ದಿ ಗ್ರೇಟ್ ಫ್ಲಿಪ್ ಸ್ಟೋರಿ
ಆನ್ಲೈನ್ನಲ್ಲಿ ವಿವಿಧ ವಸ್ತುಗಳನ್ನು ಖರೀದಿಸುವವರಿಗೆ ಫ್ಲಿಪ್ಕಾರ್ಟ್ ಕ್ಲೋಸ್ಫ್ರೆಂಡ್ ಇದ್ದಹಾಗೆ...

ಆನ್ಲೈನ್ನಲ್ಲಿ ವಿವಿಧ ವಸ್ತುಗಳನ್ನು ಖರೀದಿಸುವವರಿಗೆ ಫ್ಲಿಪ್ಕಾರ್ಟ್ ಕ್ಲೋಸ್ಫ್ರೆಂಡ್ ಇದ್ದಹಾಗೆ. ಅದರ ಕೇಂದ್ರ ಕಚೇರಿ ಇರುವುದು ನಮ್ಮ ಬೆಂಗಳೂರಿನಲ್ಲಿ. ಫ್ಲಿಪ್ಕಾರ್ಟ್ ಈಗ ದೇಶದ ಇ- ಕಾಮರ್ಸ್ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದೆ. ಆನ್ಲೈನ್ ಖರೀದಿ ಸಂಸ್ಥೆ ಮೈನ್ ಟ್ರಾವನ್ನು (myntra.com) ಖರೀದಿ ಮಾಡಿದೆ. ಇದು ಫ್ಲಿಪ್ಕಾರ್ಟ್ಗೆ ಪ್ರತಿಸ್ಪರ್ಧಿಯಾಗಿದ್ದ ಕಂಪನಿ. ಬರೋಬ್ಬರಿ 2 ಸಾವಿರ ಕೋಟಿ ರು.ಗೆ ಇದನ್ನು ಖರೀದಿಸುವ ಮೂಲಕ ಫ್ಲಿಪ್ಕಾರ್ಟ್ ಅಚ್ಚರಿಯ ಅಲೆ ರವಾನಿಸಿದೆ.
ಎರಡೂ ಕಂಪನಿಗಳ ಆಸ್ತಿ ಈಗ 1.5 ಬಿಲಿಯನ್ ಡಾಲರ್ ಆಗಲಿದೆ. ಅಂದರೆ ರಿಲಯನ್ಸ್, ಫ್ಯೂಚರ್ ಗ್ರೂಪ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್ಗಳಂತೆ ದೊಡ್ಡ ಮಟ್ಟದ ಉದ್ದಿಮೆ ಸಮೂಹಕ್ಕೆ ಸಮಾನವಾಗಿರುವ ಉದ್ದಿಮೆಯಾಗಿ ಬದಲಾಗಲಿದೆ. ಅಂದರೆ, ವಾಣಿಜ್ಯ ವಹಿವಾಟಿನಲ್ಲಿ ಅದರಲ್ಲೂ ಇ- ಕಾಮರ್ಸ್ನಲ್ಲಿ ಬೆಂಗಳೂರು ಹೊಸ ಹೂಡಿಕೆ ಮತ್ತು ಪ್ರಮುಖ ವಹಿವಾಟಿನ ಕ್ಷೇತ್ರವಾಗಲಿದೆ ಎನ್ನುವುದು ನಿಸ್ಸಂಶಯ.
ಇಷ್ಟು ಮಾತ್ರವಲ್ಲದೆ, ಅಮೆರಿಕ ಮೂಲದ ಅಮೆಜಾನ್.ಕಾಂ ಹೊಂದಿರುವ ಒಟ್ಟು ಆಸ್ತಿಗೆ ಸಮವಾಗಿ ಎರಡೂ ಕಂಪನಿಗಳ ಒಟ್ಟು ಆಸ್ತಿ ಇರಲಿದೆ. ಅಮೆಜಾನ್ ಕೂಡ ದೇಶದ ಇ-ಕಾಮರ್ಸ್ ಕ್ಷೇತ್ರಕ್ಕೆ ಈಗ ಲಗ್ಗೆ ಹಾಕುತ್ತಿದೆ. ಜತೆಗೆ ಅದು ನೀಡಲಿರುವ ಸ್ಪರ್ಧೆಗೆ ಪ್ರಬಲ ಪ್ರತಿರೋಧವನ್ನು ಒಡ್ಡುವ ಸಾಧ್ಯೆಯೂ ಇದೆ.
