಕ ಅಂದರೆ ನವೆಂಬರ್ 10ರಿಂದ ನವೆಂಬರ್ 22ರವರೆಗಿನ ಅವಧಿಯಲ್ಲಿ ಎಸ್ ಬಿಐ 1 ಲಕ್ಷ ಕೋಟಿ ರು.ಠೇವಣಿ ಪಡೆದಿತ್ತು. ಇದರಲ್ಲಿ ಶೇ.75ರಷ್ಟು ಉಳಿತಾಯ ಖಾತೆಗೆ ಬಂದಿದ್ದು, ಉಳಿದದ್ದು ಚಾಲ್ತಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1 ಕೋಟಿ ರು.ಗಳಿಗಿಂತಲೂ ಮೇಲ್ಪಟ್ಟ ಠೇವಣಿಗಳಿಗೆ ಈ ನೂತನ ಬಡ್ಡಿದರ ಅನ್ವಯವಾಗಲಿದ್ದು, ಪರಿಷ್ಕರಿಸಿದ ಬಡ್ಡಿದರದ ಅನ್ವಯ ಪ್ರಸ್ತುತ ಈ ಠೇವಣಿಗಳಿಗೆ ಶೇ.3.85 ರಷ್ಟು ಬಡ್ಡಿದರ ನೀಡಲಾಗುತ್ತಿದೆ. ಈ ಹಿಂದೆ ಅಂದರೆ ನೋಟು ನಿಷೇಧಕ್ಕೂ ಮೊದಲು ಈ ವಿಭಾಗದ ಠೇವಣಿಗಳಿಗೆ ಶೇ.5.75ರಷ್ಟು ಬಡ್ಡಿದರ ನೀಡಲಾಗುತ್ತಿತ್ತು. ಇನ್ನು ಎಸ್ ಬಿಐನ ದೇಶೀಯ ಠೇವಣಿ17.68ಲಕ್ಷ ಕೋಟಿ ರು. ಇದ್ದು, ಇದರಲ್ಲಿ ಬೃಹತ್ ಠೇವಣಿ ಪ್ರಮಾಣ1.4ಲಕ್ಷ ಕೋಟಿ ರು. (ಶೇ.8ರಷ್ಟು) ಇದೆ.
ನೋಟು ನಿಷೇಧದಿಂದ ಆರ್ಥಿಕಾಭಿವೃದ್ಧಿ ಕಡಿತ ಹಾಗೂ ಹಣದುಬ್ಬರ ಎಂದ ತಜ್ಞರು
ಇದೇ ವೇಳೆ ಕೇಂದ್ರ ಸರ್ಕಾರದ ನೋಟು ನಿಷೇಧದ ಕ್ರಮದಿಂದಾಗಿ ದೇಶದ ಆರ್ಥಿಕಾಭಿವೃದ್ಧಿ ದರ ಕುಂಟಿತವಾಗುವುದಲ್ಲದೇ ಹಣದುಬ್ಬರ ಕೂಡ ಏರಿಕೆಯಾಗುತ್ತದೆ ಎಂದು ಆರ್ಥಿಕ ತಜ್ಞರಾದ ಪ್ರಂಜುಲ್ ಭಂಡಾರಿ ಅಭಿಪ್ರಾಯ ಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


