ವಾಣಿಜ್ಯ

ಸನ್‌ರಿಚ್ ಬ್ರಾಂಡ್‌ಗೆ ನಟಿ ಪ್ರಿಯಾಂಕಾ ರಾಯಭಾರಿ

ರುಚಿ ಸೋಯಾ ಇಂಡಸ್ಟ್ರೀಸ್ ತನ್ನ ಸನ್‌ರಿಚ್ ಬ್ರಾಂಡ್‌ಗೆ ನಟಿ ಪ್ರಿಯಾಂಕಾ ಉಪೇಂದ್ರ ಅವರನ್ನು ರಾಯಭಾರಿಯನ್ನಾಗಿ ನಿಯೋಜಿಸಿದೆ.

ಸನ್‌ರಿಚ್ ಬ್ರಾಂಡ್‌ಗೆ ನಟಿ ಪ್ರಿಯಾಂಕಾ ರಾಯಭಾರಿ
Published On :

ರುಚಿ ಸೋಯಾ ಇಂಡಸ್ಟ್ರೀಸ್ ತನ್ನ ಸನ್‌ರಿಚ್ ಬ್ರಾಂಡ್‌ಗೆ ನಟಿ ಪ್ರಿಯಾಂಕಾ ಉಪೇಂದ್ರ ಅವರನ್ನು ರಾಯಭಾರಿಯನ್ನಾಗಿ ನಿಯೋಜಿಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಅಡುಗೆ ತೈಲಗಳಲ್ಲಿ ಸನ್‌ರಿಚ್ ಕೂಡ ಒಂದಾಗಿದ್ದು  ಏಳು ಹಂತದ ಸಂಸ್ಕರಣೆಯಿಂದ ತಯಾರಿಸಿದ ಈ ನೂತನ ಅಡುಗೆ ತೈಲ ಶುದ್ಧ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ ಎಂದು ಪ್ರಿಯಾಂಕಾ ಉಪೇಂದ್ರ ಅಭಿಪ್ರಾಯಪಟ್ಟರು. ಸನ್‌ರಿಚ್‌ನ ನೂತನ ಸಂಸ್ಕರಿತ ಸೂರ್ಯಕಾಂತಿ ತೈಲ ಸೋಯಾದ ಉತ್ಪನ್ನವಾಗಿದ್ದು, 500 ಎಂಎಲ್‌ನಿಂದ 15 ಲೀ. ಟಿನ್‌ಗಳಲ್ಲಿ ಲಭ್ಯವಿದೆ. ಚಿಲ್ಲರೆ ವ್ಯಾಪಾರದ ಅಂಗಡಿಗಳು, ಸೂಪರ್ ಮಾರ್ಕೆಟ್ ಮತ್ತು ಸ್ವತಂತ್ರ ಸ್ವ-ಸಹಾಯ ಅಂಗಡಿಗಳಲ್ಲಿಯೂ ಲಭ್ಯವಿದೆ ಎಂದು ಸೋಯಾ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ಅಧಿಕಾರಿ ಸತೇಂದ್ರ ಅಗರ್‌ವಾಲ್ ಹೇಳಿದ್ದಾರೆ.