ಇನ್ನೂ ಒಂದು ವಿಶೇಷ ಈ ಡೀಲ್ನಲ್ಲಿದೆ. ಇತ್ತೀಚೆಗೆ ಆನ್ಲೈನ್ ಬಸ್ ಬುಕ್ಕಿಂಗ್ ಸಂಸ್ಥೆ ರೆಡ್ಬಸ್.ಇನ್ ಅನ್ನು ಐಬಿಬೋ ಗ್ರೂಪ್ 100 ಮಿಲಿಯನ್ ಡಾಲರ್ಗೆ ಖರೀದಿಸಿತ್ತು. ಫ್ಲಿಪ್ಕಾರ್ಟ್ ಮತ್ತು ಮೈನ್ಟ್ರಾ ಒಪ್ಪಂದ ಅದನ್ನೂ ಮೀರಿಸಿದೆ.
ಇದರಿಂದ ಏನಾಗಲಿದೆ?
ಸಣ್ಣ ಪ್ರಮಾಣದ ಇ-ಕಾಮರ್ಸ್ ಕಂಪನಿಗೆ ದೊಡ್ಡ ಮಟ್ಟದಲ್ಲಿ ಜಾಹೀರಾತು ಮತ್ತು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ಪೂರೈಸಲು ಸಾಧ್ಯವಾಗಲಾರದು.
ಈ ರೀತಿಯ ವಿಲೀನ ಮತ್ತು ಖರೀದಿ (ಎಂ ಆ್ಯಂಡ್ ಎ ಯಿಂದ ಗ್ರಾಹಕರಿಗೂ ಅನುಕೂಲ ಹೇಗೆಂದರೆ ಈಗ ಫ್ಲಿಪ್ಕಾರ್ಟ್ ಮತ್ತು ಮೈನ್ಟ್ರಾದ ಗ್ರಾಹಕರು ತಮಗೆ ಬೇಕಾದ ವಸ್ತುಗಳ ಖರೀದಿಗೆ ಒಂದೇ ಕಂಪನಿಯನ್ನು ಸಂಪರ್ಕಿಸಬಹುದು.
ಮಾರುಕಟ್ಟೆಯಲ್ಲಿ ಪ್ರಬಲ ಬ್ರಾಂಡ್ ಆಗಿ ರೂಪಿತಗೊಳ್ಳುವುದರಿಂದ ಜಾಹೀರಾತುಗಳನ್ನು ಆಕರ್ಷಿಸಲೂ ಈ ನಿರ್ಧಾರ ನೆರವಾಗುತ್ತದೆ.
ಮಾರುಕಟ್ಟೆ ವಿಸ್ತರಣೆಗೆ ಹೊಸ ನಿರ್ಧಾರದಿಂದ ಅನುಕೂಲ. ಹೆಚ್ಚು ಕಂಪನಿಗಳ ವಸ್ತುಗಳನ್ನು ಮತ್ತು ಹೊಸ ಮಾದರಿಯ ವ್ಯಾಪಾರ ಶೈಲಿ ರೂಪಿಸಿಕೊಳ್ಳಲು ಫ್ಲಿಪ್ಕಾರ್ಟ್ ಮತ್ತು ಮೈನ್ಟ್ರಾಗೆ ಅನುಕೂಲವಾಗಲಿದೆ.
ಫ್ಯಾಷನ್, ಚಿನ್ನಾಭರಣಗಳು, ವಸ್ತ್ರೋದ್ಯಮ ಕ್ಷೇತ್ರದಿಂದ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಈ ನಿರ್ಧಾರ ಅನುಕೂಲ ಮಾಡಿಕೊಡಬಹುದು.
100 ಕೋಟಿ ಹೂಡಿಕೆ
ಮುಂದಿನ ದಿನಗಳಲ್ಲಿ ಫ್ಲಿಪ್ಕಾರ್ಟ್ ಫ್ಯಾಶನ್ ಬ್ಯುಸಿನೆಸ್ ಕ್ಷೇತ್ರದಲ್ಲಿ 100 ಕೋಟಿ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡಲಿದೆ.
ಆಡಳಿತ ಹೇಗಿರಲಿದೆ?
ಎರಡೂ ಕಂಪನಿಗಳು ವಿಲೀನವಾಗಿದ್ದರೂ ಎರಡೂ ಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸಲಿವೆ. ಮೈನ್ಟ್ರಾದ ಮುಖೇಶ್ ಬನ್ಸಲ್ ಎರಡೂ ಕಂಪನಿಗಳ ಫ್ಯಾಶನ್ ಡಿಸೈನಿಂಗ್ ವಿಭಾಗದ ಮುಖ್ಯಸ್ಥ, ಚೀಫ್ ಆಪರೇಟಿಂಗ್ ಆಫೀಸರ್ ಆಗಿ ಗಣೇಶ್ ಸುಬ್ರಹ್ಮಣ್ಯನ್.