ಸಾಮರ್ಥ್ಯಾಭಿವೃದ್ಧಿ ತರಬೇತಿ
ವಿರ್ದ್ಯ್ಙಾಗಳಿಗೆ ತರಬೇತಿ ಹಾಗೂ ಉದ್ಯೋಗಾವಕಾಶ ನೀಡುವ  ಸ್ಪೆನ್ಸರ್ ರೀಟೇಲ್, ಬ್ಲೂಚಿಪ್ ಕಾರ್ಪೊರೇಟ್ ಇನ್‌ವೆಸ್ಟ್‌ಮೆಂಟ್ ಸೆಂಟರ್ ಮತ್ತು ಅಕ್‌ಜೋನೊಬಲ್ ಇಂಡಿಯಾ ಜತೆ ಐಸಿಐಸಿಐ ಕೌಶಲ್ಯಾಭಿವೃದ್ಧಿ ಅಕಾಡೆಮಿ ಒಪ್ಪಂದ ಮಾಡಿಕೊಂಡಿತು.ಐಸಿಐಸಿಐ ಫೌಂಡೇಷನ್‌ನ ಅಂಗಸಂಸ್ಥೆಯಾದ ಐಸಿಐಸಿಐ ಕೌಶಲ್ಯಾಭಿವೃದ್ಧಿ ಅಕಾಡೆಮಿ ಪ್ರಸ್ತುತ ಎಂಟು ವಿವಿಧ ಸಾಮರ್ಥ್ಯಾಭಿವೃದ್ಧಿ ತರಬೇತಿಗಳಾದ ಎಸಿ ರಿಪೇರಿ, ಪಂಪ್ ಹಾಗೂ ಮೋಟಾರು ರಿಪೇರಿ, ವೆಬ್ ಡಿಸೈನಿಂಗ್ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ಹಾಗೂ ಉದ್ಯೋಗಾವಕಾಶ ನೀಡುತ್ತಾ ಬಂದಿರುವುದಾಗಿ ಸಂಸ್ಥೆ ತಿಳಿಸಿದೆ.

'ಮಿರಕಲ್‌' ಒಳಉಡುಪು
ಆನ್‌ಲೈನ್ ಮಾರುಕಟ್ಟೆಯಲ್ಲಿ ಮಹಿಳೆಯರ ಉಡುಪಿಗೆ ಹೆಸರಾದ ಝಿವಾಮೆ.ಕಾಮ್ ನೂತನವಾಗಿ ಅಮೆರಿಕಾದ ಖ್ಯಾತ 'ಅಮೆರಿಕನ್ ಬ್ರಾಂಡ್ ಮಿರಕಲ್‌ಸೂಟ್‌' ಒಳಉಡುಪನ್ನು ಭಾರತಕ್ಕೆ ಪರಿಚಯಿಸಿದೆ. ತನ್ನದೇ ಪೇಟೆಂಟ್ ಹೊಂದಿರುವ 'ಮಿರಕಲ್‌' ಶೇಪ್ ವೇರ್ ಒಳಉಡುಪುಗಳು ಸಿಲಿಕಾನ್‌ನಿಂದ ಸಿದ್ಧಪಡಿಸಿದ್ದು  1995ರಿಂದ ಆರಂಭವಾಗುತ್ತದೆ.

ನೀರು ಶುದ್ಧೀಕರಣ ಸಾಧನ
ಅಡುಗೆ ಉಪಕರಣಗಳಿಗೆ ಹೆಸರಾದ ಟಿಟಿಕೆ ಪ್ರೆಸ್ಟೀಜ್ ಸಂಸ್ಥೆ ನೂತನವಾಗಿ ತನ್ನ ಮೊದಲ ನೀರು ಶುದ್ಧೀಕರಣ ಯಂತ್ರ (ವಾಟರ್ ಪ್ಯೂರಿಫೈಯರ್) ಬಿಡುಗಡೆಗೊಳಿಸಿದೆ. ಜನಪ್ರಿಯ ಸ್ವಿಸ್ ಸಂಸ್ಥೆಯಾದ ಲೈಫ್‌ಸ್ಟ್ರಾ ಎಸ್‌ಎ ಪಾಲುದಾರಿಕೆಯೊಂದಿಗೆ ಪ್ರೆಸ್ಟೀಜ್ ಸಂಸ್ಥೆ ವಿದ್ಯುತ್ ರಹಿತ ನೀರು ಶುದ್ಧೀಕರಣ ಯಂತ್ರವನ್ನು ಪ್ರಸ್ತುತಪಡಿಸುತ್ತಿದೆ. ಹಲವಾರು ವಿಶೇಷಗಳನ್ನು ಹೊಂದಿರುವ ಈ ಯಂತ್ರ ಶೇ.99.99ರಷ್ಟು ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳನ್ನು ನಿರ್ಮೂಲನೆ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ.

'ಟಾಲೆಂಟ್ ಸ್ಪ್ರಿಂಟ್‌' ತರಬೇತಿ ಕೇಂದ್ರ
ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ವಿಷಯದಲ್ಲಿ ತರಬೇತಿ ನೀಡುತ್ತಾ ಬಂದಿರುವ 'ಟಾಲೆಂಟ್ ಸ್ಪ್ರಿಂಟ್‌' ತರಬೇತಿ ಸಂಸ್ಥೆ ಬೆಂಗಳೂರಿನಲ್ಲಿ ನೂತನವಾಗಿ ತರಬೇತಿ ಕೇಂದ್ರ ಆರಂಭಿಸಿದೆ. ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅರಸುವ ಪದವೀಧರರಿಗೆ 24/7 ತರಬೇತಿ ನೀಡುವ ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದು ಕೌಶಲ್ಯ ಮತ್ತು ಸಂವಹನ ಕಲೆಯನ್ನು ಹೇಳಿಕೊಡಲಾಗುತ್ತದೆ. ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲೂ 'ಟಾಲೆಂಟ್ ಸ್ಪ್ರಿಂಟ್‌' ತರಬೇತಿ ಕೇಂದ್ರ ಹೊಂದಿದ್ದು, ದೇಶಾದ್ಯಂತ 200 ಸಂಸ್ಥೆಗಳ ಬೃಹತ್ ಜಾಲದೊಂದಿಗೆ 35 ಸಾವಿರ ಮಂದಿಗೆ ಉದ್ಯೋಗ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಡಿಟುಎಚ್ ಪರಿವಾರಕ್ಕೆ ಪರಿಣಿತ ಚೋಪ್ರಾ
ವಿಡಿಯೋಕಾನ್ ಡಿಟುಎಚ್ ಸಂಸ್ಥೆ ನೂತನ ರಾಯಭಾರಿಯನ್ನಾಗಿ ಖ್ಯಾತ ಬಾಲಿವುಡ್ ನಟಿ ಪರಿಣಿತ ಚೋಪ್ರಾ ಅವರನ್ನು  ನಿಯೋಜಿಸಿದೆ. ಡಿಟುಎಚ್ ಪರಿವಾರಕ್ಕೆ ಪರಿಣಿತ ಚೋಪ್ರಾ ಅವರನ್ನು ಪರಿಚಯಿಸಿದ್ದು ಮುಂದಿನ ದಿನದಲ್ಲಿ ಮತ್ತಷ್ಟು ಯಶಸ್ಸು ಕಾಣಲಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥ ಅನಿಲ್ ಖೇರಾ ಸಂತಸ ವ್ಯಕ್ತಪಡಿಸಿದರು. ವಿಡಿಯೋಕಾನ್ ಡಿಟುಎಚ್‌ನಲ್ಲಿ 500ಕ್ಕೂ ಹೆಚ್ಚು ಚಾನಲ್ ಪೂರೈಸುವ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪರ್ಕ ನೀಡಿ ಗ್ರಾಹಕರ ವಿಶ್ವಾಸಾರ್ಹತೆ ಗಳಿಸುವಲ್ಲಿ ಯಶಸ್ವಿ ಆಗಿರುವುದಾಗಿ ಸಂಸ್ಥೆ ಪ್ರಕಟಣೆ ತಿಳಿಸಿದೆ.