ಮೈನ್ಟ್ರಾ ಹಿಸ್ಟರಿ
ಮುಖೇಶ್ ಬನ್ಸಲ್ ಮತ್ತು ಅಶುತೋಶ್ ಲವಾನಿಯಾ ಮೈನ್ಟಾ ಆನ್ಲೈನ್ ಖರೀದಿ ಸಂಸ್ಥೆಯ ಪ್ರವರ್ತಕರು. ಇದರ ಪ್ರಧಾನ ಕಚೇರಿ ಇರುವುದು ಕೂಡ ಬೆಂಗಳೂರಿನಲ್ಲೇ. 2007ರಲ್ಲಿ ಮೈನ್ಟ್ರಾವನ್ನು ಆರಂಭಿಸಲಾಯಿತು. ಹೊಸ ಮಾದರಿಯ ವಹಿವಾಟನ್ನು ಅದು ಪರಿಚಯಿಸಿತ್ತು. ವಿಶ್ವದ ಜನಪ್ರಿಯ ಕಂಪನಿಗಳ ವಸ್ತುಗಳು ಮೈನ್ಟ್ರಾದಲ್ಲಿ ಸಿಗುತ್ತಿದ್ದವು. ದೇಶದ ಸುಮಾರು 50 ಸಾವಿರ ವಿಧದ ಮತ್ತು ವಿದೇಶಗಳ 600 ಮಾದರಿಯ ವಸ್ತುಗಳನ್ನು ಮೈನ್ಟ್ರಾದಲ್ಲಿ ಖರೀದಿಸಲು ಅವಕಾಶವಿದೆ. 2013ರಲ್ಲಿ ಮೈನ್ಟ್ರಾ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಫಿಟಿಕಿಟ್ (Fitique) ಅನ್ನು ಖರೀದಿಸಿತ್ತು.
ನಿಧಿ ಸಂಗ್ರಹ
ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಅವರು ಫ್ಲಿಪ್ಕಾರ್ಟ್ ಅನ್ನು 2007ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಿದರು. ಸಮೀಕ್ಷೆ ಪ್ರಕಾರ ಫ್ಲಿಪ್ಕಾರ್ಟ್ ದೇಶದ ಟಾಪ್ 10 ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಒಂದು. ಅಂದಹಾಗೆ, ಅವರಿಬ್ಬರೂ ಅಮೆಜಾನ್.ಕಾಂನಲ್ಲಿ ಉದ್ಯೋಗಿಗಳಾಗಿದ್ದರು. ಅಂದಹಾಗೆ, ಅವರಿಬ್ಬರೂ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೇ ವಿದ್ಯಾರ್ಥಿಗಳು. ಕಳೆದವರ್ಷ ಫ್ಲಿಪ್ಕಾರ್ಟ್ ಖಾಸಗಿ ಹೂಡಿಕೆ ಸಂಸ್ಥೆಗಳಿಂದ 360 ಮಿಲಿಯನ್ ಅಮೆರಿಕನ್ ಡಾಲರ್ ನಿಧಿ ಸಂಗ್ರಹಿಸಿತ್ತು.
ಯಾರ ಪಾಲು ಎಷ್ಟು?
ದೇಶದ ಇ-ಕಾಮರ್ಸ್ ಕ್ಷೇತ್ರದಲ್ಲಿ ಫ್ಲಿಪ್ಕಾರ್ಟ್ ಹೊಂದಿದ್ದ ಮಾರುಕಟ್ಟೆ ಪಾಲು ಶೇ.4.9
ಮೈನ್ಟ್ರಾ ಹೊಂದಿದ್ದ ಪಾಲು ಶೇ.41.
ಅಮೆಜಾನ್ ಪಾಲು ಶೇ.1.6
ಇ-ಬೇ ಪಾಲು ಶೇ.1.2 (2013ನೇ ಸಾಲಿನ ಅಂಕಿ-ಅಂಶ)
ಖರೀದಿಗೆ ನೆರವು
ಎರಡೂ ಕಂಪನಿಗಳ ಒಪ್ಪಂದ ದೇಶದ ಇ-ಕಾಮರ್ಸ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯಲಿವೆ. ಎರಡು ಕಂಪನಿಗಳಿಗೆ ಲಾಭವಾಗುವುದರ ಜತೆಗೆ ಗ್ರಾಹಕರಿಗೂ ಉತ್ತಮ ರೀತಿಯ ವಸ್ತುಗಳ ಖರೀದಿಗೆ ನೆರವಾಗಲಿದೆ.
- ಜಯದೇವ ಪ್ರಸಾದ ಮೊಳೆಯಾರ, ಆರ್ಥಿಕ ವಿಶ್ಲೇಷಕ
ಸದಾಶಿವ ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