ಹೊಲಿಗೆ ಕ್ಷೇತ್ರದಲ್ಲಿ ಸಾಧನೆ: ಶಾಲಿನಿಗೆ ಪ್ರಶಸ್ತಿ

ಉಷಾ ಇಂಟರ್ ನ್ಯಾಷನಲ್ ಸಂಸ್ಥೆ ಹೊಲಿಗೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಲಿನಿ ಅವರಿಗೆ ಬೆಸ್ಟ್ ಗಾರ್ಮೆಂಟ್ ಕನ್ಸ್‌ಟ್ರಕ್ಷನ್ ಪ್ರಶಸ್ತಿ ನೀಡಿ ಗೌರವಿಸಿತು. ಉಪಯುಕ್ತ ಹಾಗೂ ನವೀನ ಮಾದರಿಯ ಹೊಲಿಗೆ ಯಂತ್ರ ಪರಿಚಯಿಸುವ ಮೂಲಕ ಅನೇಕರಿಗೆ ಉಷಾ ಸಂಸ್ಥೆಯ ಯಂತ್ರಗಳು ಸಹಕಾರಿ ಆಗಿದೆ ಎಂದರು.
ಜಪಾನ್ ದೇಶದ ತಂತ್ರಜ್ಞಾನ ಬಳಸಿ ರೊಬೊಟಿಕ್ ಮತ್ತು ಕಂಪ್ಯೂಟರ್ ಆಧಾರಿತ ಸಿಡಿ ಮತ್ತು ಯುಎಸ್‌ಬಿ ಬಳಸಿ ಹೊಲಿಗೆ ಹಾಕುವ ಯಂತ್ರ ಉಷಾ ಸಂಸ್ಥೆ ಸಿದ್ಧಪಡಿಸಿದೆ. ಚೀನಾ ಹಾಗೂ ಶ್ರೀಲಂಕಾ ದೇಶಗಳಲ್ಲಿ ಉಷಾ ತನ್ನ ಕಚೇರಿ ಹೊಂದಿದ್ದು 30ಕ್ಕೂ ಹೆಚ್ಚು ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಹಾಗೂ ಮಾರಾಟ ಮಾಡುತ್ತಿರುವುದಾಗಿ ಸಂಸ್ಥೆ ತನ್ನ ಅಂಕಿಅಂಶ ಪ್ರಕಟಿಸಿತು.

ಬ್ಲೂಮ್ ಮೊಬೈಲ್ ಭಾರತೀಯ ಮಾರುಕಟ್ಟೆಗೆ
ಬ್ಯಾಂಡ್ ಪ್ರೈ. ಲಿ. ಖ್ಯಾತಿಯ ಬ್ಲೂಮ್ ಮೊಬೈಲ್ ಭಾರತೀಯ ಮಾರುಕಟ್ಟೆಗೆ ಮತ್ತೊಮ್ಮೆ ಪದಾರ್ಪಣೆ ಮಾಡಿದೆ. ಎಂಎಸ್‌ಆರ್ ಟೆಲಿಕಾಮ್ ಸಂಸ್ಥೆ ಬ್ಲೂಮ್ ಮೊಬೈಲ್ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ಸಂಸ್ಥೆಯ ಮುಖ್ಯಸ್ಥ ಮನೀಷ್ ಜೈನ್ ತಿಳಿಸಿದ್ದಾರೆ. ಇನ್ನೊಂದು ವರ್ಷದಲ್ಲಿ 26 ಮಾದರಿಯ ಮೊಬೈಲ್ ಪರಿಚಯಿಸುವ ಮೂಲಕ 250 ಕೋಟಿ ವಹಿವಾಟು ನಡೆಸುವ ಗುರಿ ಹೊಂದಿರುವುದಾಗಿ ಮನೀಷ್ ಜೈನ್ ತಿಳಿಸಿದರು. ಮುಂದಿನ ತ್ರೈಮಾಸಿಕದಲ್ಲಿ 6 ಮಾದರಿಯ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಲಾಗುತ್ತದೆ. ಯುವಕರನ್ನು ಗಮನದಲ್ಲಿಟ್ಟುಕೊಂಡು ಅವರ ನಿರೀಕ್ಷೆಗೆ ತಕ್ಕಂತೆ ಮೊಬೈಲ್ ವಿನ್ಯಾಸಗೊಳಿಸುವುದಾಗಿ ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.